More

    ಕುತೂಹಲ ಹೆಚ್ಚಿಸಿತು ಬಾಂದಳದ ಆ ಬೆಳ್ಳಿ ಬೆಳಕು…!

    ಭೂಮಿ ಹೊರತುಪಡಿಸಿ ಅನ್ಯಗ್ರಹದಲ್ಲಿ ಜೀವಿಗಳಿವೆಯೆ? ಏಲಿಯನ್ ಗಳ ಅಸ್ತಿತ್ವ ನಿಜವೆ? ಇಂತಹ ಚರ್ಚೆ ಇಂದು ನಿನ್ನೆಯದಲ್ಲ. ಆಗಾಗ ಆಕಾಶದಲ್ಲಿ ಕಾಣುವ ಅಪರಿಚಿತ ವಸ್ತುಗಳು ಇಂತಹ ಚರ್ಚೆಗೆ ಮತ್ತಷ್ಟು ಬಲ ನೀಡುತ್ತವೆ. ಅಂಥದೇ ಒಂದು ಘಟನೆ ಈಗ ನಡೆದಿದ್ದು, ಮತ್ತೆ ಅನ್ಯಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ಕುತೂಹಲ ಹಾಗೂ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
    ಆಕಾಶದಲ್ಲಿ ಹಾದು ಹೋಗುತ್ತಿರುವ ಅಪರಿಚಿತ ವಸ್ತುವನ್ನು ಡೆವೊನ್‌ನ ಟೊರ್ಕ್ವೇನಲ್ಲಿರುವ ಕುಟುಂಬವೊಂದು ತಮ್ಮ ಮನೆಯ ತೋಟದಿಂದ ಚಿತ್ರೀಕರಿಸಿದೆ. ಈ ಅಪರಿಚಿತ ವಸ್ತು ವಿಶ್ವದಾದ್ಯಂತದ ಅನ್​ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ (ಯುಎಫ್​ಒ) ಕುರಿತ ಉತ್ಸಾಹಿಗಳನ್ನು ದಿಗ್ಭ್ರಮೆಗೊಳಿಸಿದೆ.

    ಇದನ್ನೂ ಓದಿ:  ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಎಂದ ಕೇಂದ್ರ

    ”ನಾನು ಇದೀಗ ನೋಡಿದ್ದು ಯುಎಫ್‌ಒ ನೇ?” ಎಂಬ ಶೀರ್ಷಿಕೆಯೊಂದಿಗೆ ಈ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
    ಈ ದೃಶ್ಯಾವಳಿಯಲ್ಲಿ ರಾತ್ರಿ ಆಕಾಶದಲ್ಲಿ ಚಲಿಸುವ ಸಣ್ಣ ಬಿಳಿ ಆಕಾರವೊಂದು ಪ್ರಜ್ವಲಿಸುವ ಮತ್ತು ಸ್ಥಿರವಾದ ವೇಗದಲ್ಲಿ ಚಲಿಸುತ್ತಿರುವಂತೆ ಕಂಡುಬರುತ್ತದೆ.ಚಲಿಸುವ ವಸ್ತುವಿನ ಮೇಲೆ ಕುತೂಹಲದಿಂದ,ಕ್ಯಾಮೆರಾ ಜೂಮ್ ಮಾಡಿದಾಗ, ಅದರ ಅಸಾಮಾನ್ಯ ಆಕಾರ ಕಂಡುಬರುತ್ತದೆ.
    ಘಟನೆಯ ಸಂಕ್ಷಿಪ್ತ ವಿವರಣೆಯೊಂದಿಗೆ ದೃಶ್ಯಾವಳಿಯನ್ನು ‘ಸ್ಪಾಟೆಡ್ ಟೊರ್ಕ್ವೇ’ ಎಂಬ ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿದೆ.
    ನಿರೀಕ್ಷೆಯಂತೆ ಈ ದೃಶ್ಯಾವಳಿ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಗುರುತಿಸಲಾಗದ ವಸ್ತು ಯಾವುದು ಎಂದು ನೂರಾರು ಜನರು ಚರ್ಚೆಯಲ್ಲಿ ಮಗ್ನರಾಗಿದ್ದಾರೆ.
    ಕೆಲವರು ಇದನ್ನು ಅನ್​​ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಎಂದರೆ ಮತ್ತೆ ಕೆಲವರು ಇದನ್ನು ಉಪಗ್ರಹ ಅಥವಾ ಹೆಲಿಕಾಪ್ಟರ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    32 ವರ್ಷದವರೂ ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ನೇಮಕಾತಿಗೆ ವಯೋಮಿತಿ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts