More

    ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಎಂದ ಕೇಂದ್ರ

    ನವದೆಹಲಿ: ಗರ್ಭಿಣಿ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ.
    ಈ ಕುರಿತು ಮಾಹಿತಿ ನೀಡಿ, ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಅನುಸರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
    “ಈಗಾಗಲೇ ಮಾತೃತ್ವ ರಜೆಯಲ್ಲಿಲ್ಲದ ಗರ್ಭಿಣಿ ಉದ್ಯೋಗಿಗಳಿಗೆ ಮತ್ತು ಅಂಗವಿಕಲರಿಗೂ ಇದೇ ರೀತಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುವುದು” ಎಂದು ಸಚಿವ ಸಿಂಗ್ ಸ್ಪಷ್ಟಪಡಿಸಿದ್ದಾರೆ.
    ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

    ಇದನ್ನೂ ಓದಿ: ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ

    ಅನಗತ್ಯ ಜನದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆಗಮನ ಮತ್ತು ನಿರ್ಗಮನದ ಸಮಯವನ್ನು ಕಟ್ಟುನಿಟ್ಟಾಗಿ ಗಮನಿಸುವುದು ಅಗತ್ಯವಾಗಿದೆ. ಎಲ್ಲ ವಿಭಾಗದ ಮುಖ್ಯಸ್ಥರಿಗೆ ಮೂರು ಅವಧಿಯ ಕೆಲಸದ ಸಮಯವನ್ನು ನಿಗದಿಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
    ಇವು ಕ್ರಮವಾಗಿ ಬೆಳಿಗ್ಗೆ 9 ರಿಂದ ಸಂಜೆ 5, ಬೆಳಿಗ್ಗೆ 9:30 ರಿಂದ ಸಂಜೆ 6 ಮತ್ತು ಬೆಳಿಗ್ಗೆ 10 ರಿಂದ ಸಂಜೆ 6:30 ರವರೆಗೆ ಇರಲಿದೆ. ‘

    ಬಳಕೆದಾರರ ಸುರಕ್ಷತೆಗೆ ಫೇಸ್‌ಬುಕ್​ ತಂದಿದೆ ಹೊಸ ಫೀಚರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts