More

    ಶಿವಪುರಿ ಅರಣ್ಯದಲ್ಲಿ ಭಾರೀ ಸಂಖ್ಯೆಯ ಹಸುಗಳ ಮೃತದೇಹಗಳು ಪತ್ತೆ; ಮೌನ ವಹಿಸಿದ ಅರಣ್ಯ ಇಲಾಖೆ

    ಮಧ್ಯಪ್ರದೇಶ: ಶಿವಪುರಿ ಜಿಲ್ಲೆಯ ಕರೈರಾ ತಹಸಿಲ್‌ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಕಾಡಿನ ಮಧ್ಯೆ ಅಪಾರ ಸಂಖ್ಯೆಯ ಹಸುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಸುಮಾರು 200 ಹಸುಗಳು ಸತ್ತಿವೆ ಎಂದು ಹೇಳಲಾಗುತ್ತದೆ. ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 27 ರಲ್ಲಿ (ಕರೈರಾ ತಹಸಿಲ್ ಮೂಲಕ ಹಾದುಹೋಗುವ ಸಲಾರ್‌ಪುರ ರಸ್ತೆಯಲ್ಲಿ) ಕೇವಲ 500-600 ಮೀಟರ್ ದೂರದಲ್ಲಿ ಹಸುಗಳ ಮೃತದೇಹ ವಶಪಡಿಸಿಕೊಳ್ಳಲಾಗಿದೆ.

    ಪೊಲೀಸರು ಹೇಳಿದ್ದೇನು?
    ಈ ಬಗ್ಗೆ ಪೊಲೀಸ್ ಠಾಣೆ ಪ್ರಭಾರಿ ಸುರೇಶ್ ಶರ್ಮಾ ಅವರು ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಹಸುಗಳ ಸಾವಿಗೆ ಕಾರಣವಾಗುವ ಯಾವುದೇ ಅಂಶ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಮೌನ ವಹಿಸಿದೆ.

    ಈ ವೇಳೆ ಆಡಳಿತಾಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳುತ್ತಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಹಸುಗಳ ಮೃತದೇಹ ಕಾಡಿಗೆ ಹೇಗೆ ತೆರಳಿದವು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಭಾಗದಲ್ಲಿ ಜನರು ಸತ್ತ ಪ್ರಾಣಿಗಳನ್ನು ಎಸೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿರುವ ಗೋಶಾಲೆಗಳಲ್ಲಿ ಸಾವಿಗೀಡಾದ ನಂತರ ಜಾನುವಾರುಗಳನ್ನು ಇಲ್ಲಿಯೇ ಬಿಸಾಡಿರುವುದು ಮತ್ತೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಮಾತನಾಡಲು ಸಿದ್ಧರಿಲ್ಲ ಜನರು
    ಸದ್ಯ ಸುತ್ತಮುತ್ತಲಿನವರು ಈ ವಿಚಾರದಲ್ಲಿ ಏನನ್ನೂ ಹೇಳದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ, ಈ ವಿಷಯವನ್ನು ತನಿಖೆ ಮಾಡುವುದು ಅವಶ್ಯಕ, ಆದರೆ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಹಸುಗಳು ಸತ್ತಿರುವುದು ಖಂಡಿತವಾಗಿಯೂ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಮತ್ತು ಈ ವಿಷಯದಲ್ಲಿ ಗಂಭೀರ ಮತ್ತು ವಿವರವಾದ ತನಿಖೆಯ ಅಗತ್ಯವಿದೆ.

    ಕೋವಿಡ್‌ನಿಂದ ಚೇತರಿಸಿಕೊಂಡ ಭಾರತೀಯರಲ್ಲಿ ಶ್ವಾಸಕೋಶದ ಹಾನಿ ಹೆಚ್ಚು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts