More

    ರಾಮದಾಸ್ ವಸತಿ ಯೋಜನೆಗೆ ಕೊಕ್

    ಮೈಸೂರು: ಸೂಯೇಜ್ ಾರ್ಮ್ ತ್ಯಾಜ್ಯ ವಿಲೇವಾರಿ ಯೋಜನೆ ವಿಚಾರವಾಗಿ ಶಾಸಕ ಎಸ್.ಎ.ರಾಮದಾಸ್-ಸಂಸದ ಪ್ರತಾಪ್ ಸಿಂಹ ನಡುವೆ ಜಟಾಪಟಿ ನಡೆದಿತ್ತು. ಇದೀಗ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಸಿದಂತೆ ರಾಮದಾಸ್ ರೂಪಿಸಿದ ಹೊಸ ವಸತಿ ಯೋಜನೆ ಕೈ ಬಿಟ್ಟು ಹಳೆಯ ಯೋಜನೆ ಜಾರಿಗೆ ಸಂಸದ ಪ್ರತಾಪ್ ಸಿಂಹ ವಸತಿ ಇಲಾಖೆ ಅಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


    ರಾಮದಾಸ್ ನಿರ್ದೇಶನ ಪ್ರಕಾರ ರೂಪಿಸಿದ ಯೋಜನೆ ಕುರಿತು ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರತಾಪ್ ಸಿಂಹ ಅಸಮಾಧಾನ ಹೊರ ಹಾಕಿದರು.
    ವಸತಿ ಯೋಜನೆ ರೂಪಿಸಿ ಎರಡೂವರೆ ವರ್ಷಗಳು ಕಳೆದರೂ ಇನ್ನೂ ಬಡವರಿಗೆ ವಸತಿ ನೀಡಲು ಸಾಧ್ಯವಾಗಲಿಲ್ಲ. ಈ ಹಿಂದೆ ಜಿ ಪ್ಲಸ್-3 ಮನೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ, ಇದೀಗ ಜಿ ಪ್ಲಸ್-9 ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.


    ‘ಜಿ ಪ್ಲಸ್-3 ಮನೆಗಳ ಬದಲು ಜಿ ಪ್ಲಸ್-9 ಮನೆಗಳ ನಿರ್ಮಾಣ ಮಾಡುವಂತೆ ಶಾಸಕರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಯೋಜನೆ ಬದಲಾಯಿಸಲಾಗಿದೆ’ ಎಂದು ಅಕಾರಿಗಳು ಸ್ಪಷ್ಟನೆ ನೀಡಿದರು. ಜಿ ಪ್ಲಸ್-3 ಮನೆಗಳ ನಿರ್ಮಾಣಕ್ಕೆ 4.9 ಕೋಟಿ ರೂ. ಸಾಕಾಗುತ್ತದೆ. ಆದರೆ, ಜಿ ಪ್ಲಸ್-9 ಮನೆಗಳ ನಿರ್ಮಾಣಕ್ಕೆ 18 ಕೋಟಿ ರೂ.ಅವಶ್ಯಕತೆ ಇದೆ. ಅಷ್ಟೊಂದು ದೊಡ್ಡ ಮೊತ್ತವನ್ನು ಎಲ್ಲಿಂದ ತರುತ್ತೀರಾ? ಬಹುಮಹಡಿ ಕಟ್ಟಡವನ್ನು ಜನರು ಹತ್ತಿ ಇಳಿಯಲು ಸಾಧ್ಯವೇ? ಲ್‌ಟಿ ಹಾಕಿದರೆ ಅದರ ನಿರ್ವಹಣೆ ಮಾಡಲು ಬಡವರಿಂದ ಸಾಧ್ಯವೇ ಎಂದು ಸಂಸದರು ಅಸಮಾಧಾನಗೊಂಡು ಪ್ರಶ್ನಿಸಿದರು.


    ಶಾಸಕರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಅದು ಅನುಷ್ಠಾನ ಸಾಧ್ಯವೇ ಎಂಬ ಬಗ್ಗೆ ಅಕಾರಿಗಳು ಚಿಂತನೆ ನಡೆಸ ಬೇಕು. ಹೀಗಾಗಿ ಈ ಹಿಂದೆ ರೂಪಿಸಿದ ಯೋಜನೆ ಪ್ರಕಾರ ಜಿ ಪ್ಲಸ್-3 ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದ ಅವರು, ಅಕಾರಿಗಳು ಪ್ರಾಮಾಣಿಕರಾಗಿ ಇರಬೇಕು. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ. ನೀವು ಭ್ರಷ್ಟರಾಗಿದ್ದರೆ ಮಾತ್ರ ಹೆದರಬೇಕಷ್ಟೆ. ಕೇವಲ ರಾಜಕೀಯ ಕಾರಣಕ್ಕೆ ಕಾಮಗಾರಿ ಬದಲಾಯಿಸುವುದು ಸರಿಯಲ್ಲ. ನಗರದಲ್ಲಿ ಜಿ ಪ್ಲಸ್ 9 ಮನೆಗಳು ನಿರ್ಮಾಣಗೊಂಡರೆ ನರ್ಮ್ ಮನೆಗಳ ರೀತಿಯಲ್ಲಿ ಹಳ್ಳ ಹಿಡಿಯುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.


    ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳು ಸರಿಯಾಗಿ ಹಂಚಿಕೆಯಾಗಿಲ್ಲ. ಒಂದೇ ಕುಟುಂಬದ ಹಲವರಿಗೆ ಮನೆಗಳು ಹಂಚಿಕೆಯಾಗಿದ್ದು, ಅವರನ್ನು ಗುರುತಿಸಿ ಕೂಡಲೇ ತೆರವುಗೊಳಿಸಿ ಅರ್ಹರಿಗೆ ಹಂಚಿಕೆ ಮಾಡಬೇಕು. ಮನೆಗಳ ಹಂಚಿಕೆ ಸಂದರ್ಭದಲ್ಲಿ ಅಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದು, ಪ್ರಭಾವಿಗಳಿಗೆ ಕೆಳ ಭಾಗದಲ್ಲಿ ಮನೆಗಳನ್ನು ನೀಡಲಾಗಿದೆ. ಮನೆಗಳ ಹಂಚಿಕೆಯನ್ನು ಗೌಪ್ಯವಾಗಿ ನಡೆಸಲು ಅವಕಾಶವಿಲ್ಲ. ಜನರ ಮುಂದೆ ಬಹಿರಂಗವಾಗಿ ಹಂಚಿಕೆ ಮಾಡಬೇಕೆಂದು ನಿರ್ದೇಶನ ನೀಡಿದರು.


    ಕೇಂದ್ರ ಪುರಸ್ಕೃತ ಯೋಜನೆಗಳ ಉದ್ಘಾಟನಾ ಸಮಾರಂಭಕ್ಕೆ ಸಂಸದರನ್ನು ಉದ್ಘಾಟಕರಾಗಿ ಆಹ್ವಾನಿಸಬೇಕು. ಆಯಾ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸಬೇಕು. ಆದರೆ, ಈ ನಿಯಮ ಉಲ್ಲಂಘನೆಯಾಗುತ್ತಿದ್ದು, ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕೆಂದು ಅಕಾರಿಗಳಿಗೆ ನಿರ್ದೇಶನ ನೀಡಿದರು.


    ಜಿಲ್ಲೆಯ ಪ್ರತಿಯೊಂದು ಮನೆ ಹಾಗೂ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಸೆಸ್ಕ್ ಅಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.


    ಸಭೆಯಲ್ಲಿ ಶಾಸಕರಾದ ಎಚ್.ಪಿ.ಮಂಜುನಾಥ್, ಹರ್ಷವರ್ಧನ್, ಜಿಲ್ಲಾಕಾರಿ ಅಭಿರಾಮ್ ಜಿ.ಶಂಕರ್, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇತರರಿದ್ದರು.

    ಪಾಲಿಕೆ ಸದಸ್ಯರ ಹಸ್ತಕ್ಷೇಪ: ನಗರದಲ್ಲಿ ಸೆಸ್ಕ್ ಕೈಗೊಂಡಿರುವ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಕೆಲವು ಪಾಲಿಕೆ ಸದಸ್ಯರು ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ತಪ್ಪುಗಳಾಗಿದ್ದರೆ ಪ್ರಶ್ನಿಸಲಿ. ಆದರೆ, ವಿನಾಕಾರಣ ಕೆಲವರು ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಅಲ್ಲದೆ, ಮನೆ ನಿರ್ಮಾಣ ಸಂದರ್ಭ ಸಣ್ಣಪುಟ್ಟ ನಕ್ಷೆ ಉಲ್ಲಂಘನೆಯಾಗುವುದು ಸಹಜ. ಅಲ್ಲಿಗೂ ತೆರಳಿ ಕೆಲವು ಪಾಲಿಕೆ ಸದಸ್ಯರು ವಸೂಲಾತಿಗೆ ಮುಂದಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿನ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಇನ್ನು ಮುಂದೆ ಪಾಲಿಕೆ ಸದಸ್ಯರಿಂದ ಯುಜಿ ಕೇಬಲ್ ಅಳವಡಿಕೆಗೆ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತರುವಂತೆ ಸೆಸ್ಕ್ ಅಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದರು.

    ಸಿಎ್ಟಿಆರ್‌ಐನಿಂದ ಕೋವಿಡ್ ಟೆಸ್ಟ್: ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎ್ಟಿಆರ್‌ಐ) ನಗರದ ಪಂಚಕರ್ಮ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಇನ್ನು ಎರಡು ವಾರಗಳ ಒಳಗೆ ಲ್ಯಾಬ್ ಕಾರ್ಯಾರಂಭಗೊಳ್ಳಲಿದೆ ಎಂದು ಜಿಲ್ಲಾಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.


    ಸಿಎ್ಟಿಆರ್‌ಐ ಲ್ಯಾಬ್ ಪ್ರಾರಂಭಗೊಂಡರೆ ದಿನಕ್ಕೆ 200ರಿಂದ 300 ಟೆಸ್ಟ್ ಮಾಡಬಹುದು. ಪ್ರಸ್ತುತ ಜಿಲ್ಲೆಯಲ್ಲಿ 500ರಿಂದ 700 ಟೆಸ್ಟ್ ನಡೆಯುತ್ತಿದೆ. ನೆರೆಯ ಚಾಮರಾಜನಗರ ಜಿಲ್ಲೆಯಲ್ಲಿ ಕೊವಿಡ್ ಟೆಸ್ಟ್ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಗ್ರಹಿಸಿದ ಸ್ಯಾಂಪಲ್ಸ್ ಅನ್ನು ಚಾಮರಾಜನಗರಕ್ಕೆ ಕಳುಹಿಸಿ ಅಲ್ಲಿ ಟೆಸ್ಟ್ ಮಾಡಿಸಲು ಉದ್ದೇಶಿಸಲಾಗಿದ್ದು, ಅಲ್ಲಿನ ಜಿಲ್ಲಾಡಳಿತದ ಅನುಮತಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ. ಪ್ರಸ್ತುತ ಜಿಲ್ಲೆಯಲ್ಲಿ 789 ಟೆಸ್ಟ್ ಮಾಡಲು ಬಾಕಿ ಇದೆ ಎಂದರು.


    ಜಿಲ್ಲೆಯಲ್ಲಿ ಹೆಚ್ಚುವರಿ ಲ್ಯಾಬ್ ತೆರೆಯಲು ಹಾಗೂ ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಲ್ಲಿ ಹೆರಿಗೆ ಆಸ್ಪತ್ರೆ ತೆರೆಯಲು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಪ್ರತಾಪ್ ಸಿಂಹ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ. ವೆಂಕಟೇಶ್‌ಗೆ ನಿರ್ದೇಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts