More

    ಶಿಕ್ಷಣ ಕ್ರಾಂತಿಗೆ ಸಿಗಲಿಲ್ಲ ಪ್ರೋತ್ಸಾಹ

    ಮೈಸೂರು: ಸಾವಿತ್ರಿಬಾಯಿ ಫುಲೆ ಅವರ ಚಿಂತನೆಯ ಪ್ರಭಾವದಿಂದ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕಿತ್ತು. ಆದರೆ, ಪ್ರೋತ್ಸಾಹದ ಕೊರತೆಯಿಂದಾಗಿ ಇದು ಇನ್ನೂ ಸಾಧ್ಯವಾಗಿಲ್ಲ ಎಂದು ಸಚಿವ ವಿ.ಸೋಮಣ್ಣ ಕಳವಳ ವ್ಯಕ್ತಪಡಿಸಿದರು.

    ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಣ ವಂಚಿತ ಬಡಕುಟುಂಬಗಳಿಗೆ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಫುಲೆ ಅವರು ಮುಂದಾಗುತ್ತಿದ್ದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ, ಹಿಡಿದ ಕಾರ್ಯವನ್ನು ಅವರು ಬಿಡಲಿಲ್ಲ. ಇದರಿಂದಾಗಿ ಸಗಣಿ ನೀರು ಎರಚಿ ಅವರಿಗೆ ಅಪಮಾನ ಮಾಡಿದ್ದರು. ಆಧರೂ ಶೈಕ್ಷಣಿಕ ಸೇವೆಯಿಂದ ವಿಮುಕ್ತರಾಗಲಿಲ್ಲ ಎಂದರು.

    ಸರ್ಕಾರದಿಂದ ಇವರ ಜಯಂತಿಯನ್ನು ಆಚರಣೆಗೆ ನಿರ್ಧರಿಸಿದ್ದು, ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

    ದಸಂಸ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ನರ್ಮ್ ಯೋಜನೆಯಡಿ ಏಕಲವ್ಯನಗರದಲ್ಲಿ ನಿರ್ಮಿಸಿರುವ ಮನೆಗಳ ಆಯ್ಕೆ ಪಟ್ಟಿಯಿಂದ ನಿರ್ಗತಿಕ ಅಲೆಮಾರಿ ಕುಟುಂಬಗಳನ್ನು ಕೈಬಿಡಲಾಗಿದೆ. ಇವರಿಗೆ ಸ್ಲಂ ಬೋರ್ಡ್‌ನಿಂದ ಮನೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ದಲಿತ ಮುಖಂಡರಾದ ವಿ.ರಾಮಸ್ವಾಮಿ, ಎಚ್.ಬಿ.ದಿವಾಕರ್, ವೆಂಕಟೇಶ್, ಬಲ್ಲೇನಹಳ್ಳಿ ಕೆಂಪರಾಜು, ರಂಗಮ್ಮ, ಕೃಷ್ಣ ಇನ್ನಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts