More

  ಚೆನ್ನೈನಿಂದ ಬರುವಾಗ ಮೈಸೂರು ಪಾಕ್​, ಆಲೂ ಚಿಪ್ಸ್​ ತರದೇ ಬರಬೇಡಿ: ಪತಿ ರಣವೀರ್​ ಸಿಂಗ್​ಗೆ ದೀಪಿಕಾ ಪಡುಕೋಣೆ ತಾಕೀತು

  ನವದೆಹಲಿ: ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಆಶ್ಚರ್ಯಭರಿತ ಸುದ್ದಿಗಳನ್ನು ನೀಡುತ್ತಿರುತ್ತಾರೆ.

  ಈಗ ಮತ್ತೆ ಅಂತಹ ಸುದ್ದಿ ಇದೆ, ನೋಡಿ. ರಣವೀರ್​ ಸಿಂಗ್​ ನಟನೆಯ ಕಬೀರ್​ ಖಾನ್​ ನಿರ್ದೇಶನದ 83 ಸಿನಿಮಾ ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ. ಇದೇ ಕೆಲಸಕ್ಕೆ ಚೆನ್ನೈಗೆ ತೆರಳಿದ್ದಾರೆ.

  ಹೀಗೆ ಚೆನ್ನೈಗೆ ತೆರಳಿದ ಪತಿ ರಣವೀರ್​ ಹಂಚಿಕೊಂಡ ಫೋಟೋಗೆ ಕಮೆಂಟ್​ ಮಾಡಿರುವ ದೀಪಿಕಾ, ಚೆನ್ನೈನಿಂದ ಮರಳುವಾಗ ಮೈಸೂರು ಪಾಕ್​ ಮತ್ತು ಆಲೂ ಚಿಪ್ಸ್​ ಮರೆಯದೇ ತರಬೇಕು ಎಂದು ತಾಕೀತು ಮಾಡಿದ್ದಾರೆ.

  ನಟ ರಣವೀರ್​ ಸಿಂಗ್​ ಶನಿವಾರ ತಮ್ಮ ನಟನೆಯ 83 ಸಿನಿಮಾ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಹ ನಟರ ಜತೆ ರಣವೀರ್​ ಪೋಸ್​ ಕೊಟ್ಟಿದ್ದು, ಕಪಿಲ್​ ಟೀಮ್​ಗೆ ಲಗ್ಗೆ ಹಾಕಲಿದೆ ಎಂದು ಬರೆದುಕೊಂಡಿದ್ದಾರೆ.

  ಇದಕ್ಕೆ ಪತ್ನಿ, ನಟಿ ದಿಪಿಕಾ ಪ್ರತಿಕ್ರಿಯಿಸಿದ್ದು, ಶ್ರೀಕೃಷ್ಣ ಅಂಗಡಿಯಿಂದ 1 ಕೆ.ಜಿ. ಮೈಸೂರು ಪಾಕ್​ ಮತ್ತು ಎರಡೂವರೆ ಕೆಜಿ ಆಲೂ ಚಿಪ್ಸ್​ ತರಬೇಕು ಎಂದು ಕಮೆಂಟ್​ ಮಾಡಿದ್ದಾರೆ.

  ಹಾಗೆಯೇ 83 ನಿದೇರ್ಶಕ ಕಬೀರ್​ ಪತ್ನಿಗೂ ಈ ವಿಷಯ ತಿಳಿಸಿ, ನಿಮ್ಮ ಮನೆಯವರಿಗೂ ತರಲು ತಿಳಿಸು ಎಂದಿರುವ ದೀಪಿಕಾ, ಕಬೀರ್​ ಖಾನ್​ ನೀವು ಈ ಆರ್ಡರ್​ನ್ನು ರಿಪೀಟ್​ ಮಾಡಿ ಎಂದಿದ್ದಾರೆ.

  ಕಪಿಲ್​ದೇವ್​ ನಾಯಕತ್ವದಲ್ಲಿ 1983ರಲ್ಲಿ ಭಾರತ ಗೆದ್ದ ವಿಶ್ವಕಪ್​ ಕ್ರಿಕೆಟ್​ ಕತೆ ಇದೆ. ಈ ಬಗ್ಗೆ ತರಬೇತಿ ಪಡೆಯಲು ನಟ ರಣವೀರ್​ ಸಿಂಗ್​ ಖುದ್ದು ಕಪಿಲ್​ದೇವ್​ ಮನೆಗೆ ತೆರಳಿದ್ದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts