More

    ನನ್ನ ರಕ್ತ ಕುದಿಯುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಎದುರೇ ಉದ್ರಿಕ್ತ ಭಾಷಣ

    ಚಿಕ್ಕಬಳ್ಳಾಪುರ: ರಕ್ತ ಕುದಿಯುತ್ತಿದೆ ಎಂಬುದಾಗಿ ಉದ್ರಿಕ್ತ ಭಾಷಣದಲ್ಲಿ ಕೋಪವನ್ನು ಪ್ರದರ್ಶಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಈ ಇಳಿ ವಯಸ್ಸಿನಲ್ಲೂ ಹೋರಾಟದ ಶಕ್ತಿ ಇನ್ನೂ ಕುಗ್ಗಿಲ್ಲ. ರಾಜ್ಯದ ಪರ ಹೋರಾಟ ನಡೆಯುತ್ತಿರುತ್ತದೆ ಎಂದು ಗುಡುಗಿದರು.
    ವಿಜಯಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಕಾಲಿನ ಮಂಡಿ ನೋವಿನಿಂದ ಕುಳಿತುಕೊಂಡು ಮಾತನಾಡುತ್ತಲೇ ಆಗಾಗ ಎರಡು ಕೈಗಳನ್ನು ಎತ್ತಿ ಆವೇಶಕಕ್ಕೊಳಗಾದರು. ಇಂಡಿಯಾ ಮೈತ್ರಿಕೂಟದ ಜತೆಗೆ ಕಾಂಗ್ರೆಸ್ ಧೋರಣೆಗಳ ವಿರುದ್ಧ ಕಿಡಿಕಾರಿದರು. ಹಾಗೆಯೇ ಕಳೆದ 10 ವರ್ಷಗಳಲ್ಲಿನ ಮೋದಿ ಆಡಳಿತವನ್ನು ಹೊಗಳಿದರು.
    ನನಗೆ 91 ವರ್ಷ, ಇನ್ನೂ 20 ವರ್ಷ ಬಾಕಿ ಇದೆ. ಕೊನೆಯವರೆಗೂ ಜನರ ಧ್ವನಿಯಾಗಿಯೇ ಇರಲಿದ್ದು ಹೋರಾಟ ನಡೆಯುತ್ತಿರುತ್ತದೆ ಎಂದರು.
    ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ 2ಜಿ, ಕಲ್ಲಿದ್ದಲ್ಲು, ಕಾಮನ್ ವೆಲ್ತ್ ಸೇರಿದಂತೆ ನಾನಾ ಹಗರಣದಲ್ಲಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತು. ಇದಕ್ಕೆ ಬೇಸತ್ತ ಜನರು 2014 ರಲ್ಲಿ ಮೋದಿ ಕೈಗೆ ಅಧಿಕಾರ ನೀಡಿದರು. ಖಾಲಿಯಾಗಿದ್ದ ಚೆಂಬನ್ನು ಕಳೆದ 10 ವರ್ಷಗಳಲ್ಲಿ ಉತ್ತಮ ಆಡಳಿತದಿಂದ ಮೋದಿ ಅಕ್ಷಯ ಪಾತ್ರೆಯನ್ನಾಗಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷÄಲಕ ರಾಜಕಾರಣಕ್ಕೆ ಖಾಲಿ ಚೆಂಬು ಮತ್ತು ಅನ್ಯಾಯ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟದಲ್ಲಿ ಸೂಕ್ತ ನಾಯಕರೇ ಇಲ್ಲ. ಇದರಿಂದ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ 400 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದರೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

    * ಮೋದಿಗೆ 28 ಸ್ಥಾನಗಳ ಕಾಣಿಕೆ
    ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲ ಕಡೆ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು. ಪ್ರಧಾನಿ ಮೋದಿಗೆ ಈ ಅಭೂತಪೂರ್ವ ಗೆಲುವನ್ನು ಕಾಣಿಕೆಯಾಗಿ ನೀಡಲಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಭರವಸೆ ನೀಡಿದರು.

    *ನೀರಿನ ಸಮಸ್ಯೆ ಪ್ರಸ್ತಾಪ
    ಬಯಲು ಸೀಮೆ ಭಾಗದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಪ್ರಧಾನಿಗೆ ಎರಡು ಕೈಗಳಿಂದ ನಮಸ್ಕರಿಸುತ್ತಲೇ ದೇವೇಗೌಡ ಮನವಿ ಮಾಡಿದರು.
    ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ 10೦ ಜಿಲ್ಲೆಗಳ ಪರಿಸ್ಥಿತಿ ಗಂಭೀರವಾಗಿದೆ. ಈ ಭಾಗಕ್ಕೆ ಕೃಷ್ಣ ನದಿ, ಕಾವೇರಿ ನದಿಯಿಂದಲಾದರೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು. ಈಗಲೇ ಬೆಂಗಳೂರಿನಲ್ಲಿ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕ್ರಮ ಅಗತ್ಯ. ಈ ವಿಚಾರದಲ್ಲಿ ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts