More

    ‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಪರಿಷತ್​ ಚುನಾವಣೆಯಲ್ಲಿ ಟ್ರೆಂಡ್​ ಆಯ್ತು ಈ ಆಣೆ, ಯಾರಿದು ನಂದಿನಿ?

    ಹಾಸನ: ರಾಜ್ಯದಲ್ಲಿ ಪರಿಷತ್​ ಚುನಾವಣೆ ಕಾವೇರಿದ್ದು, ‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಎಂದು ಮತದಾರರು ಹೇಳುತ್ತಿದ್ದಾರಂತೆ. ಅರೆ ಇದ್ಹೇನಿದು? ಯಾರಿದು ನಂದಿನಿ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡೋದು ಸಹಜ. ಅದಕ್ಕಿಲ್ಲಿದೆ ಉತ್ತರ.

    ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿರುವ ಕೆಲ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಹಲವರು ನಾನಾ ರೀತಿಯ ಆಮಿಷವೊಡ್ಡುತ್ತಿದ್ದಾರೆ. ಆದರೆ, ಹಾಸನದಲ್ಲಿ ಮಾತ್ರ ‘ನಂದಿನಿ’ ಮೇಲೆ ಆಣೆ ಮಾಡಿಸುತ್ತಿದ್ದಾರೆ!

    ಅಂದಹಾಗೆ ನಂದಿನಿ ಬೇರೆ ಯಾರು ಅಲ್ಲ, ಹಾಲು! ವಿಧಾನಪರಿಷತ್​ ಚುನಾವಣೆಯಲ್ಲಿ ಕೆಎಂಎಫ್​ನ “ನಂದಿನಿ” ಹಾಲಿನ ಪ್ಯಾಕೇಟ್​ಗಳನ್ನು ರಾಜಕಾರಣಿಗಳು ತಮ್ಮ ಪರ ಮತದಾರರ ನಿಷ್ಠೆ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.

    'ನಂದಿನಿ ಮೇಲಾಣೆ' ನನ್ನ ವೋಟ್​ ನಿಮ್ಗೆ! ಪರಿಷತ್​ ಚುನಾವಣೆಯಲ್ಲಿ ಟ್ರೆಂಡ್​ ಆಯ್ತು ಈ ಆಣೆ, ಯಾರಿದು ನಂದಿನಿ?

    ಸದಸ್ಯರನ್ನು ಒಗ್ಗೂಡಿಸುವ ಸಭೆಗೆ ಹಣದ ಥೈಲಿ ಜತೆಗೆ ಅರ್ಧ ಲೀ. ಹಾಲಿನ ಪ್ಯಾಕೆಟ್​ ಸಹ ಹೋಗುತ್ತದೆ. ಅಲ್ಲಿ ಮತ ಹಾಕಲು ಒಪ್ಪುವ ಮತದಾರರು ಅಭ್ಯರ್ಥಿ ಕಡೆಯವರ ಉಡುಗೊರೆ ಸ್ವೀಕರಿಸಿ ಹಾಲಿನ ಪ್ಯಾಕೇಟ್​ ಮೇಲೆ ಕೈ ಇರಿಸಿ ಮಾತು ಕೊಡಬೇಕು. ಆಗಲೇ ಅವರ ಒಪ್ಪಂದ ಪಕ್ಕಾ ಆಗಿದೆ ಎಂದೂ, ಅವರು ನಾಳೆ ಬೇರೆ ಅಭ್ಯರ್ಥಿಯ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಸ್ಪರ್ಧಿ ನಿರಾಳವಾಗುತ್ತಾರೆ. ಕೆಲವೊಮ್ಮೆ ಮತದಾರರ ನಿಷ್ಠೆ ಬಗ್ಗೆ ಅನುಮಾನವಿರುವ ಸಂದರ್ಭದಲ್ಲಿ ಹಾಲಿನ ಪ್ಯಾಕೇಟ್​ ಜತೆಗೆ ಆ ಭಾಗದಲ್ಲಿ ಹೆಚ್ಚು ಧಾರ್ಮಿಕ ನಂಬಿಕೆ ಹೊಂದಿರುವ ದೇವರ ಫೋಟೋಗಳನ್ನೂ ಮುಟ್ಟಿಸಿ ಮಾತು ಪಡೆದುಕೊಳ್ಳಲಾಗುತ್ತದೆ. ಕಳೆದ ಬಾರಿ ಅಭ್ಯರ್ಥಿಯೊಬ್ಬರು ಬೆಳ್ಳಿನಾಣ್ಯ, ದೇವರ ಫೋಟೋಗಳನ್ನು ಕವರ್​ನಲ್ಲಿಟ್ಟುಕೊಟ್ಟು ಹಾಲಿನ ಮೇಲೆ ಕೈಯಿರಿಸಿ ಮಾತು ಪಡೆದು ಯಶಸ್ಸು ಕಂಡಿದ್ದರು. ಅದನ್ನು ಈಗ ಎಲ್ಲರೂ ಅಳವಡಿಸಿಕೊಳ್ಳತೊಡಗಿದ್ದಾರೆ.

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಗರ್ಭಿಣಿ ಪತ್ನಿಯ ಹತ್ಯೆಗೆ ಯತ್ನಿಸಿ ಎದುರು ಮನೆ ದಂಪತಿಯನ್ನೂ ಕೊಂದ! ಇವನ ಮಾತು ಕೇಳಿದ್ರೆ ಅಹಸ್ಯ ಅನ್ನಿಸುತ್ತೆ

    ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ನಾನಿದ್ದೀನಿ ಅಂತ ಚೆಕ್​ ಕೊಟ್ಟಿದ್ಯಲ್ಲಪ್ಪಾ.. ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts