More

    ಕ್ರಿಕೆಟ್ ಜಗತ್ತು ಕಂಡ ಅತಿ ವೇಗದ ಬೌಲರ್‌ಗೆ ಈಗ ಓಡಲಾಗದು!

    ಲಾಹೋರ್: ಪಾಕಿಸ್ತಾನದ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯಿಬ್ ಅಖ್ತರ್ ಎಂದರೆ ಕ್ರಿಕೆಟ್ ಜಗತ್ತಿನ ಬ್ಯಾಟ್ಸ್‌ಮನ್‌ಗಳು ಹೆದರುವ ದಿನಗಳಿದ್ದವು. ವೇಗವಾಗಿ ಓಡುತ್ತ ಬಂದು ಅವರು ಎಸೆಯುವ ಬೆಂಕಿಚೆಂಡಿನಂಥ ಎಸೆತಗಳಿಗೆ ಬ್ಯಾಟ್ಸ್‌ಮನ್‌ಗಳು ದಿಕ್ಕೆಡುತ್ತಿದ್ದರು. ಕ್ರಿಕೆಟ್ ಜಗತ್ತು ಕಂಡ ಅತಿ ವೇಗದ ಬೌಲರ್‌ಗಳಲ್ಲಿ ಅವರು ಅಗ್ರಗಣ್ಯರೆನಿಸಿದ್ದರು. ಅಂಥ ಸ್ಪೀಡ್ ಕಿಂಗ್‌ಗೆ ಈಗ ಓಡಲು ಸಾಧ್ಯವಾಗದು. ನನ್ನ ಓಡುವ ದಿನಗಳೆಲ್ಲ ಮುಗಿದುಹೋದವು ಎಂದು ಶೋಯಿಬ್ ಅಖ್ತರ್ ಇದೀಗ ಬೇಸರದಿಂದ ಹೇಳಿಕೊಂಡಿದ್ದಾರೆ. ಹಾಗಾದರೆ ಅಂಥದ್ದೇನಾಯಿತು?

    ವೃತ್ತಿಜೀವನದುದ್ದಕ್ಕೂ ಹಲವಾರು ಗಾಯದ ಸಮಸ್ಯೆಗಳನ್ನು ಎದುರಿಸಿದವರು ಶೋಯಿಬ್ ಅಖ್ತರ್. ನಿವೃತ್ತಿಯ ನಂತರವೂ ಗಾಯದ ಸಮಸ್ಯೆ ಮುಂದುವರಿದ ಕಾರಣ, 2 ವರ್ಷಗಳ ಹಿಂದೆ ಅವರು ಮೆಲ್ಬೋರ್ನ್‌ನಲ್ಲಿ ಮೊಣಕಾಲು ಶಸಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ಅವರ ಮೊಣಕಾಲು ಪುನಾರಚನೆ ಮಾಡಲಾಗುತ್ತಿದ್ದು, ಮೆಲ್ಬೋರ್ನ್‌ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಈ ವಿಷಯವನ್ನು ಪ್ರಕಟಿಸುವ ವೇಳೆ 46 ವರ್ಷದ ಅಖ್ತರ್, ‘ನನ್ನ ಓಡುವ ದಿನಗಳು ಮುಗಿದು ಹೋದವು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    2011ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಅಖ್ತರ್ ಇದೀಗ ವೀಕ್ಷಕವಿವರಣೆಕಾರರಾಗಿದ್ದು, ವಿವಿಧ ಟಿವಿ ಚಾನಲ್‌ಗಳಲ್ಲಿ ವಿಶ್ಲೇಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮದೇ ಸ್ವಂತ ಯುಟ್ಯೂಬ್ ಚಾನಲ್‌ನಲ್ಲೂ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಾರೆ.

    ಪಾಕ್ ಪರ 46 ಟೆಸ್ಟ್ ಮತ್ತು 163 ಏಕದಿನ ಪಂದ್ಯವಾಡಿರುವ ಅಖ್ತರ್, ಕ್ರಮವಾಗಿ 178 ಮತ್ತು 247 ವಿಕೆಟ್ ಕಬಳಿಸಿದ್ದಾರೆ. 15 ಟಿ20 ಪಂದ್ಯಗಳನ್ನೂ ಆಡಿದ್ದು, 19 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ಜಗತ್ತಿನ ಅತಿವೇಗದ ಎಸೆತವನ್ನು (ಗಂಟೆಗೆ 161 ಕಿಮೀ ವೇಗ) ಎಸೆದ ವಿಶ್ವದಾಖಲೆ ಈಗಲೂ ಅವರದೇ ಹೆಸರಿನಲ್ಲಿದೆ.

    2021ರಲ್ಲಿ ಯೆಲ್ಲೋ ಜೆರ್ಸಿಗೆ ಟಿ20 ಪ್ರಶಸ್ತಿ ಗೆಲ್ಲೋ ಅದೃಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts