More

    ಹೆದರಿಸುವಂತ ಪಾತ್ರ ನನ್ನದು: ವಿಭಿನ್ನ ಅನುಭವ ಕೊಟ್ಟ ಭಜರಂಗಿ 2 ಬಗ್ಗೆ ಶ್ರುತಿ

    ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್​ನಲ್ಲಿ ಶಿವರಾಜಕುಮಾರ್ ಅಲ್ಲದೆ ಗಮನಸೆಳೆಯುವ ಇನ್ನೊಂದು ಪಾತ್ರವೆಂದರೆ, ಅದು ಶ್ರುತಿ ಅವರದ್ದು. ಇದುವರೆಗೂ ಕಾಣಿಸಿಕೊಂಡಿದ್ದಿಕ್ಕಿಂತ ವಿಭಿನ್ನ ಪಾತ್ರವೊಂದರಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರಂತೆ.

    ಹಣೆಯ ಮೇಲೆ ಕಾಸಗಲದ ಕುಂಕುಮ, ಕೈಯಲ್ಲಿ ಚುಟ್ಟಾ, ಮುಖದಲ್ಲಿ ಕೋಪ … ಈ ಹಿಂದೆ ಅವರು ಯಾವತ್ತೂ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೆಯೇ ತಮ್ಮ ಪಾತ್ರದ ಬಗ್ಗೆ ಕೇಳಿದಾಗ, ನಟಿಸುವುದಕ್ಕೆ ಹಿಂದೇಟು ಹಾಕಿದರಂತೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹರ್ಷ ಬಂದು ನನಗೆ ಈ ಪಾತ್ರವನ್ನು ನರೇಟ್ ಮಾಡಿದಾಗ, ನಿಜಕ್ಕೂ ಹೆದರಿದೆ. ನನಗಿರುವ ಇಮೇಜ್ ಬೇರೆ, ಈ ಪಾತ್ರವೇ ಬೇರೆ. ನಿಜಕ್ಕೂ ನನ್ನಿಂದ ಇಂಥದ್ದೊಂದು ಪಾತ್ರ ನಿಭಾಯಿಸೋಕೆ ಸಾಧ್ಯವಾ? ಎಂಬ ಪ್ರಶ್ನೆ ಬಂತು. ನನಗೇ ಹೆಚ್ಚು ನಂಬಿಕೆ ಇರಲಿಲ್ಲ. ಆದರೆ, ಹರ್ಷನಿಗೆ ಅಗಾಧವಾದ ನಂಬಿಕೆ. ‘ನನಗೆ ನಿಮ್ಮ ಹಳೆಯ ಇಮೇಜ್ ಬೇಡ. ಇದುವರೆಗೂ ಯಾವ ರೀತಿ ಅಭಿನಯಿಸಿದ್ದೀರೋ, ಅದರ ಉಲ್ಟಾ ಬೇಕು. ನನಗೆ ಇದೊಂದು ಸಖತ್ ಚಾಲೆಂಜ್’ ಎಂದರು. ನಿಮ್ಮ ಚಾಲೆಂಜ್​ಗೆ ನನ್ನ ಯಾಕೆ ಬಲಿಪಶು ಮಾಡ್ತೀರಪ್ಪಾ ಎಂದೆ’ ಎಂದು ನಗುತ್ತಾರೆ ಶ್ರುತಿ.

    ಒಂದು ಕಡೆ ಜನ ಒಪು್ಪತ್ತಾರೋ ಇಲ್ಲವೋ ಎಂಬ ಭಯವಿದ್ದರೂ ಇನ್ನೊಂದು ಕಡೆ ಈ ಪಾತ್ರ ಮಾಡಬೇಕು ಎಂದನಿಸಿತ್ತಂತೆ. ‘ಒಬ್ಬ ಕಲಾವಿದೆಯಾಗಿ ಒಂದೇ ಪಾತ್ರಕ್ಕೆ ಅಂಟಿಕೊಂಡು ಕೂರಬಾರದು. ಎಲ್ಲಾ ಪಾತ್ರಗಳನ್ನೂ ಮಾಡಬೇಕು. ಆದರೆ, ಏನು ಮಾಡಲಿ? ಇದುವರೆಗೂ ಅಂತ ಪಾತ್ರ ಮಾಡಿರಲಿಲ್ಲ. ಸಾಫ್ಟ್ ಚಿತ್ರಗಳು ಮತ್ತು ಪಾತ್ರಗಳನ್ನು ಮಾಡಿ, ನನ್ನ ಸ್ವಭಾವ ಸಹ ಹಾಗೆಯೇ ಆಗಿತ್ತು. ಇಲ್ಲಿ ನನ್ನದು, ಜನರನ್ನ ಹೆದಿರಸುವಂತಹ ಪಾತ್ರ. ಕೈಯಲ್ಲಿ ಚುಟ್ಟಾ, ವಿಭಿನ್ನ ಗೆಟಪ್ … ಹೀಗೆ ಬೇರೆ ತರಹವೇ ಇತ್ತು. ಕೊನೆಗೆ ಒಂದಿಷ್ಟು ತಯಾರಿ ಮಾಡಿಕೊಂಡು ನಟಿಸಿದೆ’ ಎನ್ನುತ್ತಾರೆ ಶ್ರುತಿ. ಇನ್ನು ಶ್ರುತಿ ಅವರು ತಮ್ಮ ಪಾತ್ರದ ಬಗ್ಗೆ ಹೆಚ್ಚು ರಹಸ್ಯ ಬಿಟ್ಟುಕೊಡುವುದಿಲ್ಲ. ಜನರನ್ನು ಹೆದರಿಸುವ ಪಾತ್ರವೇ ಆದರೂ, ಯಾಕೆ ಹೆದರಿಸುತ್ತಾರೆ, ಹೇಗೆ ಹೆದರಿಸುತ್ತಾರೆ ಎಂಬ ಅಂಶಗಳನ್ನು ಅವರು ರಹಸ್ಯವಾಗಿಯೇ ಇಡುತ್ತಾರೆ. ಯಾಕೆ, ಏನು ಎಂಬುದನ್ನು ಚಿತ್ರದಲ್ಲೇ ನೋಡಿ ಎನ್ನುವ ಅವರಿಗೆ, ಟೀಸರ್ ಬಿಡುಗಡೆಯ ನಂತರ ಸಾಕಷ್ಟು ಮೆಚ್ಚುಗೆ ಕೇಳಿ ಬರುತ್ತಿದೆಯಂತೆ. ‘ಶಿವಣ್ಣ ಆ ಪಾತ್ರವನ್ನ ಮೆಚ್ಚಿ ಫೋನ್ ಮಾಡಿದ್ದರು. ಅಲ್ಲದೆ, ತುಂಬಾ ಜನ ಫೋನ್ ಮಾಡುತ್ತಿದ್ದಾರೆ. ರೊಟೀನ್ ಆದಂತಹ ಪಾತ್ರ ಬಿಟ್ಟು, ಹೀಗೆ ಸವಾಲಿನ ಪಾತ್ರ ಮಾಡಿದಾಗ, ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ನಿಜಕ್ಕೂ ಖುಷಿಯಾಗುತ್ತದೆ. ಅದೊಂಥರಾ ಎನರ್ಜಿ ಬೂಸ್ಟರ್ ಇದ್ದಂತೆ’ ಎನ್ನುತ್ತಾರೆ ಶ್ರುತಿ.

    ಬಾಲಿವುಡ್​ ನಟಿ ರೇಖಾ ಬಂಗಲೆಯಲ್ಲಿನ ಇನ್ನೂ ನಾಲ್ವರು ಗಾರ್ಡ್​ಗಳಿಗೆ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts