More

    ನನ್ನ ಬಯೋಪಿಕ್ ನೋಡಿ ಮಹಿಳೆಯರೂ ಬ್ಯಾಟ್ ಹಿಡಿಯಲಿ!

    ನವದೆಹಲಿ: ಕ್ರಿಕೆಟ್ ತಾರೆಯರಾದ ಮೊಹಮದ್ ಅಜರುದ್ದೀನ್, ಎಂಎಸ್ ಧೋನಿ, ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾಗಳು ಈಗಾಗಲೆ ಬಾಲಿವುಡ್‌ನಲ್ಲಿ ತೆರೆಗೆ ಅಪ್ಪಳಿಸಿವೆ. ಇದೀಗ ಮಹಿಳಾ ಕ್ರಿಕೆಟರ್ ಸರದಿ. ಮಹಿಳೆಯರ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಆಧಾರಿತ ‘ಶಭಾಷ್ ಮಿಥು’ ಹೆಸರಿನ ಸಿನಿಮಾ ಮುಂದಿನ ವರ್ಷ ಫೆಬ್ರವರಿ 5ರಂದು ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನಷ್ಟು ಮಹಿಳೆಯರು ಕ್ರಿಕೆಟ್ ಬ್ಯಾಟ್ ಹಿಡಿಯಲು ನನ್ನ ಬಯೋಪಿಕ್ ಸ್ಫೂರ್ತಿಯಾಗಲಿ ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದಿದ್ದರೂ ತುಂಬುತ್ತಿವೆ ಸ್ಟೇಡಿಯಂ!

    ‘ನನ್ನ ಜೀವನ ಆಧಾರಿತ ಸಿನಿಮಾ ಸಿದ್ಧವಾಗುತ್ತಿರುವುದಕ್ಕೆ ಖುಷಿ ಇದೆ. ಇದರಿಂದ ಮಹಿಳಾ ಕ್ರಿಕೆಟಿಗರ ಕಷ್ಟಗಳು ಜನರಿಗೆ ತಿಳಿಯಲಿವೆ. 90ರ ದಶಕದಲ್ಲಿ ನಾನು ಕ್ರಿಕೆಟ್ ಆಡಲು ಆರಂಭಿಸಿದಾಗ ದೇಶದಲ್ಲಿ ಮಹಿಳಾ ಕ್ರಿಕೆಟಿಗರ ಪರಿಸ್ಥಿತಿ ಬಹಳ ಕಠಿಣವಾಗಿತ್ತು’ ಎಂದು ಮಿಥಾಲಿ ಹೇಳಿದ್ದಾರೆ.

    ಈಗಾಗಲೆ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿರುವ 38 ವರ್ಷದ ಮಿಥಾಲಿ ಮುಂದಿನ ವರ್ಷ ಏಕದಿನ ಕ್ರಿಕೆಟ್ ಜೀವನಕ್ಕೂ ವಿದಾಯ ಹೇಳುವ ಮುನ್ನ ವಿಶ್ವಕಪ್ ಜಯಿಸುವ ಮಹದಾಸೆ ಹೊಂದಿದ್ದಾರೆ. 2005 ಮತ್ತು 2017ರ ಏಕದಿನ ವಿಶ್ವಕಪ್‌ನಲ್ಲಿ ೈನಲ್‌ನಲ್ಲಿ ಎಡವಿದ್ದ ಭಾರತ ತಂಡದ ಭಾಗವಾಗಿದ್ದ ಮಿಥಾಲಿ, 3ನೇ ಯತ್ನದಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

    ಇದನ್ನೂ ಓದಿ: ಇನ್ನು ಮಳೆಗಾಲದ ನಂತರ ಐಪಿಎಲ್!

    ‘2021ರ ವಿಶ್ವಕಪ್ ಟೂರ್ನಿಯನ್ನು ಈಗ ಎದುರು ನೋಡುತ್ತಿದ್ದೇನೆ. ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲು ನನ್ನ ಕೊನೆಯ ಪ್ರಯತ್ನವನ್ನು ಮಾಡಲಿದ್ದೇನೆ. ಇದಕ್ಕಾಗಿ ಜನರು ಮಹಿಳಾ ಕ್ರಿಕೆಟ್ ಅನ್ನು ಬೆಂಬಲಿಸುವುದನ್ನು ಮುಂದುವರಿಸಬೇಕು’ ಎಂದು ಮಿಥಾಲಿ ಹೇಳಿದ್ದಾರೆ. ಭಾರತ ಪರ 209 ಏಕದಿನ ಪಂದ್ಯ ಆಡಿರುವ ಮಿಥಾಲಿ, 7 ಶತಕಗಳ ಸಹಿತ 6,888 ರನ್ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts