More

    ಪ್ರೇಕ್ಷಕರಿಲ್ಲದಿದ್ದರೂ ತುಂಬುತ್ತಿವೆ ಸ್ಟೇಡಿಯಂ!

    ನವದೆಹಲಿ: ಕರೊನಾ ಹಾವಳಿಯ ನಡುವೆಯೂ ಜಗತ್ತಿನ ಕೆಲವೆಡೆ ಕ್ರೀಡಾ ಸ್ಪರ್ಧೆಗಳು ಆರಂಭಗೊಂಡಿವೆ. ಆದರೆ ಎಲ್ಲೂ, ಯಾವ ದೇಶ, ನಗರದಲ್ಲೂ ಪಂದ್ಯಗಳಿಗೆ ಹಾಜರಾಗಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಆದರೂ ಪಂದ್ಯಗಳು ನಡೆಯುತ್ತಿರುವಾಗ ಕ್ರೀಡಾಂಗಣಗಳು ತುಂಬುತ್ತಿವೆ. ಪ್ರೇಕ್ಷಕರ ಹಷೋದ್ಗಾರವೂ ಕ್ರೀಡಾಪಟುಗಳಿಗೆ ಕೇಳಿಸುತ್ತಿದೆ. ಅದು ಯಾವ ರೀತಿ ಎಂಬುದರ ಸಂಕ್ಷಿಪ್ತ ವಿವರಗಳು ಇಲ್ಲಿವೆ.

    ಹಣ ಕೊಟ್ಟವರ ಚಿತ್ರ ಸ್ಟೇಡಿಯಂನಲ್ಲಿ!: ಜರ್ಮನ್ ಫುಟ್​ಬಾಲ್ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಪ್ರೇಕ್ಷಕರ ಚಿತ್ರವನ್ನು ಇಡಲಾಗುತ್ತಿದೆ. ಆದರೆ ಇದು ಉಚಿತವಲ್ಲ. ಇದರಿಂದಲೂ ಬೊರುಷಿಯಾ ಕ್ಲಬ್ ಹಣ ಮಾಡಿಕೊಳ್ಳುತ್ತಿದೆ! ಆನ್​ಲೈನ್ ಮೂಲಕ ಒಂದೂವರೆ ಸಾವಿರ ರೂ. (19 ಯುರೋ) ಪಾವತಿಸುವ ಫುಟ್​ಬಾಲ್ ಪ್ರೇಮಿಯ ಲೈಫ್-ಸೈಜ್ ಚಿತ್ರವನ್ನು ಪಂದ್ಯದ ವೇಳೆ ಬೊರುಷಿಯಾ-ಪಾರ್ಕ್ ಸ್ಟೇಡಿಯಂನಲ್ಲಿ ಇಡಲಾಗುತ್ತಿದೆ. ಇದಕ್ಕೆ ಅಮೋಘ ಸ್ಪಂದನೆ ವ್ಯಕ್ತವಾಗಿರುವ ಕಾರಣ, ಚಿತ್ರಗಳನ್ನು ಇನ್​ಸ್ಟಾಲ್ ಮಾಡಲು ಜಾಗಕ್ಕಾಗಿ ಕ್ಲಬ್ ಪರದಾಡುವಂತಾಗಿದೆ.

    ಇದನ್ನೂ ಓದಿ   ರಂಜಾನ್ ಮನೆಯಲ್ಲೇ ಆಚರಿಸಿ: ರಾಜ್ಯ ಸರ್ಕಾರದ ಸೂಚನೆ

    ಹರ್ಷೆದ್ಗಾರದ ಆಡಿಯೋ: ದಕ್ಷಿಣ ಕೊರಿಯಾದ ಕೆ-ಲೀಗ್ ಫುಟ್​ಬಾಲ್ ಟೂರ್ನಿಯಲ್ಲಿ ಸ್ಟೇಡಿಯಂ ಖಾಲಿಯಾಗಿದ್ದರೂ, ಪ್ರೇಕ್ಷಕರ ಹರ್ಷೆದ್ಗಾರ ಭರ್ಜರಿಯಾಗಿಯೇ ಕೇಳಿಸುತ್ತಿದೆ! 2002ರ ಫಿಫಾ ವಿಶ್ವಕಪ್ ಸಹಿತ ಹಿಂದಿನ ಕೆಲ ಪಂದ್ಯಗಳ ವೇಳೆ ರೆಕಾರ್ಡ್ ಮಾಡಿಕೊಳ್ಳಲಾಗಿರುವ ಹರ್ಷೆದ್ಗಾರದ ಆಡಿಯೋಗಳನ್ನು ಪ್ಲೇ ಮಾಡಲಾಗುತ್ತಿರುವುದು ಇದಕ್ಕೆ ಕಾರಣ. ಆಸ್ಟ್ರೇಲಿಯನ್ ರೂಲ್ಸ್ ಫುಟ್​ಬಾಲ್​ನಲ್ಲೂ ಇದೇ ತಂತ್ರವನ್ನು ಟಿವಿ ನೇರಪ್ರಸಾರದ ವೇಳೆ ಅನುಸರಿಸುವ ಚಿಂತನೆ ನಡೆದಿದೆ.

    ಆಪ್ ಬಳಕೆ: ದಕ್ಷಿಣ ಕೊರಿಯಾದ ಬೇಸ್​ಬಾಲ್ ಟೂರ್ನಿಯ ಪಂದ್ಯಗಳನ್ನು ನೋಡುತ್ತಿರುವಾಗ ಅಭಿಮಾನಿಗಳು ಮನೆಯಲ್ಲಿ ಸಿಳ್ಳೆ, ಚಪ್ಪಾಳೆ ಹೊಡೆದರೆ, ಹರ್ಷೆದ್ಗಾರ ಮಾಡಿದರೆ ಅದು ಸ್ಟೇಡಿಯಂನಲ್ಲೂ ಕೇಳಿಸುತ್ತದೆ! ಇದಕ್ಕೆ ಕಾರಣ ಆಪ್ ಬಳಕೆ. ಕ್ರೀಡಾಪ್ರೇಮಿಗಳು ಮೈ ಅಪ್ಲೌಸ್ ಆಪ್ ಮೂಲಕ ತಮ್ಮ ಮನೆಯಲ್ಲಿನ ಶಬ್ದಗಳನ್ನು ಕ್ರೀಡಾಂಗಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

    ಗ್ಲಾಮರ್ ಚಿಯರ್​ಲೀಡರ್ಸ್: ತೈವಾನ್ ಬೇಸ್​ಬಾಲ್ ಟೂರ್ನಿಯ ವೇಳೆ ಕ್ರೀಡಾಂಗಣ ಖಾಲಿಯಾಗಿದ್ದರೂ, ಗ್ಲಾಮರ್ ಚಿಯರ್​ಲೀಡರ್​ಗಳು ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಮೊಬೈಲ್ ಮೂಲಕ ಇವರು ಪ್ರೇಕ್ಷಕರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ.

    ಇದನ್ನೂ ಓದಿ ಕಾಶ್ಮೀರದಲ್ಲೇ ಉಗ್ರ ನೆಲೆ ಸ್ಥಾಪಿಸಲು ಹವಣಿಸುತ್ತಿದೆ ಪಾಕ್​- ಟಿಆರ್​ಎಫ್​, ಟಿಎಂಐ, ಜಿಇಎಚ್​ಗಳು ಎಲ್​ಇಟಿ, ಜೆಇಎಂಗಳ ಹೊಸ ರೂಪ!!!

    ಸೆಕ್ಸ್ ಡಾಲ್: ದಕ್ಷಿಣ ಕೊರಿಯಾದ ಕೆ-ಲೀಗ್​ನಲ್ಲಿ ಎಫ್​ಸಿ ಸಿಯೋಲ್ ತಂಡ ಕ್ರೀಡಾಂಗಣವನ್ನು ತುಂಬಿಸಲು ಪ್ಲಕಾರ್ಡ್ ಮತ್ತು ತಂಡದ ಜೆರ್ಸಿ ತೊಟ್ಟ ಸೆಕ್ಸ್ ಡಾಲ್​ಗಳನ್ನು ಬಳಸಿ ವಿವಾದಕ್ಕೀಡಾಗಿತ್ತು. ಇದಕ್ಕಾಗಿ ಕೆ-ಲೀಗ್ ಇತಿಹಾಸದಲ್ಲೇ ಗರಿಷ್ಠ 61 ಲಕ್ಷ ರೂ.ಗಳನ್ನು ಕ್ಲಬ್​ಗೆ ದಂಡ ವಿಧಿಸಲಾಗಿದೆ. ಮಹಿಳಾ ಅಭಿಮಾನಿಗಳಿಗೆ ನೋವುಂಟು ಮಾಡಿರುವ ಈ ಘಟನೆಗೆ ಕ್ಲಬ್ ಕ್ಷಮೆಯನ್ನೂ ಯಾಚಿಸಿತ್ತು. –ಪಿಟಿಐ/ಏಜೆನ್ಸೀಸ್

    ರೋಬಾಟ್ ಡ್ರಮ್ಮರ್​ಗಳ ಅಬ್ಬರ

    ತೈವಾನ್​ನಲ್ಲಿ ಕಳೆದ ತಿಂಗಳು ಬೇಸ್​ಬಾಲ್ ಲೀಗ್ ಶುರುವಾಗಿದ್ದು, ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದಿದ್ದರೂ ಗದ್ದಲ ಕೇಳಿಸುತ್ತಿದೆ. ಇದಕ್ಕೆ ಕಾರಣ ರೋಬಾಟ್ ಡ್ರಮ್ಮರ್ಸ್! ರೋಬಾಟ್​ಗಳು ನುಡಿಸುವ ಡ್ರಮ್ ವಾದ್ಯದಿಂದ ಆಟಗಾರರು ಉತ್ಸಾಹ ಪಡೆದುಕೊಳ್ಳುತ್ತಿದ್ದಾರೆ. ವಿವಿಧ ತಂಡಗಳ ಜೆರ್ಸಿ ತೊಟ್ಟ ಬೊಂಬೆಗಳನ್ನೂ ಪ್ರೇಕ್ಷಕರ ಸಾಲಿನಲ್ಲಿ ಇರಿಸಲಾಗಿದೆ. ಪ್ರೇಕ್ಷಕರು ಮಾತ್ರವಲ್ಲದೆ, ಪರ್ತಕರ್ತರು ಮತ್ತು ಆಟಗಾರರ ಕುಟುಂಬ ಸದಸ್ಯರ ಕಾರ್ಡ್​ಬೋರ್ಡ್ ಕಟೌಟ್​ಗಳನ್ನೂ ಇಡಲಾಗುತ್ತಿದೆ.

    10 ವರ್ಷದ ನಂತರ ಮೃತ ವ್ಯಕ್ತಿ ಕುಟುಂಬಕ್ಕೆ ಏಳೂವರೆ ಕೋಟಿ ರೂ. ಪರಿಹಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts