More

    ಮುಸ್ಲಿಮರನ್ನು ವಿರೋಧಿಸಿದರೆ ಸುಮ್ಮನಿರಲ್ಲ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿಕೆ

    ಬಳ್ಳಾರಿ: ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವುದನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಮುಸ್ಲಿಮರನ್ನು ವಿರೋಧಿಸಿದರೆ ನಾವು ಸುಮ್ಮನಿರಲ್ಲ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

    ಜಿಲ್ಲೆ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಬಳ್ಳಾರಿ ಇತಿಹಾಸದಲ್ಲಿ ನಡೆಯದ ಬೆಳವಣಿಗೆಗೆ ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರರೆಡ್ಡಿ ಕಾರಣರಾಗಿದ್ದಾರೆ. ನನ್ನ ಸ್ನೇಹಿತರಾಗಿರುವ ಶಾಸಕ ಸೋಮಶೇಖರರೆಡ್ಡಿ ವಿದ್ಯಾವಂತರಾಗಿದ್ದಾರೆ. ಆದರೆ, ಮಾತಿನ ಭರದಲ್ಲಿ ಒಂದು ಧರ್ಮದ ವಿರುದ್ಧ ತಪ್ಪು ಮಾತಾನಾಡಿದ್ದು, ಕ್ಷಮೆಯಾಚಿಸಬೇಕು. ದೂರನ್ನು ಮುಸ್ಲಿಮರೇ ನೀಡಬೇಕೆಂದಿಲ್ಲ. ನಮ್ಮನ್ನೇ ಮುಸ್ಲಿಮರೆಂದು ತಿಳಿದುಕೊಳ್ಳಿ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ. ಆದರೆ, ಈ ಬಗ್ಗೆ ಸೋಮಶೇಖರ ರೆಡ್ಡಿ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯವಾಗಿದ್ದು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಅವರನ್ನು ಯಾವಾಗ ಬೇಕಾದರೂ ಬಂಧಿಸಬಹುದು. ಸಿಎಎ ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಜನರಿಗೆ ತಿಳಿಸಲಿದ್ದೇವೆ ಎಂದು ಶಾಸಕ ನಾಗೇಂದ್ರ ಹೇಳಿದರು.

    ಮಾಜಿ ಎಂಎಲ್ಸಿ ನಿರಂಜನ ನಾಯ್ಡು, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಹನುಮ ಕಿಶೋರ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಪಂ ಸದಸ್ಯರಾದ ಅಲ್ಲಂ ಪ್ರಶಾಂತ, ಮಾನಯ್ಯ, ಮುಂಡ್ರಿಗಿ ನಾಗರಾಜ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ, ಮುಖಂಡರಾದ ಕುಡತಿನಿ ಶ್ರೀನಿವಾಸ, ರಾಮಪ್ರಸಾದ್, ಹುಮಾಯುನ್ ಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts