More

    ದೇವಸ್ಥಾನಕ್ಕೆ ಹಸುವನ್ನು ದಾನ ಮಾಡಿದ ಮುಸ್ಲಿಂ ಕುಟುಂಬ!

    ಅಸ್ಸಾಂ: ಮಹಾಪುರುಷ ಶ್ರೀಮಂತ ಶಂಕರದೇವ್ ಮತ್ತು ಅಜಾನ್ ಫಕೀರ್ ಅವರ ಆದರ್ಶಗಳಿಂದ ಸ್ಥಾಪಿಸಲ್ಪಟ್ಟ ಐತಿಹಾಸಿಕ ಶಿವಸಾಗರದಲ್ಲಿ ಮತ್ತೊಮ್ಮೆ ಮಾನವೀಯತೆಯ ಪ್ರತಿಬಿಂಬಕ್ಕೆ ಸಾಕ್ಷಿಯಾಗಿದೆ. ಒಗ್ಗಟ್ಟು ಮತ್ತು ಸೌಹಾರ್ದತೆಯ ವಿಶಿಷ್ಟ ಉದಾಹರಣೆ ಎಂಬಂತೆ ಶಿವಸಾಗರ ಜಿಲ್ಲೆಯ ಮುಸ್ಲಿಂ ಕುಟುಂಬವು ಐತಿಹಾಸಿಕ ಶಿವ ಡೋಲ್‌ಗೆ ತಾನು ಬೆಳೆಸಿದ ಹಸುವನ್ನು ದಾನವಾಗಿ ನೀಡಿದೆ.

    ಖಲೀಲುರ್ ರೆಹಮಾನ್ ಹಜಾರಿಕಾ ಅವರು ದೇವಸ್ಥಾನಕ್ಕೆ ಹಸುವನ್ನು ದಾನ ಮಾಡಿದ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

    ಇದನ್ನೂ ಓದಿ: ಅಖಂಡ ಶ್ರೀನಿವಾಸ ಮೂರ್ತಿಗೆ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್​ ಬ್ಲಾಕ್​ ಅಧ್ಯಕ್ಷ ಅಮಾನತು! 
    ಸುದ್ದಿಗಾರರೊಂದಿಗೆ ಮಾತನಾಡಿದ ರೆಹಮಾನ್, ಇದು ಅವರ ಸಾಕುಪ್ರಾಣಿ. ತನ್ನ ಮಗಳು ಚಿಕ್ಕಂದಿನಿಂದಲೂ ಪ್ರಾಣಿಗೆ ಆಹಾರವನ್ನು ನೀಡುತ್ತಿ ಸಾಕಿ ಸಲಹಿದ್ದಾಳೆ. ಈ ಹಸು ಬಿಸ್ಕಿಟ್‌ಗಳನ್ನು ಇಷ್ಟ ಪಡುತ್ತಿದ್ದ ಕಾರಣ ಅದಕ್ಕೆ ‘ಬಿಸ್ಕಿಟ್’ ಎಂದೇ ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

    ಇಂದು ಅಸ್ಸಾಮೀ ಹೊಸ ವರ್ಷದ ಮೊದಲ ಸೋಮವಾರವಾಗಿದೆ. ದೇವರ ಮುಂದೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲರ ಒಳಿತು ಬಯಸಿ ಪ್ರಾರ್ಥಿಸಲು ಈ ಮುಸ್ಲಿಂ ವ್ಯಕ್ತಿ ನನ್ನಲ್ಲಿ ಕೇಳಿಕೊಂಡಿದ್ದಾರೆ,” ಎಂದು ಶಿವ ಡೋಲ್‌ನ ಅರ್ಚಕ ಸುರೇಶ್ ಬೊರ್ತಾಕುರ್‌ ತಿಳಿಸಿದ್ದಾರೆ.

    ಇದನ್ನೂ ಓದಿ: ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ
    ದೇವಸ್ಥಾನದ ವಿಶೇಷತೆ: ಅಹೋಂದ ರಾಜ್ಯಭಾರದ ದಿನಗಳಲ್ಲಿ ಮಹಾಪುರುಷ್ ಶ್ರೀಮಂತಾ ಶಂಕರದೇವ್‌ ಹಾಗೂ ಆಜ಼ಾನ್ ಫಕೀರರು ಮಾನವೀಯ ತತ್ವಾದರ್ಶಗಳ ಮೇಲೆ ಈ ಐತಿಹಾಸಿಕ ಸ್ಥಳವನ್ನು ರಚಿಸಿದ್ದಾರೆ. 104 ಅಡಿ ಎತ್ತರವಿರುವ ದೇಗುಲದ ಕೇಂದ್ರ ಸ್ಥಾವರವು ದೇಶದಲ್ಲಿರುವ ಶಿವ ದೇಗುಲಗಳಲ್ಲೇ ಅತ್ಯಂತ ಎತ್ತರ ಸ್ಥಾವರವಾಗಿರುವ ಪೈಕಿ ಇದು ಒಂದು ಎನ್ನಲಾಗಿದೆ.

    ಬಿಜೆಪಿ ಕಚೇರಿ ಮುಂದೆ ‌ಹೈಡ್ರಾಮಾ: ಸಹೋದರರನ್ನು ಎಳೆದೊಯ್ದ ಬಂಡಾಯ ಅಭ್ಯರ್ಥಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts