More

    ಬಿಜೆಪಿ ಕಚೇರಿ ಮುಂದೆ ‌ಹೈಡ್ರಾಮಾ: ಸಹೋದರರನ್ನು ಎಳೆದೊಯ್ದ ಬಂಡಾಯ ಅಭ್ಯರ್ಥಿ..

    ಗುಂಡ್ಲುಪೇಟೆ: ಬಿಜೆಪಿ ಸೇರ್ಪಡೆಗೆ ಬಂದಿದ್ದ ಸಹೋದರ ಭರತ್‌ನನ್ನು ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿ ಉಚ್ಚಾಟನೆಗೊಂಡಿರುವ ಪಕ್ಷೇತರ ಅಭ್ಯರ್ಥಿ ಎಂ.ಪಿ ಸುನೀಲ್ ಎಳೆದೊಯ್ದಿದ್ದಾರೆ.

    ಇಂದು ಪಟ್ಟಣದ ‌ಬಿಜೆಪಿ‌ ಕಚೇರಿಯಲ್ಲಿ ಭರತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿತ್ತು. ಅದರಂತೆಯೇ ‌ಕಚೇರಿಗೆ ಆಗಮಿಸಿದ ಭರತ್ ಅವರನ್ನು ಬಿಜೆಪಿಯ‌ ಉಚ್ಚಾಟಿತ ಮುಖಂಡ ಸುನೀಲ್ ಮತ್ತು ಅವನ ‌ಬೆಂಬಲಿಗರು‌ ಏಕಾಏಕಿ ಏಳೆದುಕೊಂಡು ಹೋಗಿದ್ದಾರೆ.

    ಘಟನಾ ನಂತರ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಬಿಜೆಪಿ ಸೇರ್ಪಡೆಯಾಗಲು ಕಚೇರಿಗೆ ಆಗಮಿಸಿದ ವೃಷಬೇಂದ್ರಪ್ಪ ನವರ ಮಗ ಭರತ್ ಅವರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವು ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ.

    ಇಂದು ಶಾಸಕರ ನೇತ್ರತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವದನ್ನು ತಿಳಿದ ಸುನೀಲ್ ‌ ಹಲವು ಬಾರಿ ಕರೆ ಮಾಡಿ‌ ಬಿಜೆಪಿಗೆ ಸೇರ್ಪಡೆಯಾಗದಂತೆ ಒತ್ತಡ ಹೇರಿದರು ಇದಕ್ಕೆ ನಿರಾಕರಿಸಿದ ಭರತ್ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿದರು ಎನ್ನಲಾಗಿದೆ ಇದನ್ನು ‌ಅರಿತ ಸುನೀಲ್ ಬಿಜೆಪಿ ಕಚೇರಿಗೆ ಆಗಮಿಸಿ ಭರತ್ ನನ್ನು ಎಳೆದುಕೊಂಡು ಹೋಗಿದ್ದಾರೆ.

     ಇದನ್ನೂ ಓದಿ:  ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!

    ಮಾತು ಮಾತಿಗು ನಾವು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು ಎನ್ನುತ್ತಿರಲ್ಲ ಕಳೆದ ನಾಲ್ಕು ವರ್ಷಗಳಗಳಲ್ಲಿ ಯಾವ ಕಾರ್ಯಕ್ರಮದಲ್ಲಿ ಪಕ್ಷದ ಸಾಧನೆ ಬಗ್ಗೆ ತಿಳಿಸಿದ್ದಿರಿ, ಎಲ್ಲಿ ಪಕ್ಷದ ಬ್ಯಾನರ್ ಬಂಟಿಗ್ಸ್ ಕಟ್ಟಿದ್ದಿರಾ ಎಂದು ಪ್ರಶ್ನೆ ಮಾಡಿದರು.

    ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ವೃಷಬೇಂದ್ರಪ್ಪ ಮಗ ರಾಜಕಾರಣ ಬೆಳೆದರೆ ನಮಗೆ ಉಳಿಗಾಲ‌ ಎನ್ನುವ ದೃಷ್ಟಿಯಿಂದಲೇ ವೃಷಬೇಂದ್ರಪ್ಪನವರು ಕಟ್ಟಿದ ಜವಾಹರ್ ಶಿಕ್ಷಣ ಸಂಸ್ಥೆಯಲ್ಲಿ ಭರತ್ ಅವರಿಗೆ ‌ಯಾವುದೇ‌ ಹುದ್ದೆಯನ್ನು ನೀಡದೆ ಸ್ವ ಹಿತಾಸಕ್ತಿಯಿಂದ ವೃಷಬೇಂದ್ರಪ್ಪ ನವರ ವಂಶದ ಕುಡಿ ಭರತ್ ಅವರನ್ನು ‌ರಾಜಕೀಯವಾಗಿ ತುಳಿಯುವ ಪ್ರಯತ್ನ ನಡೆದಿದೆ ‌ಎಂದು ಆರೋಪಿಸಿದರು.

    ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು‌ ಬಂದಿದ್ದವರನ್ನ ಈ‌ ರೀತಿ ಬಲವಂತವಾಗಿ ಎಳೆದುಕೊಂಡು ಹೋಗಿರುವ ಕ್ರಮ ಸರಿಯಲ್ಲ ಭಾರತೀಯ ಜನತಾ ಪಾರ್ಟಿ ಇಂತಹ ಸಂಸ್ಕೃತಿಯನ್ನು ಸಹಿಸುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ‌ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್,ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಮೂಡ್ಲು ಸುನೀಲ್, ರೇವಣ್ಣ, ಚನ್ನಮಲ್ಲಿಪುರ ಬಸವಣ್ಣ, ಉಪಸ್ಥಿತರಿದ್ದರು.

    ಈ ಸುಂದರಿಗೆ ಇದ್ದಾರೆ ಬರೋಬ್ಬರಿ 7,000 ಮಂದಿ ಬಾಯ್‌ಫ್ರೆಂಡ್ಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts