More

    ಮುಸ್ಲಿಂ ಮಹಿಳೆ ತಲಾಖ್ ಎಂದ ತಕ್ಷಣ ಅದು ಕಾನೂನು ಸಮ್ಮತವಾಗುವುದಿಲ್ಲ: ಈ ಮಾತು ಈಗ್ಯಾಕೆ?

    ಅಹಮದಾಬಾದ್: ಮುಸ್ಲಿಂ ಮಹಿಳೆಯೋರ್ವಳು ತನ್ನ ಪತಿಗೆ “ತ್ವರಿತ ತಲಾಖ್” ನೀಡುವ ಮೂಲಕ ಸಂಬಂಧ ಕಳೆದುಕೊಳ್ಳಲೆತ್ನಿಸಿದ್ದು, ಆತನ ವಿರುದ್ಧ ದೌರ್ಜನ್ಯದ ದೂರು ದಾಖಲಿಸಿದ ಘಟನೆ ಇತ್ತೀಚೆಗೆ ನಡೆದಿದೆ.
    ಮುಮ್ತಾಜ್ ಶೇಖ್, ತನ್ನ ಪತಿ ಶೆರ್ಖಾನ್ ಪಠಾಣ್‌ಗೆ ತ್ವರಿತ ತ್ರಿವಳಿ ತಲಾಖ್ ನೀಡಿ ತನ್ನ ಮೂವರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಾಳೆ. ಸಣ್ಣ ಸಣ್ಣ ವಿಷಯಗಳಿಗೂ ಆತ ತನಗೆ ಕಿರುಕುಳ ನೀಡುತ್ತಾನೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.

    ಇದನ್ನೂ ಓದಿ: ಹಳಿಗಳ ಮೇಲೆ ಸೈಕಲ್ ಸವಾರಿ​; ಆನಂದ್​ ಮಹೀಂದ್ರಾ ಮೆಚ್ಚಿದ್ದಾರೆ ಈ ಸಂಶೋಧನೆ…!

    ಅದಾದ ನಂತರ ಮಕ್ಕಳನ್ನು ಭೇಟಿಯಾಗಲು ಮತ್ತು ತನ್ನ ಪತ್ನಿಯ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದ ಪಠಾಣ್ ಶನಿವಾರ ಆಕೆಯ ತವರು ಮನೆಗೆ ಬಂದಿದ್ದಾನೆ. ಆದರೆ ಆತನ ನಿರೀಕ್ಷೆಗೆ ವಿರುದ್ಧವಾಗಿ, ಆತನಿಗೆ ಆಕೆಯ ತಂದೆ ನಿಂದಿಸಿದ್ದಾರೆ. ನಂತರ ಆತ ಪೊಲೀಸರನ್ನು ಸಂಪರ್ಕಿಸಿ ಭಾನುವಾರ ಹಲ್ಲೆ ದೂರು ದಾಖಲಿಸಿದ್ದಾನೆ.
    ಪ್ರತ್ಯೇಕ ದೂರಿನಲ್ಲಿ ಆಕೆಯ ತಂದೆ ಕೂಡ ಆಕೆಯ ಪತಿಯ ವಿರುದ್ಧ ಹಲ್ಲೆಯ ದೂರು ದಾಖಲಿಸಿದ್ದಾರೆ.
    ಮಹಿಳೆಯ ಪತಿ ಈ ಪ್ರಕರಣವನ್ನು ವೆಜಲ್‌ಪುರ ಪೊಲೀಸ್ ಠಾಣೆಗೆ ಕೊಂಡೊಯ್ದ ನಂತರ ಭಾನುವಾರ ಈ ಘಟನೆ ಬೆಳಕಿಗೆ ಬಂದಿದೆ.

    ಇದನ್ನೂ ಓದಿ:  ಕೊವಿಡ್​-19 ಸೋಂಕಿಗೆ ಒಳಗಾದ ಅಮಿತ್​ ಷಾ ನಡೆ ಬಗ್ಗೆ ಅಚ್ಚರಿ, ಅನುಮಾನ ವ್ಯಕ್ತಪಡಿಸಿದ ಶಶಿ ತರೂರ್​

    “ಈ ತಲಾಖ್ ಅನ್ನು ದೇಶದ ಕಾನೂನುಗಳಡಿ ಅಥವಾ ಇಸ್ಲಾಮಿಕ್ ಸಂಹಿತೆಯಡಿ ಕಾನೂನುಬದ್ಧವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಆಕೆ (ಶೇಖ್) ಮತ್ತು ಆಕೆಯ ಕುಟುಂಬ ಇದನ್ನು ವಿಚ್ಛೇದನವೆಂದು ಪರಿಗಣಿಸಿದ್ದಾರೆ ಎಂದು ವೇಲಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಲ್.ಡಿ.ಒಡೆದರಾ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
    ಏತನ್ಮಧ್ಯೆ, ಇಸ್ಲಾಮಿಕ್ ಧರ್ಮಗುರು ಮುಫ್ತಿ ಅಸ್ಜಾದ್ ಕಸ್ಮಿ, ಇಸ್ಲಾಮಿಕ್ ಕಾನೂನು ಮಹಿಳೆ ತನ್ನ ಗಂಡನಿಗೆ ವಿಚ್ಛೇದನ ನೀಡಲು ಅವಕಾಶ ನೀಡದ ಕಾರಣ ಅಂತಹ ವಿಚ್ಛೇದನವು ನ್ಯಾಯಸಮ್ಮತವಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಗುರು ಮುಫ್ತಿ ಶಬ್ಬೀರ್, ಇಸ್ಲಾಮಿಕ್ ಕಾನೂನುಗಳ ಅಡಿ ವೈವಾಹಿಕ ಬಂಧನವನ್ನು ನಿರ್ವಹಿಸುವ ಅಥವಾ ಕೊನೆಗೊಳಿಸುವ ಹಕ್ಕು ಕೇವಲ ಗಂಡನಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಶಿಕ್ಷಣ ನೀತಿಗೆ ಕೆರಳಿದ ತಮಿಳುನಾಡು; ಬಿಜೆಪಿ ಅಂಗಪಕ್ಷ ವಿರೋಧಿಸುತ್ತಿರುವುದು ಏನನ್ನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts