More

    ನೀರಿನ ಸಮರ್ಪಕ ಪೂರೈಕೆ ಅಧಿಕಾರಿಗಳ ಜವಾಬ್ದಾರಿ; ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ


    ಮಸ್ಕಿ: ಐಸಿಸಿ ಸಭೆ ನಿರ್ಣಯದಂತೆ ಮೈಲ್ 76ರಿಂದ 104ರವರೆಗಿನ ಕೆಳ ಭಾಗದ ರೈತರಿಗೆ ನೀರು ಕೊಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಕೂಡಲೇ ವ್ಯವಸ್ಥೆ ಮಾಡಬೇಕು. ನಿರ್ಲಕ್ಷಿಸಿದರೆ ಕೆಳ ಭಾಗದ ರೈತರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

    ತುಂಗಭದ್ರಾ ಎಡದಂಡೆ ಕಾಲುವೆ 69ನೇ ಮೈಲ್‌ನಲ್ಲಿ ಬುಧವಾರ ನೀರಿನ ಪ್ರಮಾಣ ಪರಿಶೀಲಿಸಿ ಮಾತನಾಡಿದರು. ಎರಡ್ಮೂರು ದಿನಗಳಲ್ಲಿ ನಾಲೆಯ ಕೆಳಭಾಗಕ್ಕೆ ನೀರು ಬರದಿದ್ದರೆ ರೈತರು ತಾಳ್ಮೆ ಕಳೆದುಕೊಳ್ಳುತ್ತಾರೆ. ಅದಕ್ಕೆ ಅವಕಾಶ ಕಲ್ಪಿಸದಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಎಚ್ಚರಿಸಿದರು. ಎಸಿ ರಜನಿಕಾಂತ ಚವ್ಹಾಣ್, ತಹಸೀಲ್ದಾರ್ ಆರ್.ಕವಿತಾ, ಇಂಜಿನಿಯರ್ ಸೂರ್ಯಕಾಂತ, ಕಾರ್ಯನಿರ್ವಾಹಕ ಅಭಿಯಂತರ ಶರಣಪ್ಪರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಮನವರಿಕೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts