More

    ಕುಡಿವ ನೀರಿನಲ್ಲಿ ದುರ್ವಾಸನೆ

    ಮಸ್ಕಿ: ಕುಡಿವ ನೀರಿನಲ್ಲಿ ದುರ್ವಾಸನೆ ದೂರಿನ ಮೇರೆಗೆ ತಾಲೂಕಿನ ಬಳಗಾನೂರು ಪಪಂ ಮುಖ್ಯಾಧಿಕಾರಿ ಶರಣಬಸ್ಸಯ್ಯ ಸೋಮವಾರ ಗ್ರಾಮದ 6, 8, 9, ಮತ್ತು 10ನೇ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಪಂಚಾಯಿತಿಯಿಂದ ಸರಬರಾಜುಗೊಂಡ ಕುಡಿಯುವ ನೀರಲ್ಲಿ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾರ್ಡ್‌ಗೆ ಭೇಟಿ ನೀಡಿದ್ದ ಮುಖ್ಯಾಧಿಕಾರಿ, ಕುಡಿವ ನೀರು ಸರಬರಾಜು ಮಾಡಲು ಶಾಲಾವರಣದಲ್ಲಿ ಹಾಕಿರುವ ಬೋರ್‌ವೆಲ್ ಸ್ಥಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಮಹಿಳೆಯೊಬ್ಬರು, ಅಧಿಕಾರಿಗಳಿಗೆ ಕೈಮುಗಿದು, ಕುಡಿವ ನೀರಿನಲ್ಲಿ ಕೆಟ್ಟವಾಸನೆ ಬರುತ್ತಿದೆ. ದಯಮಾಡಿ ಶುದ್ಧ ನೀರು ಕೊಡಿ ಎಂದು ಅಂಗಲಾಚಿದರು.

    ಪಟ್ಟಣದ ಹಿರೇಹಳ್ಳದ ದಂಡೆಯಲ್ಲಿ ಶಾಲೆ ಇದ್ದು, ಇಲ್ಲಿಯೇ ಬೊರ್‌ವೆಲ್ ಕೊರೆಸಲಾಗಿದೆ. ಇದರ ಸುತ್ತ ಹೊಲ ಗದ್ದೆಗಳಿದ್ದು, ಬೆಳೆಗಳಿಗೆ ಸಿಂಪಡಿಸುವ ರಸಗೊಬ್ಬರ, ಕ್ರೀಮಿನಾಶಕ, ಹೆಚ್ಚುವರಿ ಮತ್ತು ಚರಂಡಿ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದಲೇ ಕುಡಿವ ನೀರು ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ದೂರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶರಣಬಸ್ಸಯ್ಯ, ಶೀಘ್ರವೇ ಇಂಜಿನಿಯರ್‌ರೊಂದಿಗೆ ಚರ್ಚಿಸಿ ಬೋರ್‌ವೆಲ್ ಸುತ್ತ ಜಮೀನುಗಳಿಂದ ಹರಿದು ಬರುವ ಮತ್ತು ಚರಂಡಿ ನೀರು ಸಂಗ್ರಹಕ್ಕೆ ಬ್ರೇಕ್ ಹಾಕುವುದಾಗಿ ಭರವಸೆ ನೀಡಿದರು. ವಾರ್ಡಿನ ನಾಗರಿಕರಾದ ಮೌನೇಶನಾಯಕ್, ರಮೆಶನಾಯಕ್, ಅಜಮೀರ್, ಬಸವರಾಜ ಒನಕಿ, ಪಪಂ ಸದಸ್ಯರಾದ ಹನುಮೇಶ ಹೂಗಾರ, ಮಂಜುನಾಥಸ್ವಾಮಿ, ಮುಖಂಡರಾದ ಸಂಜಯಕುಮಾರ ಜೈನ್, ವೀರೇಶಗುಣಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts