More

    ಮನಸಿನ ದುಗುಡಕ್ಕೆ ಸಂಗೀತವೇ ಮದ್ದು

    ಯಲಬುರ್ಗಾ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಕ್ರಿಯಾಶೀಲತೆ ಲಭಿಸುತ್ತದೆ ಎಂದು ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್ ಹೇಳಿದರು.

    ಇದನ್ನೂ ಓದಿ: ಮನಸಿನ ದುಗುಡಕ್ಕೆ ಸಂಗೀತವೇ ಮದ್ದು

    ತಾಲೂಕಿನ ಬೇವೂರು ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಯಶಸ್ವಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಂಗೀತಕ್ಕೆ ಸಂಕಷ್ಟ, ನೋವು ಮರೆಸುವ ದಿವ್ಯಶಕ್ತಿ ಇದೆ. ಸತತ ಅಭ್ಯಾಸ, ಪರಿಶ್ರಮ ಹಾಗೂ ಶ್ರದ್ಧೆಗೆ ಒಲಿಯುವ ಅದೃಷ್ಟದ ವಿದ್ಯೆಯಾಗಿದೆ. ಮನೋರೋಗಗಳನ್ನು ಗುಣಪಡಿಸುವ ಜತೆಗೆ ಆನಂದ ನೀಡುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ಸಂಗೀತದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.

    ನಿಲಯ ಪಾಲಕ ಮಂಜುನಾಥ ತಳವಾರ್, ಶಿಕ್ಷಕರಾದ ಪ್ರವೀಣ ಗಣವಾರಿ, ಮಹಮ್ಮದ್ ಜಹೀರ್, ದ್ಯಾಮಣ್ಣ ತುಪ್ಪದ, ಮಹಾಂತೇಶ ಗುರಿಕಾರ, ಚಂದ್ರಕಲಾ ಶಿರಿಮನಿ, ಅಹಮ್ಮದ್‌ನೂರ್‌ಪಾಷಾ, ಸಂಗೀತ ಗಾಯಕ ಶ್ರೀಶೈಲ ಬಡಿಗೇರ್, ಕೇಮಪ್ಪ ದೇವರಮನಿ, ಗಾಯತ್ರಿ ಮಂತ, ಸಹನಾ ಡಂಬಳ, ಸಂಗೀತ ಶಿಕ್ಷಕ ಶಿವಪ್ರಶಾಂತ ಪಾಟೀಲ್, ತಬಲಾವಾದಕ ಗ್ಯಾನೇಶ ಬಡಿಗೇರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts