More

    ರೋಗಗಳ ನಿವಾರಣೆಗೆ ಯೋಗ ಮದ್ದು – ಹಂಪಿ ವಿವಿಯ ಡೀನ್ ಹಳ್ಳಿಕೇರಿ ಹೇಳಿಕೆ

    ಕಂಪ್ಲಿ: ಆಧುನಿಕ ಜೀವನ ಶೈಲಿಯಿಂದ ಎದುರಾಗುತ್ತಿರುವ ರೋಗಗಳ ನಿವಾರಣೆಗೆ ಯೋಗ ಮದ್ದು ಎಂದು ಹಂಪಿ ಯೋಗ ಅಧ್ಯಯನ ಪೀಠದ ಡೀನ್ ಡಾ.ಎಫ್.ಟಿ.ಹಳ್ಳಿಕೇರಿ ಹೇಳಿದರು.

    ಇಲ್ಲಿನ ಓದ್ಸೋ ಜಡೆಮ್ಮ ಗುರುಸಿದ್ಧಯ್ಯನವರ ಪ್ರೌಢಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.

    ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ್ ಮಾತನಾಡಿ, ಯೋಗ, ಧ್ಯಾನ ಕಲಿಯಲು ಮಕ್ಕಳು ಮತ್ತು ಪಾಲಕರಿಗೆ ಬೇಸಿಗೆ ರಜಾ ದಿನಗಳು ವರದಾನವಾಗಿವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಯೋಗಾಭ್ಯಾಸ ರೂಢಿಸಬೇಕು ಎಂದರು. ಯೋಗ ಶಿಕ್ಷಕ ಎಸ್.ಜಿ.ಚಿತ್ರಗಾರ್ ಯೋಗ ಗೀತೆಗಳನ್ನು ಹಾಡುವ ಮೂಲಕ ಜಾಗೃತಿಗೊಳಿಸಿದರು.

    ಇದನ್ನೂ ಓದಿ: ನಿತ್ಯ ಯೋಗಾಭಾಸ್ಯ ಮಾಡುವುದರಿಂದ ಮನಸ್ಸಿನ ವಿಕಾಸ ಸಾಧ್ಯ

    ರಾಜ್ಯ ಯುವಜನ ಪ್ರಭಾರಿ ಕಿರಣ್‌ಕುಮಾರ್, ಪ್ರಮುಖರಾದ ಸತ್ಯ ಅಪ್ಪಾಜಿ, ವಿಟೋಬಪ್ಪ, ಸಮಿತಿ ನಗರ ಅಧ್ಯಕ್ಷ ಕೊಟ್ರೇಶ್, ಪದಾಧಿಕಾರಿಗಳಾದ ಕಲ್ಗುಡಿ ರತ್ನಮ್ಮ, ಭೀಮನಗೌಡ, ಕಿಶೋರ್, ವಿಜಯಕುಮಾರ್, ಚಂದ್ರಪ್ಪ, ತಿಪ್ಪೇಸ್ವಾಮಿ, ಶಂಭು, ನಾಗಪ್ಪ, ನಾಗರತ್ನಮ್ಮ, ನಿರ್ಮಲಮ್ಮ, ಭವಾನಿ, ಸತ್ಯನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts