More

    ಸಂಗೀತಕ್ಕೆ ಜ್ಞಾನದೀವಿಗೆ ಬೆಳಗುವ ಶಕ್ತಿ

    ಹುಣಸೂರು: ಸಂಗೀತ ಜ್ಞಾನದೀವಿಗೆಯನ್ನು ಬೆಳಗುವ ಮಹತ್ತರ ಕಾರ್ಯ ಮಾಡುತ್ತದೆ ಎಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಶ್ರೀ ಪಂಚಾಕ್ಷರಿ ಗವಾಯಿಗಳ 132ನೇ ಜನ್ಮದಿನ ಹಾಗೂ ಶ್ರೀಪುಟ್ಟರಾಜ ಗವಾಯಿಗಳ 110ನೇ ಜಯಂತಿ ಅಂಗವಾಗಿ ನಗರದ ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸುಗಮ ಸಂಗೀತ ಪಾಠಶಾಲೆ ಹಾಗೂ ನಾದತರಂಗ ಸಂಗೀತ ಶಾಲೆ ಸಹಯೋಗದಲ್ಲಿ ಸೋಮವಾರ ಶಾಸ್ತ್ರಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಂಗೀತ ಈ ನೆಲದ ಕಲೆ, ಸಂಸ್ಕೃತಿ ಮತ್ತು ಸಂಸ್ಕಾರವಾಗಿದೆ. ಪರಿಣಾಮಕಾರಿ ಸಮಾಜ ನಿರ್ಮಾಣದಲ್ಲಿ ಸಂಗೀತದ ಪಾತ್ರ ಬಹುಮುಖ್ಯವಾಗಿದೆ. ಈ ಹಿಂದೆ ಮಕ್ಕಳನ್ನು ಮಲಗಿಸುವಾಗ ಸಂಗೀತ ಆಲಿಸುವ ಅಭ್ಯಾಸ ಇತ್ತು. ಆದರೆ, ಇಂದು ಮೊಬೈಲ್ ನೀಡಿ ಮಲಗಿಸುವ ಕೆಟ್ಟ ಪರಿಪಾಠ ನಡೆದಿರುವುದು ದುರಂತವಾಗಿದೆ. ಮನಸಿನ ವ್ಯಾಕುಲತೆ ತೊಲಗಿಸಲು ಸಂಗೀತ ಅವಶ್ಯಕ. ಸಂಗೀತದ ಮೂಲಕ ಬದುಕನ್ನು ಪರಿಣಾಮಕಾರಿಯಾಗಿ ಮುನ್ನಡೆಸೋಣ, ಸಂಭ್ರಮಿಸೋಣ ಎಂದು ಆಶಿಸಿದರು.

    ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ, ಡಾ.ಗುರುಮೂರ್ತಿ, ಹಳೇಬೀಡು ಗ್ರಾಪಂ ಪಿಡಿಒ ರಾಮಣ್ಣ, ನಗರದ ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟರು, ಪಿಡಿಒ ಶ್ರೀ ಶೈಲಾ, ಪುಟ್ಟರಾಜಗವಾಯಿ ಪಾಠಶಾಲೆಯ ಮಾಲೀಕ ಪಿ.ಅರ್ಚನಾ ಸಂಗೀತ ಕಲಾವಿದ ರಾಜು ಉಪ್ಪಾರ ತಲವಾಗಲು, ಪವನ್ ಕುಮಾರ್, ಸೋಮಣ್ಣ, ಸಿದ್ದು ಹೊನ್ನಾಳಿ, ಬಸವಣ್ಣಯ್ಯ, ರಾಬರ್ಟ್, ಸಿಂಗೇಶ್, ಮುಖಂಡ ಪಾಪಣ್ಣ, ರಾಣಿ ರವಿಕುಮಾರ್, ಕೆ.ಪಿ.ರಾಘವೇಂದ್ರ, ಜಿ.ಎಸ್.ಜಗದೀಶ, ಅಶೋಕ್ ಕುಮಾರ್, ರಾಜನಾಯಕ, ಮಹೇಶ್ ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts