More

    ಮುಷ್ಕರಕ್ಕೆ ಗ್ರಾಹಕರು ಹೈರಾಣ ; ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿಬ್ಬಂದಿ ವಿರೋಧ

    ತುಮಕೂರು: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಮುಷ್ಕರ ಆರಂಭಿಸಿದ್ದು, ಸೇವೆಗಳಿಲ್ಲದೆ ಗ್ರಾಹಕರು ಹೈರಾಣರಾಗಿದ್ದಾರೆ. ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಕಚೇರಿ ಮುಂಭಾಗ ಜವಾಯಿಸಿರುವ ನೌಕರರು ಕೇಂದ್ರ ಸರ್ಕಾರದ ನೀತಿ ಖಂಡಿಸಿ ೋಷಣೆಗಳನ್ನು ಕೂಗಿ, ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    ಯುಎಫ್‌ಬಿಯು ಸಂಚಾಲಕ ವಾದಿರಾಜ್ ವಾತನಾಡಿ, ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ೋಷಿಸಿದೆ. ಐಡಿಬಿಐ ಬ್ಯಾಂಕ್ ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ, ಆಸ್ತಿ ವಸೂಲಿ ಕಂಪನಿಯ ಸ್ಥಾಪನೆ, ಜೀವ ವಿವಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ವಿದೇಶಿ ಬಂಡವಾಳ ಹೂಡಿಕೆ, ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತ ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ ಎಂದರು.

    ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯದ ಲೂಟಿಗೆ ಅವಕಾಶ ನೀಡಿದಂತಾಗುತ್ತದೆ, ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಉದ್ಯೋಗಾವಕಾಶಗಳು ಹಾಗೂ ಮೀಸಲಾತಿಯಂತಹ ಸಾವಾಜಿಕ ನ್ಯಾಯಕ್ಕೆ ಧಕ್ಕೆಯಾಗುವುದರ ಜತೆಗೆ ಶಾಖೆಗಳ ಮುಚ್ಚುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಸಾವಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಾಡುವ ಕ್ರಮ ಕೈ ಬಿಡಬೇಕು ಎಂದು ಒತ್ತಾಯಿಸಿದರು.

    1969ರಲ್ಲಿ 14 ಮತ್ತು 1980ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಗಿತ್ತು, ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕ್‌ಗಳ ಮುಳುಗುವಿಕೆ ಸಾವಾನ್ಯವಾಗಿತ್ತು. 1947 ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕ್‌ಗಳು ಮುಳುಗಿದವು. ಈ ಬ್ಯಾಂಕ್‌ಗಳ ಠೇವಣಿದಾರರು ಉಳಿತಾಯ ಕಳೆದುಕೊಂಡರು ಎಂದು ತಿಳಿಸಿದರು.

    ಎಸ್‌ಬಿಐ ನಟರಾಜು ವಾತನಾಡಿ, ದೇಶದಲ್ಲಿ ಇದುವರೆಗೂ 550ಕ್ಕೂ ಹೆಚ್ಚು ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿವೆ. ಆದರೆ, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿಯಾಗಿರುವ ನಿದರ್ಶನಗಳಿಲ್ಲ. 2009-10ರಲ್ಲಿ 77 ಸಾವಿರ ಕೋಟಿ ರೂ. ಲಾಭ ಮತ್ತು 2019-20ರಲ್ಲಿ 1 ಲಕ್ಷ 77 ಕೋಟಿ ರೂ. ಲಾಭ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭದಲ್ಲಿವೆ ಎಂಬುದನ್ನು ಸೂಚಿಸುತ್ತದೆ ಎಂದರು. ಸಂಯುಕ್ತ ವೇದಿಕೆಯ ನಟರಾಜು, ಸರ್ವಮಂಗಳ, ಮಹೇಶ್ವರಪ್ಪ, ಶಂಕರಪ್ಪ, ರಾಮಕೃಷ್ಣೇಗೌಡ, ವೆಂಕಟೇಶಮೂರ್ತಿ, ರಾಮಕೃಷ್ಣ, ಜಾನಕೀರಾಂಬಾಬು ಇತರರಿದ್ದರು.

    ಗ್ರಾಹಕರ ಪರದಾಟ: 2 ದಿನ ಮುಷ್ಕರ ನಡೆಸುತ್ತಿದ್ದು, ಗ್ರಾಹಕರು ಪರದಾಡುವಂತಾಗಿದೆ, ಪದೇಪದೆ ಮುಷ್ಕರ ನಡೆಸುವುದರಿಂದ ಗ್ರಾಹಕರು ದಿನನಿತ್ಯದ ವಹಿವಾಟು ನಡೆಸಲು ತೊಂದರೆಗೆ ಒಳಗಾಗುವಂತಾಗಿದೆ. ಸರ್ಕಾರ ಹಾಗೂ ಬ್ಯಾಂಕ್ ಸಿಬ್ಬಂದಿ ಹಗ್ಗ-ಜಗ್ಗಾಟದಲ್ಲಿ ಗ್ರಾಹಕರೇಕೆ ತೊಂದರೆ ಅನುಭವಿಸಬೇಕು ಎಂದು ಬ್ಯಾಂಕ್ ಮುಂದೆಯೇ ಗ್ರಾಹಕರು ಆಕ್ರೋಶ ಹೊರಹಾಕಿದರು. ಪದೇಪದೆ ಮುಷ್ಕರದ ಗುಮ್ಮ ತೋರಿಸುವ ಬದಲು ನಿರ್ಣಾಯಕ ಹೋರಾಟ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಂಡು ಗ್ರಾಹಕರನ್ನು ಉಳಿಸಲಿ ಎಂದು ಎಸ್‌ಬಿಐ ಬ್ಯಾಂಕ್ ಮುಂದೆ ಗ್ರಾಹಕ ರಂಗಧಾಮಯ್ಯ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts