ಅಥಣಿ: ಶಿವಯೋಗದ ಮೇರುಪರ್ವತ ಮುರುಘೇಂದ್ರ ಶಿವಯೋಗಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಇಂಗಳೇಶ್ವರ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಶೆಟ್ಟರಮಠದ ಮರುಳಸಿದ್ಧ ಶಿವಯೋಗಿಗಳ 131ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮರ ಚರಿತಾಮೃತ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಧರೆ ಪಾವನಗೊಳಿಸಿ ಅಧ್ಯಾತ್ಮದ ದೀಪ ನಿರಂತರ ಬೆಳಗುವಂತೆ ಮಾಡಿದವರು ಶೆಟ್ಟರಮಠದ ಮರುಳಸಿದ್ಧ ಶಿವಯೋಗಿಗಳು. ಸಂಸ್ಕಾರವಂತರಾಗಿ ಬಾಳಿ ಸಂಸಾರ ಸಸಾರ ಮಾಡಿಕೊಳ್ಳಬೇಕು ಎಂದರು.
ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ. ಶ್ರೀಮಠದ ಹೊಸ ಭವನ ನಿರ್ಮಾಣ ಕಾರ್ಯ ನಡೆದಿದೆ. ಭಕ್ತರ ಸಹಕಾರದಿಂದ ಮಠದ ಅಭಿವೃದ್ಧಿ ಮಾಡಲಾಗುವುದು ಎಂದರು.
ನದಿಇಂಗಳಗಾವಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮಾನವ ಕಲ್ಯಾಣಕ್ಕಾಗಿ ನಾಡಿನ ಸಂತರು ಬದುಕನ್ನೇ ಅರ್ಪಿಸಿದ್ದಾರೆ. ಸತ್ಯ ಶುದ್ಧ ಕಾಯಕ, ದಾಸೋಹದಂತಹ ಆಧ್ಯಾತ್ಮಿಕ ಚಿಂತನೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಸನ್ಮಾರ್ಗದಲ್ಲಿ ಸಾಗೋಣ ಎಂದರು.
ಯುವ ಉದ್ಯಮಿ ಮಲ್ಲೇಶ ಸವದಿ, ಕೇದಾರಪ್ಪ ತೇರದಾಳ, ಸಂಗಪ್ಪ ಉಣ್ಣಿ, ಸಂಜಯ ತೆಲಸಂಗ, ರಾಜು ಬಿಳ್ಳೂರ, ಅಪ್ಪಾಸಾಬ ಚುನಮುರಿ, ಶಿವಲಿಂಗ ಢವಳೇಶ್ವರ, ರೇವಪ್ಪ ಸೊಳಸಿ, ಶಂಕರ ಬಡಿಗೇರ, ಆನಂದ ಸವದಿ, ಮಹಾಂತೇಶ ಉಕ್ಕಲಿ ಇತರರಿದ್ದರು.