More

    ಹೇಳಿಕೆ ಬದಲಿಸಿದ ಧಾರವಾಡ ಮುರುಘಾ ಶ್ರೀ

    ಧಾರವಾಡ: ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮಾ. ೨೭ರಂದು ನಡೆದಿದ್ದ ಮಠಾಽÃಶರ ಚಿಂತನ- ಮಂಥನ ಸಭೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ನಗರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಗೊಂದಲ ಮೂಡಿಸಿದೆ.
    ಸಭೆಯ ಮಾರನೇ ದಿನ ಅಂದರೆ ಮಾ. ೨೮ರಂದು ಹೇಳಿಕೆ ನೀಡಿದ್ದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ನೀಡಿರುವ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬAಧವಿಲ್ಲ ಎಂದಿದ್ದರು.

    ಪತ್ರ ಬರೆದುಕೊಂಡು ಬಂದು ಓದಿಸಿದ್ದರು:
    ರಾಜಕೀಯ ಹೇಳಿಕೆಗೂ ಮಠಕ್ಕೂ ಸಂಬ0ಧವಿಲ್ಲ. ದಿಂಗಾಲೇಶ್ವರ ಶ್ರೀಗಳ ಹೇಳಿಕೆ ವೈಯಕ್ತಿಕ ವಿಚಾರ ಎಂದಿದ್ದ ಡಾ. ಮಲ್ಲಿಕಾರ್ಜುನ ಶ್ರೀಗಳು ಶುಕ್ರವಾರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. `2 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಮಠಾಽÃಶರ ಚಿಂತನ- ಮಂಥನ ಸಭೆಯಲ್ಲಿ ನಾವು ಭಾಗವಹಿಸಿದ್ದೆವು. ಆ ಸಭೆಯಲ್ಲಿ ಮಠಾಽÃಶರು ಕೈಗೊಂಡಿದ್ದ ನಿರ್ಣಯಕ್ಕೆ ಅನುಮೋದನೆ ನೀಡಿ ಬಂದಿದ್ದೆವು. ನಿನ್ನೆ (ಮಾ. ೨೮) ಕೆಲವರು (????) ಮಠಕ್ಕೆ ಬಂದು ನಮ್ಮ ಮೇಲೆ ಒತ್ತಡ ಹಾಕಿದರು. ನನ್ನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ನಾನು ಹೆಚ್ಚಿಗೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರೇ ನನ್ನ ಮೇಲೆ ಒತ್ತಡ ಹಾಕಿ ಅವರೇ ಪತ್ರವನ್ನು ಬರೆದುಕೊಂಡು ಬಂದು ಸಹಿ ಮಾಡಿಸಿ ನನ್ನಿಂದ ಓದಿಸಿದ್ದಾರೆ. ಒತ್ತಾಯಪೂರ್ವಕವಾಗಿ ನೀಡಿದ್ದ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ನಾವು ಹಿಂಪಡೆಯುತ್ತೇವೆ’ ಎಂದು ಶ್ರೀಗಳು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts