More

    ಫಿಲಂ ಚೇಂಬರ್​ನಲ್ಲಿ ‘ಉರಿಗೌಡ-ನಂಜೇಗೌಡ’ ಹೆಸರು ನೋಂದಾಯಿಸಿದ ಮುನಿರತ್ನ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿರುವ ಹೆಸರುಗಳೆಂದರೆ ಅದು ಉರಿಗೌಡ, ನಂಜೇಗೌಡ ಅವರುಗಳದ್ದು. ಈಗ ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸುವುದಕ್ಕೆ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಮುಂದಾಗಿದ್ದು, ಮೊದಲ ಹಂತವಾಗಿ ‘ಉರೀಗೌಡ-ನಂಜೇಗೌಡ’ ಎಂಬ ಹೆಸರನ್ನು ನೋಂದಾಯಿಸಿದ್ದಾರೆ.

    ಇದನ್ನೂ ಓದಿ: ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​

    ಈ ಸಂಬಂಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವನ್ನು ನೀಡಿದ್ದು, ಗುರುವಾರ ಶೀರ್ಷಿಕೆ ನೋಂದಾಯಿಸಲಾಗಿದೆ. ‘ಉರಿಗೌಡ-ನಂಜೇಗೌಡ’ ಅಥವಾ ‘ನಂಜೇಗೌಡ-ಉರೀಗೌಡ’ ಎಂಬ ಹೆಸರುಗಳನ್ನು ತಮಗೆ ನೀಡಬೇಕೆಂದು ಅವರು ಮನವಿ ಸಲ್ಲಿಸಿದ್ದಾರೆ. ಈ ಹೆಸರುಗಳು ಮುನಿರತ್ನ ಅವರ ವೃಷಭಾದ್ರಿ ಪ್ರೊಡಕ್ಷನ್ಸ್​ ಬ್ಯಾನರ್​ನಡಿ ನೋಂದಾಯಿತವಾಗಿದೆ.

    ಉರಿಗೌಡ ಮತ್ತು ನಂಜೇಗೌಡ ಎಂಬ ಹೆಸರುಗಳು ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಈ ಹೆಸರುಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಟಿಪ್ಪು ಸುಲ್ತಾನ್​ಗೆ ಉರಿಗೌಡ ಮತ್ತು ನಂಜೇಗೌಡ ಅವರು ಬುದ್ದಿ ಕಲಿಸಿದ ರೀತಿಯಲ್ಲೇ ಸಿದ್ದರಾಮಯ್ಯನವರಿಗೆ ಮತದಾರರು ಬುದ್ದಿ ಕಲಿಸಬೇಕು ಎಂದು ಹೇಳಿದ್ದರು.

    ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನ್​ ಅವರನ್ನು ಕೊಂದಿದ್ದು ಅದೇ ಉರಿಗೌಡ ಮತ್ತು ನಂಜೇಗೌಡ ಎಂಬ ವಿಷಯವನ್ನು ಭಾರತೀಯ ಜನತಾ ಪಾರ್ಟಿ ಪ್ರತಿಪಾದಿಸುವುದರ ಜತೆಗೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸುವ ದಿನದಂದು ಉರೀಗೌಡ ಮತ್ತು ನಂಜೇಗೌಡ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು.

    ಇದನ್ನೂ ಓದಿ: ತನುಜಾ ಚಿತ್ರ ವೀಕ್ಷಿಸಿದ ಸುತ್ತೂರು ಶ್ರೀ; ಮಠದ 4 ಸಾವಿರ ವಿದ್ಯಾರ್ಥಿಗಳೊಂದಿಗೆ ವೀಕ್ಷಣೆ

    ಇಷ್ಟೆಲ್ಲಾ ವಿವಾದಗಳನ್ನು ಹುಟ್ಟುಹಾಕಿರುವ ಉರಿಗೌಡ ಮತ್ತು ನಂಜೇಗೌಡರ ಹೆಸರನ್ನು ಇದೀಗ ಮುನಿರತ್ನ ನೋಂದಾಯಿಸಿದ್ದಾರೆ. ಈ ಹೆಸರುಗಳಲ್ಲಿ ಅವರು ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದರೂ, ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ, ಯಾರು ನಿರ್ದೇಶಿಸುತ್ತಾರೆ ಮುಂತಾದ ಯಾವುದೇ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.

    ಭೋಜ್​ಪುರಿಯಲ್ಲೂ ಬೆಸ್ಟ್; ಪರಭಾಷೆಯಲ್ಲೂ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿ ಪಡೆದ ಹರ್ಷಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts