More

    ಮುಂದುವರೆದ ಅಧ್ಯಾಯ ಸಿನಿಮಾ ವಿಮರ್ಶೆ: ಕಳಚಿದ ಕೊಂಡಿಗಳ ಹುಡುಕಾಟದಲ್ಲಿ…

    ಚಿತ್ರ: ಮುಂದುವರೆದ ಅಧ್ಯಾಯ
    ನಿರ್ಮಾಣ: ಕಣಜ ಎಂಟರ್‌ಪ್ರೈಸಸ್
    ನಿರ್ದೇಶನ: ಬಾಲು ಚಂದ್ರಶೇಖರ್
    ತಾರಾಗಣ: ಆದಿತ್ಯ, ಅಜಯ್ ರಾಜ್, ಸಂದೀಪ್, ಆಶಿಕಾ ಸೋಮಶೇಖರ್ ಮುಂತಾದವರು

    ಮಂಗಳೂರಿನಲ್ಲಿ ಸೀಝ್ ಆಗಿರುವ ಕೆಜಿಗಟ್ಟಲೆ ಡ್ರಗ್ಸ್ ಅದ್ಹೇಗೋ ಕಳೆದುಹೋಗುತ್ತದೆ. ಮಲ್ಲಿಗೆಪುರದಲ್ಲಿ ನಡೆಯಬೇಕಿದ್ದ ಮೆಡಿಕಲ್ ಕ್ಯಾಂಪ್ ಇದ್ದಕ್ಕಿದ್ದಂತೆ ರದ್ದಾಗುತ್ತದೆ. ಅಚ್ಚರಿ ಎನ್ನುವ ಡಾಕ್ಟರ್ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಅವಳ ಹುಡುಕಾಟದಲ್ಲಿ ್ರೆಂಡ್ ಸಾಕ್ಷಿ ಸಹ ಮಿಸ್ ಆಗುತ್ತಾಳೆ. ಕಂಟ್ರಾಕ್ಟರ್ ಒಬ್ಬ ಕುಡಿದು ಕಾರ್ ಓಡಿಸಿ ಆ್ಯಕ್ಸಿಡೆಂಟ್ ಮಾಡುತ್ತಾನೆ. ಪೊಲೀಸರು ಆ ಕಾಂಟ್ರಾಕ್ಟರ್‌ನ ಅರೆಸ್ಟ್ ಮಾಡೋದಕ್ಕೆ ಮನೆಗೆ ಹೋದಾಗ, ಅವನು ಸತ್ತು ಬಿದ್ದಿರುತ್ತಾನೆ …

    ಹೀಗೆ ಶಿವರಾತ್ರಿಯ ಹಿಂದಿನ ರಾತ್ರಿ ಒಂದಿಷ್ಟು ಘಟನೆಗಳು ನಡೆಯುತ್ತಿವೆ. ಮೇಲ್ನೋಟಕ್ಕೆ ಒಂದಕ್ಕೆ ಸಂಬಂಧವಿಲ್ಲದಂತೆ ಕಂಡರೂ, ಎಲ್ಲ ಕೊಂಡಿಗಳಿಗೂ ಒಂದು ಕನೆಕ್ಷನ್ ಇದೆ. ಹೀಗೆ ಕಳಚಿರುವ ಕೊಂಡಿಗಳನ್ನು ಸೇರಿಸುವ ಜವಾಬ್ದಾರಿಯನ್ನು ರ್ ಆ್ಯಂಡ್ ಟ್ ಎಸಿಪಿ ಬಾಲಾಗೆ ವಹಿಸಲಾಗುತ್ತದೆ. ಬಹಳ ದಿನಗಳ ನಂತರ ಒಂದೊಳ್ಳೆಯ ಕಥೆ ಸಿಕ್ಕಿದೆ, ಇದಕ್ಕೆ ನಾನೇ ಕ್ಲೈಮ್ಯಾಕ್ಸ್ ಬರೆಯುತ್ತೇನೆ ಎಂದು ಖುಷಿಯಿಂದ ಬಾಲ ಒಪ್ಪಿಕೊಳ್ಳುತ್ತಾನೆ. ಆದರೆ, ಮಿಸ್ಸಿಂಗ್ ಲಿಂಕ್‌ಗಳನ್ನೆಲ್ಲ ಸೇರಿಸಿ, ಕಥೆಯ ಕ್ಲೈಮ್ಯಾಕ್ಸ್ ಬರೆಯುವುದಕ್ಕೆ ಅವನಿಂದ ಸಾಧ್ಯವಾ?

    ‘ಮುಂದುವರೆದ ಅಧ್ಯಾಯ’ ಒಂದು ಪಕ್ಕಾ ಥ್ರಿಲ್ಲರ್, ಮಿಸ್ಟ್ರಿ ಚಿತ್ರ. ಸಾಕಷ್ಟು ಮೈಂಡ್‌ಗೇಮ್ ಇರುವ ಚಿತ್ರ. ಹಾಗೆಯೇ ಪ್ರೇಕ್ಷಕರ ಗ್ರಹಿಕೆಗೆ ಅಷ್ಟು ಸುಲಭವಾಗಿ ನಿಲುಕದ ಚಿತ್ರವೂ ಹೌದು. ಏಕೆಂದರೆ, ಇಲ್ಲಿ ಹಲವು ಬಿಡಬಿಡಿ ಘಟನೆಗಳಿವೆ, ಹಲವು ಪಾತ್ರಗಳು ಬಂದು ಹೋಗುತ್ತವೆ. ಯಾರು, ಏನು, ಎತ್ತ ಎಂದೆಲ್ಲ ಅರ್ಥವಾಗುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಒಮ್ಮೆ ಗ್ರಹಿಕೆಗೆ ಸಿಕ್ಕ ಮೇಲೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಅಲ್ಲಿಯವರೆಗೂ ತಾಳ್ಮೆ ಬಹಳ ಮುಖ್ಯ. ಸ್ವಲ್ಪ ತಾಳ್ಮೆಗೆಟ್ಟರೂ ಚಿತ್ರ ಮಜ ಎನಿಸುವುದಿಲ್ಲ. ಹಾಗಾಗಿ ಚಿತ್ರ ಮುಗಿಯುವವರೆಗೂ ಯಾವುದೇ ನಿರ್ಧಾರಕ್ಕೆ ಬರುವಂತಿಲ್ಲ. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಇನ್ನೊಂದು ಟ್ವಿಸ್ಟ್ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ.

    ಹಾಗೆ ನೋಡಿದರೆ, ಚಿತ್ರದ ಅವಧಿ ಕೇವಲ ಎರಡು ಗಂಟೆಯಷ್ಟೇ. ಆದರೂ ಕೆಲವು ಕಡೆ ಎಳೆದಂಗಾಗಿದೆ. ಬಹುಶಃ ಒಂದೇ ವಿಷಯವನ್ನು ಬೇರೆಬೇರೆ ದೃಷ್ಟಿಕೋನಗಳಿಂದ ತೋರಿಸುವುದರಿಂದ, ಪ್ರೇಕ್ಷಕರಿಗೆ ಒಂದೇ ವಿಷಯ ಪುನರಾವರ್ತನೆಯಾಗುತ್ತಿದೆ ಎಂದನಿಸುತ್ತದೆ. ಚಿತ್ರತಂಡದ ಮಟ್ಟಿಗೆ ಇದೊಂದು ಹೊಸ ನಿರೂಪಣಾ ಶೈಲಿಯಾದರೂ, ಪ್ರೇಕ್ಷಕರಿಗೆ ಕೆಲವೊಮ್ಮೆ ಕಿರಿಕಿರಿಯಾಗುತ್ತದೆ. ಇದೆಲ್ಲವನ್ನೂ ಹೊರತುಪಡಿಸಿದರೆ, ಥ್ರಿಲ್ಲರ್ ಪ್ರಿಯರಿಗೆ ‘ಮುಂದುವರೆದ ಅಧ್ಯಾಯ’ ಖುಷಿಕೊಡುತ್ತದೆ.

    ಇದೊಂದು ಪಕ್ಕಾ ತಂತ್ರಜ್ಞರ ಚಿತ್ರ. ಹಾಗಾಗಿ ಆದಿತ್ಯ ಬಿಟ್ಟರೆ ಮಿಕ್ಕಂತೆ ಯಾವ ಕಲಾವಿದರ ಇರುವಿಕೆಯೂ ಬಗ್ಗೆಯೂ ಅಷ್ಟಾಗಿ ಪ್ರೇಕ್ಷಕರ ಗಮನ ಹೋಗುವುದಿಲ್ಲ. ಮಿಕ್ಕಂತೆ ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ, ಶ್ರೀಕಾಂತ್ ಅವರ ಸಂಕಲನ ಮತ್ತು ದಿಲೀಪ್ ಚಕವರ್ತಿ ಅವರ ಛಾಯಾಗ್ರಹಣ ಪ್ರೇಕ್ಷಕರ ಗಮನಸೆಳೆಯುತ್ತದೆ.

    – ಚೇತನ್ ನಾಡಿಗೇರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts