More

    ಚುನಾವಣಾ ಹಬ್ಬದಲ್ಲಿ ತಪ್ಪದೇ ಮತ ಚಲಾಯಿಸಿ: ಸಿ.ಬಿ.ದೇವರಮನಿ

    ಮುಂಡರಗಿ: ಈಗ ಹಬ್ಬದ ಸೀಸನ್ ಶುರುವಾಗಿದೆ. ಅದರಲ್ಲಿ ಚುನಾವಣೆಯು ಒಂದು ಹಬ್ಬ. ಈ ಹಬ್ಬದಲ್ಲಿ ಎಲ್ಲರೂ ತಪ್ಪದೇ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಹೇಳಿದರು.

    ಜಿಲ್ಲಾ ಸ್ವೀಪ್ ಸಮಿತಿ ಗದಗ, ತಾಲೂಕ ಸ್ವೀಪ್ ಸಮಿತಿ ಮುಂಡರಗಿ ಹಾಗೂ ಗ್ರಾಮ ಪಂಚಾಯತಿ ಬಿದರಹಳ್ಳಿ ಸಹಯೋಗದಲ್ಲಿ ಇಂದು
    ಮುಂಡವಾಡ ಗ್ರಾಮದ ಕೆರೆ ಹೂಳೆತ್ತುವ ನರೇಗಾ ಸಮುದಾಯ ಕಾಮಗಾರಿ ಸ್ಥಳದಲ್ಲಿ
    ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ “ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ” ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

    ಗುಳೆ ತಪ್ಪಿಸಲು ಈಗಾಗಲೇ ನರೇಗಾ ಸಮುದಾಯ ಕಾಮಗಾರಿಗಳು ತಾಲೂಕಿನಾದ್ಯಂತ ಆರಂಭವಾಗಿವೆ. ಮೇ ತಿಂಗಳ ಏಳನೇ ತಾರೀಕಿಗೆ ನಿಗದಿಯಾಗಿರುವ ಲೋಕಸಭಾ ಚುನಾವಣೆಯಲ್ಲಿ
    ನರೇಗಾ ಕೂಲಿಕಾರರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ನೀವು ಕಡ್ಡಾಯವಾಗಿ ಮತ ಹಾಕುವುದರ ಜೊತೆಗೆ ನಿಮ್ಮ ಕುಟುಂಬ ಹಾಗೂ ನೆರೆ ಹೊರೆಯವರನ್ನು ತಪ್ಪದೇ ಮತದಾನ ಚಲಾಯಿಸುವಂತೆ ಸ್ವಯಂ ಪ್ರೇರಿತವಾಗಿ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

    ಮತ ಚಲಾಯಿಸುವ ಪ್ರತಿಯೊಬ್ಬ ನಾಗರಿಕನು ಸುಭದ್ರ ದೇಶ ನಿರ್ಮಿಸಲು ಕೊಡುಗೆ ನೀಡಿದಂತೆ. ಮತದಾನ ದಿನದಂದು ಯಾರೂ ವೇಳೆ ವ್ಯರ್ಥ ಮಾಡದೆ ನಿಗದಿತ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಿ. ಬಿದರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶೇಕಡಾ 100% ಮತದಾನ ನಡೆಯಬೇಕು ಎಂದರು.

    “ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ” ಅಭಿಯಾನ ಎರಡು ತಿಂಗಳುಗಳ ಕಾಲ ನಿರಂತರವಾಗಿರಲಿದೆ. ನಿಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ0iÉುೀ ನಿಮಗೆ ಕೆಲಸ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ನರೇಗಾ ಕೂಲಿ ಮೊತ್ತ ಈಗ 349 ರೂಪಾಯಿಗೆ ಏರಿಕೆಯಾಗಿದ್ದು, ಅಳತೆಗೆ ತಕ್ಕಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ. ಕೂಲಿ ಮೊತ್ತ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದ್ದು, ಇದರಿಂದ ಬೇಸಿಗೆ ಕಾಲದ ಒಕ್ಕಲುತನದ ವಿಷಮ ಪರಿಸ್ಥಿತಿಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದರು.
    ವಿಭಿನ್ನ ಮತದಾನ ಜಾಗೃತಿ:ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಕಡ್ಡಾಯ ಮತದಾನದ ಜಾಗೃತಿಗಾಗಿ ಸಮುದಾಯ ಕಾಮಗಾರಿಯಲ್ಲಿ ಕಡೆದಿದ್ದ ಪಡಗಳಲ್ಲಿ0iÉುೀ ಬಣ್ಣದ ಅಕ್ಷರಗಳಿಂದ ನನ್ನ ಮತ ನನ್ನ ಹಕ್ಕು ಎಂಬ ಘೋಷಣೆ ಬರೆದು ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ನರೇಗಾ ಹಾಗೂ ಮತದಾನದ ಘೋಷಣಾಪತ್ರಗಳನ್ನು ಹಿಡಿದ ಕೂಲಿಕಾರರು ಗಮನ ಸೆಳೆದರು. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

    ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ, ಗ್ರಾಪಂ ಅಧ್ಯಕ್ಷೆ ಸುನೀತಾ ನಾಗಪ್ಪ ಹಾರೋಗೇರಿ, ಪಿಡಿಓ ಬಿ.ಕೆ. ಸಜ್ಜನಗೌಡರ, ಜಿಲ್ಲಾ ಪಂಚಾಯತ ಎಡಿಪಿಸಿ ಕಿರಣ ಕುಮಾರ, ಡಿಐಇಸಿ ವಿ.ಎಸ್. ಸಜ್ಜನ, ತಾಲೂಕಾ ಸಂಯೋಜಕ ಹರೀಶ ಸೊಬರದ, ತಾಂತ್ರಿಕ ಸಹಾಯಕ ಅಂಜಿನಪ್ಪ ಸೇರಿದಂತೆ ತಾಲೂಕು ಪಂಚಾಯತ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts