More

    ಮುಂಡರಗಿ ಪುರಸಭೆಗೆ ಕವಿತಾ ಅಧ್ಯಕ್ಷೆ, ಶಿವಪ್ಪ ಉಪಾಧ್ಯಕ್ಷ

    ಮುಂಡರಗಿ: ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಕವಿತಾ ಅಂದಪ್ಪ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷರಾಗಿ ಶಿವಪ್ಪ ಚಿಕ್ಕಣ್ಣವರ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

    ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಹಾಗೂ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಚಿಕ್ಕಣ್ಣವರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿ ಇಲ್ಲದ ಕಾರಣಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಆಶಪ್ಪ ಪೂಜಾರಿ ತಿಳಿಸಿದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಎರಡು ವರ್ಷಗಳ ಹಿಂದೆ ಪುರಸಭೆಗೆ ಸದಸ್ಯರು ಆಯ್ಕೆ ಯಾಗಿದ್ದರೂ ಅಧಿಕಾರ ದೊರೆತಿರಲಿಲ್ಲ. ಇಂದಿನಿಂದ ಅಧಿಕಾರ ದೊರೆತಿದೆ. ಮುಂದಿನ ದಿನಗಳಲ್ಲಿ ನಾನು ಮತ್ತು ಶಾಸಕ ರಾಮಣ್ಣ ಜತೆಗೂಡಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸುತ್ತೇವೆ. ಎಲ್ಲ ಸದಸ್ಯರು ಕೂಡಿ ಒಳ್ಳೆಯ ಕೆಲಸಗಳನ್ನು ಮಾಡೋಣ’ ಎಂದರು.

    ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದರ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

    ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ಮಾತ ನಾಡಿದರು. ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷೆ- ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಮುಂಡರಗಿ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನ ಬೆಟಗೇರಿ, ಡಂಬಳ ಬಿಜೆಪಿ ಅಧ್ಯಕ್ಷ ರವಿ ಕರಿಗಾರ, ಮುಖಂಡರಾದ ಕೆ.ವಿ. ಹಂಚಿನಾಳ, ದೇವಪ್ಪ ಕಂಬಳಿ, ರಜನಿಕಾಂತ ದೇಸಾಯಿ, ಡಾ. ಕುಮಾರಸ್ವಾಮಿ ಹಿರೇಮಠ, ಭೀಮಸಿಂಗ ರಾಠೋಡ, ದೇವಪ್ಪ ಇಟಗಿ, ಬೀರಪ್ಪ ಬಂಡಿ, ಅಂದಪ್ಪ ಉಳ್ಳಾಗಡ್ಡಿ, ಪ್ರಶಾಂತ ಗುಡದಪ್ಪನವರ, ಮುತ್ತು ಅಳವಂಡಿ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಪವನ ಮೇಟಿ, ಟಿ.ಬಿ.ದಂಡಿನ, ಪ್ರಲ್ಹಾದ ಹೊಸಮನಿ, ಶಿವು ಬಾರಕೇರ, ಪ್ರಕಾಶ ಹಲವಾಗಲಿ, ವೀಣಾದೇವಿ ಸೋನಿ, ಜ್ಯೋತಿ ಹಾನಗಲ್ಲ, ನಿರ್ಮಲಾ ಕೊರ್ಲಹಳ್ಳಿ, ಶಾಂತವ್ವ ಕರಡಿಕೊಳ್ಳ, ರುಕ್ಮಿಣಿ ಸುಣ್ಣಗಾರ, ಸುಮಾ ಬಳ್ಳಾರಿ, ಗಂಗವ್ವ ಮೋರನಾಳ, ದೇವಕ್ಕ ದಂಡಿನ, ರಹೀನಾಬೇಗಂ ಕೆಲೂರ, ನಾಗರಾಜ ಹೊಂಬಳಗಟ್ಟಿ, ರಾಜಾಬಕ್ಷಿ ಬೆಟಗೇರಿ, ರಫೀಕ್ ಮುಲ್ಲಾ, ಸಂತೋಷ ಹಿರೇಮನಿ, ರೈಮಾನಸಾಬ್ ಮಲ್ಲನಕೇರಿ, ಮುಖ್ಯಾಧಿಕಾರಿ ಎನ್.ಕೆ. ಡೊಂಬರ ಇತರರು ಇದ್ದರು.

    ಭಗವಂತ ನನಗೆ ಒಳ್ಳೆಯ ಸ್ಥಾನ ಕರುಣಿಸಿದ್ದಾನೆ. ಜವಾಬ್ದಾರಿಯುತ ಸ್ಥಾನ ನಿಭಾಯಿಸಲು ಸಕಲ ಸದ್ಗುಣಗಳನ್ನು ದೇವರು ದಯಪಾಲಿಸಲಿ. ಅಧ್ಯಕ್ಷ ಸ್ಥಾನ ನೀಡಿದ ಪಕ್ಷಕ್ಕೆ ಋಣಿಯಾಗಿದ್ದೇನೆ. ಸರ್ವ ಸದಸ್ಯರೊಂದಿಗೆ ರ್ಚಚಿಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇವೆ. ಸಂಸದ, ಶಾಸಕರ ಬೆಂಬಲ ಪಡೆದು ಒಳ್ಳೆಯ, ಕೆಲಸಗಳನ್ನು ಮಾಡುತ್ತೇವೆ.
    | ಕವಿತಾ ಉಳ್ಳಾಗಡ್ಡಿ ಪುರಸಭೆ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts