More

    ಧಾರಾಕಾರ ಮಳೆಯಲ್ಲಿ ತೆರೆದ ಮ್ಯಾನ್​ಹೋಲ್​ ಬಳಿ 7 ತಾಸು ನಿಂತ ಈ ಮಹಿಳೆಗೊಂದು ಸೆಲ್ಯೂಟ್…

    ಮುಂಬೈ: ನಗರದಲ್ಲಿ ಕಳೆದ ಕೆಲವು ವಾರಗಳಿಂದಲೂ ಭರ್ಜರಿ ಮಳೆ ಸುರಿಯುತ್ತಿದೆ. ರಸ್ತೆಗಳ ಮೇಲೆಲ್ಲ ನೀರು, ಮನೆಗಳ ಒಳಗೂ ನುಗ್ಗುತ್ತಿದೆ. ಒಟ್ಟಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಹಾಗೇ ಆಗಸ್ಟ್​ 4ರಂದು ಸುರಿವ ಮಳೆಯಲ್ಲಿ 50 ವರ್ಷದ ಮಹಿಳೆಯೋರ್ವರು ತೆರೆದ ಮ್ಯಾನ್​ಹೋಲ್​ ಬಳಿ ನಿಂತು, ಎಚ್ಚರಿಸುತ್ತ, ವಾಹನ ಸವಾರರು ಅಪಾಯಕ್ಕೀಡಾಗುವುದನ್ನು ತಪ್ಪಿಸಿದ್ದಾರೆ.

    ಮುಂಬೈನ ಮಾತುಂಗಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಸತತ 7 ಗಂಟೆಗಳ ಕಾಲ ನಿಂತು, ವಾಹನ ಸವಾರರನ್ನು ಎಚ್ಚರಿಸಿದ್ದಾರೆ. ರಸ್ತೆ ಮೇಲೆಲ್ಲ ನೀರು ನಿಂತಿತ್ತು. ಮ್ಯಾನ್​ಹೋಲ್​ ತೆರೆದಿದ್ದು ಯಾರಿಗೂ ಕಾಣುವಂತಿರಲಿಲ್ಲ. ಹಾಗೇ ಬಿಟ್ಟರೆ ಅಪಾಯವಾಗುವುದು ನಿಶ್ಚಿತ ಎಂದು ಅರಿತು ಈ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯ ಹೆಸರು ಕಾಂತಾ ಮೂರ್ತಿ. ಹೂವು ಮಾರಿಕೊಂಡು ಜೀವನ ನಡೆಸುವವರು. ಇದನ್ನೂ ಓದಿ:  ಲಡಾಖ್​ನಲ್ಲಿ ರಫೇಲ್​ ಯುದ್ಧವಿಮಾನಗಳ ಆರ್ಭಟ; ರಾತ್ರಿ ವೇಳೆ ಗುಡ್ಡಗಾಡು ಪ್ರದೇಶಗಳಲ್ಲಿ ತಾಲೀಮು

    ಆಗಸ್ಟ್​ 4ರಂದು ವಿಪರೀತ ಮಳೆ ಸುರಿಯುತ್ತಿತ್ತು. ರಸ್ತೆಯಲ್ಲೆಲ್ಲ ನೀರು ತುಂಬಿತ್ತು. ಓಡಾಡಲೂ ಆಗುತ್ತಿರಲಿಲ್ಲ. ಅನೇಕ ಮನೆಗಳಿಗೂ ನುಗ್ಗುತ್ತಿತ್ತು. ನನ್ನ ಮನೆಗೂ ನೀರು ಬಂದು ತೊಡಕಾಯಿತು. ಆಗ ನಾನು ಅಲ್ಲಿಯೇ ಇದ್ದ ಮ್ಯಾನ್​ಹೋಲ್​ ಮುಚ್ಚಳ ತೆಗೆದೆ. ನೀರು ಅದರಲ್ಲಿ ಹೋದರೆ ಸ್ವಲ್ಪ ಅನುಕೂಲ ಆಗಬಹುದು ಎಂದು ಹೀಗೆ ಮಾಡಿದೆ. ಆದರೆ ನಾನು ತೆರೆದಿಟ್ಟು ಬೇರೆ ಕಡೆ ಹೋಗಿಬಿಟ್ಟರೆ ಯಾರಿಗಾದರೂ ಅನಾಹುತ ಆಗಬಹುದು ಎನ್ನಿಸಿತು. ಹಾಗಾಗಿ ಅಲ್ಲೇ ನಿಂತು, ದಾರಿಯಲ್ಲಿ ಬರುತ್ತಿರುವವರನ್ನು ತಡೆಯುತ್ತಿದ್ದೆ. ಸುಮಾರು 7 ತಾಸು ಅಲ್ಲಿಯೇ ಇದ್ದೆ. ನಂತರ ಮಹಾನಗರ ಪಾಲಿಕೆ ಸಿಬ್ಬಂದಿ ಬಂದರು ಎಂದು ಕಾಂತಾ ಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ನನಗೆ ಎಂಟು ಮಕ್ಕಳು. ಅವರಲ್ಲಿ ಐವರಿಗೆ ಮದುವೆಯಾಗಿದೆ. ಇನ್ನೂ ಮೂವರು ಓದುತ್ತಿದ್ದಾರೆ. ಅವರ ಶಿಕ್ಷಣಕ್ಕೆ, ಕುಟುಂಬದ ಹೊಟ್ಟೆಬಟ್ಟೆಗೆ ನಾನೊಬ್ಬಳೇ ದುಡಿಯಬೇಕು. ಹೂವು ಮಾರಿಯೇ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಪತಿ ರೈಲು ಅಪಘಾತದಲ್ಲಿ ಗಾಯಗೊಂಡ ನಂತರ ಅಂಗವಿಕಲರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಚಿಂಗ್​ ಕ್ಲಾಸ್​ಗೆ ಹೋಗಿಲ್ಲ, ನಿದ್ರೆಗೆಟ್ಟು ಓದಿಲ್ಲ… ಇದು ಎಸ್ಸೆಸ್ಸೆಲ್ಸಿ ಟಾಪರ್​ ಅನುಷ್​ರ ಯಶಸ್ಸಿನ ಗುಟ್ಟು

    ನಾನು ರಸ್ತೆಯಲ್ಲಿ ನಿಂತು ತೆರೆದ ಮ್ಯಾನ್​ಹೋಲ್​ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾಗ ತುಂಬ ಜನರು ನನಗೆ ಸೆಲ್ಯೂಟ್​ ಹೊಡೆದರು. ಕೆಲವರು ಛತ್ರಿಯನ್ನೂ ಕೊಟ್ಟರು. ಕೆಲವರು ಬಿಎಂಸಿಗೆ ಕರೆ ಮಾಡಿದರು. ಆದರೆ ಅವರು ಬೇಗ ಬರಲೂ ಇಲ್ಲ. ನಂತರ ಬಂದವರು ಮ್ಯಾನ್​ಹೋಲ್​ ತೆರೆದಿದ್ದಕ್ಕೆ ನನಗೆ ಛೀಮಾರಿ ಹಾಕಿದ್ದಾರೆ ಎಂದು ಹೇಳಿದರು.

    ಆಗಸ್ಟ್ ನಾಲ್ಕರಂದು ಇವರು ಮಳೆಯಲ್ಲಿ ನಿಂತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ.(ಏಜೆನ್ಸೀಸ್​)

    ರಷ್ಯಾದಲ್ಲಿ ಮೃತಪಟ್ಟ ತಮಿಳುನಾಡಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು; ಇಲ್ಲಿ ಕುಟುಂಬದವರ ಗೋಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts