More

    ನಾಯಿಗೆ ಚಿಕಿತ್ಸೆ ಕೊಡಿಸಬೇಕಾ? ಪಾಸ್​ ಕೊಡಲ್ಲ ಎಂದ ಪೊಲೀಸರು ಕೊನೆಗೆ ಸಂತಾಪ ಸೂಚಿಸಬೇಕಾಯ್ತು

    ಮುಂಬೈ: ವೈದ್ಯರ ಬಳಿಗೆ ಹೋಗಬೇಕಿದೆ ನನಗೆ ಪಾಸ್​ ನೀಡಿ ಎಂದು ಆಕೆ ಪದೇಪದೆ ಪೊಲೀಸರನ್ನು ಒತ್ತಾಯಿಸುತ್ತಲೇ ಇದ್ದಳು. ಒಂದೆರಡು ಬಾರಿಯಲ್ಲ, ಸತತ ನಾಲ್ಕು ದಿನಗಳಿಂದ ಅದಕ್ಕಾಗಿ ಆನ್​ಲೈನ್​ನಲ್ಲಿ ಕೋರಿಕೆ ಸಲ್ಲಿಸುತ್ತಲೇ ಇದ್ದಳು. ಆದರೆ, ಪೊಲೀಸರಿಗೇಕೋ ಈ ಕೋರಿಕೆ ಅಸಂಗತ ಹಾಗೂ ಅನಗತ್ಯ ಎನಿಸಿ ಪಾಸ್​ ನಿಡಲು ನಿರಾಕರಿಸಿದರು. ಕೊನೆಗೆ ವೈದ್ಯರ ಬಳಿಗೆ ಹೋಗಲಾಗದೆ ‘ ಜೋಯ್​’ ಕೊನೆಯುಸಿರೆಳೆದ. ಕುಟುಂಬದ ಸದಸ್ಯನಂತಿದ್ದ ಜೋಯ್ ಅಗಲಿಕೆಗೆ ಕಣ್ಣೀರು ಹಾಕದೆ ಬೇರೆ ದಾರಿ ಆಕೆಗಿರಲಿಲ್ಲ.

    ಇಷ್ಟಕ್ಕೂ ಜೋಯ್​, ನವಿ ಮುಂಬೈನ ನಿವಾಸಿ ಕುಮಾರಿ ಚಂದ್ರನ್​ ಮನೆಯಲ್ಲಿದ್ದ ಪ್ರೀತಿಯ ಶ್ವಾನವಾಗಿತ್ತು. ಜೋಯ್​ ಆರೋಗ್ಯ ಸರಿಯಿಲ್ಲ, ವೈದ್ಯರ ಬಳಿ ಕೊಂಡೊಯ್ಯಬೇಕು ಪಾಸ್​ ನೀಡಿ ಎಂದು ಚಂದ್ರನ್​ ನಾಲ್ಕು ಬಾರಿ ಬೃಹನ್​ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದರು. ನಿಮ್ಮ ಕೋರಿಕೆಯನ್ನು ಪರಿಶೀಲಿಸಲಾಗುತ್ತಿದೆ, ಕಾಯಿರಿ ಎಂಬ ಉತ್ತರ ಬಂದಿತು. ಕೊನೆಗೆ ಅವರ ಮನವಿಯೇ ಪರಿಗಣಿಸಲು ಯೋಗ್ಯವಾಗಿಲ್ಲ ಎಂದ ಪೊಲೀಸರು ಪಾಸ್​ ನಿಡಲು ನಿರಾಕರಿಸಿದರು.

    ಈ ನಡುವೆ ಪಶು ವೈದ್ಯರನ್ನು ಪೋನ್​ ಮೂಲಕ ಚಂದ್ರನ್​ ಸಂಪರ್ಕಿಸಿದರು. ಕೆಲ ದಿನಗಳಮಟ್ಟಿಗೆ ಅನುಕೂಲವಾಗುವಂತೆ ಔಷಧಗಳನ್ನು ನೀಡುವಂತೆ ಅವರು ಸೂಚಿಸಿದರಾದರೂ, ಸತತ ನಾಲ್ಕು ದಿನಗಳವರೆಗೆ ಅನಾರೋಗ್ಯದಿಂದ ಬಳಲಿದ ಜೋಯ್​ ಕೊನೆಗೆ ಹೃದಯಸ್ತಂಭನದಿಂದ ಉಸಿರು ನಿಲ್ಲಿಸಿದ.

    ಚಂದ್ರನ್​ ನೆರೆಮನೆಯಲ್ಲಿದ್ದ ಕಾರ್ಯಕರ್ತರೊಬ್ಬರು ಪೊಲೀಸರ ನಿರ್ಲಕ್ಷ್ಯದಿಂದಾದ ಘಟನೆಯನ್ನು ಇಲಾಖೆ ಗಮನಕ್ಕೆ ತಂದರು. ಇದಕ್ಕೆ ಸಂತಾಪ ಸೂಚಿಸುವುದನ್ನು ಹೊರತುಪಡಿಸಿದರೆ, ಪೊಲೀಸರು ಬೇರೇನೂ ಮಾಡುವಂತಿರಲಿಲ್ಲ. ಒಟ್ಟಿನಲ್ಲಿ ಪ್ರಾಣಿಗಳ ಬಗ್ಗೆಯೂ ಅಂತಃಕರಣದಿಂದ ಸ್ಪಂದಿಸಬೇಕಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
    ವಿಪರ್ಯಾಸದ ಸಂಗತಿ ಎಂದರೆ ನಾಯಿಯ ಅಗಲುವಿಕೆಯಿಂದ ಶೋಕದಲ್ಲಿದ್ದ ಕುಟುಂಬಕ್ಕೆ ಮಾಹಿತಿ ತಿಳಿದವರು ವಿಚಾರಿಸಿದ್ದೇನು ಗೊತ್ತಾ? ನಿಮ್ಮ ನಾಯಿಗೆ ಕೋವಿಡ್​-19 ಬಂದು ಸಾವಿಗೀಡಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ಮಾನವೀಯತೆ ಮರೆತು ಸಲಹೆ ನೀಡಿದ್ದಾರೆ.

    ಬೆಂಗಳೂರು ಸೇರಿ ರಾಜ್ಯದ ಹಲವು ನಗರಗಳಲ್ಲಿ ಆಹಾರವಿಲ್ಲದೆ, ಬೀದಿನಾಯಿಗಳು ಸಂಕಷ್ಟಕ್ಕೆ ಸಿಲುಕಿವೆ. ಇವುಗಳಿಗೆ ಆಹಾರ ನೀಡಲು ಯಾರೂ ಹೊರಬರುವಂತಿಲ್ಲ ಎನ್ನುವುದು ವಿಪರ್ಯಾಸ.

    ರಾಜ್ಯದಲ್ಲಿ 226ಕ್ಕೇರಿದ ಕರೊನಾ ಸೋಂಕಿತರು: 47 ಮಂದಿ ಬಿಡುಗಡೆ- ಬೆಳಗಾವಿಯಲ್ಲಿ ನಾಲ್ಕು ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts