More

    ಕೊನೆಗೂ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್​

    ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೂ 35ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಈ ಪೈಕಿ ಜನಪ್ರಿಯ ನಿರ್ದೇಶಕರಾದ ಸಂಜಯ್​ ಲೀಲಾ ಬನ್ಸಾಲಿ, ಆದಿತ್ಯ ಚೋಪ್ರಾ ಸೇರಿದಂತೆ ಕೆಲವರು ಪ್ರಮುಖರಿದ್ದಾರೆ. ಈಗ ಕಂಗನಾಗೂ ಮುಂಬೈ ಪೊಲೀಸ್​ ಸಮನ್ಸ್​ ಕೊಟ್ಟು, ವಿಚಾರಣೆಗೆ ಬರುವುದಕ್ಕೆ ಹೇಳಿದ್ದಾರೆ.

    ಇದನ್ನೂ ಓದಿ: ಕನ್ನಡಿಗರಿಂದ ಕನ್ನಡಿಗರಿಗಾಗಿ ಹೊಸ ಓಟಿಟಿ …

    ಇಷ್ಟಕ್ಕೂ ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್​ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್​ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.

    ಕಂಗನಾ ಹೇಳಿಕೆಯ ನಂತರ ಬಾಲಿವುಡ್​ನಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿತ್ತು. ನೆಪೋಟಿಸಂ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದರು. ಅದರಲ್ಲೂ ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಲಾಗುವ ಕರಣ್​ ಜೋಹಾರ್​ ವಿರುದ್ಧ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಅವರು ಚಿತ್ರರಂಗಕ್ಕೆ ಪರಿಚಯಿಸಿದ ಆಲಿಯಾ ಭಟ್​, ವರುಣ್​ ಧವನ್​ ಮುಂತಾದವರನ್ನೂ ನೆಟ್ಟಿಗರು ಟ್ರೋಲ್​ ಮಾಡಿದರು.

    ಈ ಸಂಬಂಧ, ಈ ತಿಂಗಳ ಆರಂಭದಲ್ಲಿಯೇ ಕಂಗನಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ, ಕಂಗನಾ ಕೂಡಾ ತಾವು ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದರು. ಇನ್ನು ಪೊಲೀಸರು ಸಹ ಮುಂಬೈನ ಅವರ ನಿವಾಸಕ್ಕೆ ಜುಲೈ 3ರಂದು ಹೋಗಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ, ಕಂಗನಾ ಅವರ ಮ್ಯಾನೇಜರ್​ ಆ ಸಮನ್ಸ್​ ಸ್ವೀಕರಿಸಿರಲಿಲ್ಲ.

    ಇದನ್ನೂ ಓದಿ: ಇದು ಆಧುನಿಕ ರಾಮಾಚಾರಿಯ ಕಥೆ!

    ಇದೀಗ ಮುಂಬೈ ಪೊಲೀಸರು ಹೊಸದಾಗಿ ಸಮನ್ಸ್​ ಕೊಟ್ಟಿದ್ದಾರೆ. ಸದ್ಯ ಕಂಗನಾ ಮನಾಲಿಯಲ್ಲಿ ಇರುವುದರಿಂದ, ಅವರು ಆನ್​ಲೈನ್​ ಮೂಲಕ ವಿಚಾರಣೆ ಎದುರಿಸಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ, ಪೊಲೀಸರ ಜತೆಗೆ ಮಾತನಾಡಿರುವ ಕಂಗನಾ ಸಹೋದರಿ ರಂಗೋಲಿ, ಪ್ರಶ್ನೆಗಳನ್ನು ಇಮೇಲ್​ ಮೂಲಕ ಕಳಿಸುವುದಕ್ಕೆ ಹೇಳಿದ್ದಾರಂತೆ. ಸದ್ಯದಲ್ಲೇ ಪೊಲೀಸರು ಕಂಗನಾ ಅವರಿಗೆ ಪ್ರಶ್ನೆಗಳನ್ನು ಕಳುಹಿಸುತ್ತಾರೆ ಎಂದು ಹೇಳಲಾಗಿದೆ.

    Video: ಕರೊನಾ ಬಗ್ಗೆ ರಮೇಶ್​ ಅರವಿಂದ್​ ಮೊದಲ ವಿಡಿಯೋ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts