More

  ಹೈ-ಪ್ರೊಫೈಲ್​ ವೇಶ್ಯಾವಾಟಿಕೆ ಜಾಲ ಭೇದಿಸಿದ ಮುಂಬೈ ಪೊಲೀಸರು: ಅಪ್ರಾಪ್ತೆ ಸೇರಿ ಮೂವರು ನಟಿಯರ ರಕ್ಷಣೆ

  ಮುಂಬೈ: ವಾಣಿಜ್ಯ ನಗರಿ ಮುಂಬೈ ಉಪನಗರ ಅಂಧೇರಿಯ ತ್ರಿಸ್ಟಾರ್​ ಹೋಟೆಲ್ ಮೇಲೆ ದಾಳಿ ನಡೆಸಿ ಹೈ-ಪ್ರೊಫೈಲ್​ ವೇಶ್ಯಾವಾಟಿಕೆ ಜಾಲವನ್ನು ಮುಂಬೈ ಪೊಲೀಸರು ಗುರುವಾರ ಭೇದಿಸಿದ್ದಾರೆ.

  ದಾಳಿ ವೇಳೆ 29 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಲಾಗಿದ್ದು, ಮೂವರು ಮಹಿಳಾ ಕಲಾವಿದರು ಸೇರಿದಂತೆ ಓರ್ವ ಅಪ್ರಾಪ್ತೆಯನ್ನು ರಕ್ಷಣೆ ಮಾಡಿರುವುದಾಗಿ ನಗರ ಪೊಲೀಸ್​ ಸಾಮಾಜಿಕ ಸೇವಾ ಶಾಖೆಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ರಕ್ಷಣೆ ಮಾಡಿದ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಈ ಜಾಲವನ್ನು ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯನ್ನು ಪ್ರಿಯಾ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಆರೋಪಿ ಪ್ರಿಯಾ ಶರ್ಮಾ ಮುಂಬೈನ ಪೂರ್ವ ಕಂಡಿವಲಿ ಏರಿಯಾದಲ್ಲಿ ಟೂರ್ಸ್​ ಆ್ಯಂಡ್​ ಟ್ರಾವೆಲ್ಸ್​ ಏಜೆನ್ಸಿಯನ್ನು ನಡೆಸುತ್ತಿದ್ದು, ಅದರ ಹೊರತಾಗಿಯೂ ಅಕ್ರಮ ದಾರಿಯನ್ನು ಹಿಡಿದಿದ್ದಾರೆ ಎಂದು ಎಸ್​ಎಸ್​ ಶಾಖೆಯ ಹಿರಿಯ ಇನ್ಸ್​ಪೆಕ್ಟರ್​ ಸಂದೇಶ್​ ರೆವಾಳೆ ಹೇಳಿದ್ದಾರೆ.

  ರಕ್ಷಿಸಲ್ಪಟ್ಟಿರುವವರಲ್ಲಿ ಓರ್ವ ಮಹಿಳೆ ನಟಿ ಹಾಗೂ ಸಿಂಗರ್​ ಆಗಿದ್ದಾರೆ. ಬಾಲಿವುಡ್​ ಶೋಗಳಲ್ಲಿ ನಟಿಸಿದ್ದಾರೆ. ಇನ್ನೊರ್ವ ಮಹಿಳೆ ಮರಾಠಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಪ್ರಾಪ್ತೆಯು ವೆಬ್​ ಸರಣಿಯಲ್ಲಿ ನಟಿಸಿದ್ದಾಳೆಂದು ರೆವಾಳೆ ಹೇಳಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts