More

    ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗೂ ಲಾಕ್​ಡೌನ್​ ಬಿಸಿ, ನಾಯಿಮರಿ ಚಿಕಿತ್ಸೆಗಾಗಿ ಪರದಾಟ

    ಮುಂಬೈ: ಐಪಿಎಲ್​ ಕ್ರಿಕೆಟ್​ನ ಮುಂಬೈ ಇಂಡಿಯನ್ಸ್ ಟೀಂ ಬ್ಯಾಟ್ಸ್​ಮನ್​ ಸೂರ್ಯ ಕುಮಾರ್ ಯಾದವ್ ಅವರಿಗೂ ಲಾಕ್​ಡೌನ್​ ಬಿಸಿ ತಟ್ಟಿದೆ. ಅವರ ಪ್ರೀತಿಯ ನಾಯಿಮರಿ (ಪಪ್ಪಿ)ಗೆ ತುರ್ತಾಗಿ ಎಂಆರ್​ಐ ಸ್ಕ್ಯಾನಿಂಗ್​ ಮಾಡಿಸಬೇಕಿದ್ದು, ಯಾವ ಆಸ್ಪತ್ರೆ ಅಥವಾ ಕ್ಲಿನಿಕ್ ಗೆ ಹೋಗಬೇಕು ಎಂದು ದಯವಿಟ್ಟು ತಿಳಿಸಿ ಎಂದು ಟ್ವೀಟ್​ ಮೂಲಕ ಕೋರಿದ್ದಾರೆ.

    “ಶುಭೋದಯ, ನನ್ನ ನಾಯಿಮರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕು. ಮುಂಬೈನ ಯಾವ ಆಸ್ಪತ್ರೆ ಅಥವಾ ಕ್ಲಿನಿಕ್​​ಗೆ ಪಪ್ಪಿಯನ್ನು ಕರೆದೊಯ್ಯಬಹುದು ಎಂದು ತಿಳಿಸಿ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿ ಹೋಗುವುದು ಎಂದೇ ತಿಳಿಯುತ್ತಿಲ್ಲ. ನಾಯಿಮರಿಗೆ ನಿಯಮಿತವಾಗಿ ಸೆಳೆತ ಕಾಣಿಸಿಕೊಂಡಿದೆ. ಸಹಾಯ ಮಾಡಿ” ಎಂದು ಆದಿತ್ಯ ಠಾಕ್ರೆ, ಮುಂಬೈ ಪೊಲೀಸರು ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಅವರು ಭಾನುವಾರ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ ಅಪಾಯಕಾರಿ ಟೆಸ್ಟ್ ಪಂದ್ಯವಿದ್ದಂತೆ ಕರೊನಾ; ಗಂಗೂಲಿ

    ಈ ಹಿಂದೆಯೂ ಅಂದರೆ ಏಪ್ರಿಲ್​ 27ರಂದು ಕೂಡ ನಾಯಿಮರಿಗೆ ಸಿರಪ್​ ಬೇಕೆಂದು ಟ್ವೀಟ್ ಮಾಡಿದ್ದ ಸೂರ್ಯ ಯಾದವ್​, ” ಹಲೋ, ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ನಾಯಿಮರಿ ಪಪ್ಪಿಗೆ ತುರ್ತಾಗಿ ‘NEUROPLUS’ ಮತ್ತು ‘Liva+’ ಸಿರಪ್ ಬೇಕು. ಹತ್ತಿರದ ಯಾವುದೇ ಮೆಡ್‌ಸ್ಟೋರ್‌ನಲ್ಲಿ ಈ ಸಿರಪ್​ ಸಿಗುತ್ತಿಲ್ಲ. ಪೆಟ್ ಮೆಡ್​ಸ್ಟೋರ್​ ಅಥವಾ ಯಾವುದೇ ಪಿಇಟಿ ಅಂಗಡಿಯಲ್ಲಿ ಈ ಸಿರಪ್​ ಇದ್ದರೆ ಯಾರಾದರೂ ತಿಳಿಸಿ. ನಿಮ್ಮಿಂದ ಬಹಳ ಸಹಾಯವಾಗುತ್ತದೆ. ಧನ್ಯವಾದಗಳು. ನಿಮ್ಮ ಆರೋಗ್ಯದ ಕಡೆ ಗಮನ ಇರಲಿ” ಎಂದಿದ್ದರು.

    ವಿಶ್ವದಾದ್ಯಂತ ದುಸ್ವಪ್ನವಾಗಿ ಕಾಡುತ್ತಿರುವ ಕರೊನಾ ವೈರಸ್ ನಿಂದಾಗಿ ಈಗಾಗಲೇ ಕ್ರೀಡಾಕೂಟಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕ್ರಿಕೆಟ್​ ಕೂಡ ಹೊರತಾಗಿಲ್ಲ. 29 ವರ್ಷದ ​ ಸೂರ್ಯ ಕುಮಾರ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಬೇಕಿತ್ತು. ಈಗ ಅವರು ತನ್ನ ನಾಯಿಮರಿಯ ಆರೋಗ್ಯ ಕಾಪಾಡುವಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ ನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts