More

    ಪ್ರಕೃತಿ ಸೊಬಗಿನ ಸಿರಿಯಲ್ಲಿ ಮಿಂದೆದ್ದ ಮಕ್ಕಳು

    ಚಿಕ್ಕಮಗಳೂರು: ಅದು ಅಂಕುಡೊಂಕಿನ ಕಲ್ಲು ಮುಳ್ಳಿನ ಹಾದಿ… ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿ… ಹಸಿರ ಸೊಬಗು, ಪ್ರಕೃತಿಯ ದೃಶ್ಯಕಾವ್ಯ ಸವಿಯುವ ಮಕ್ಕಳಲ್ಲಿ ಅಮಿತೋತ್ಸಾಹ…

    ಬಸವನಹಳ್ಳಿ ಶಾಲಾ ವಿದ್ಯಾರ್ಥಿಗಳು ಅತ್ಯಂತ ಲವಲವಿಕೆಯಿಂದ ಮುಳ್ಳಯ್ಯನಗಿರಿಗೆ ಸಾಗಿ ಪ್ರಕೃತಿ ಸಿರಿಯ ಸೌಂದರ್ಯದ ನಡುವೆ ಮಿಂದೆದ್ದರು. ಗಿರಿ ಸಿರಿ ಇಕೋ ಕ್ಲಬ್ ಹಾಗೂ ಎನ್​ಎಸ್​ಎಸ್ ಘಟಕದಿಂದ ಜೀವವೈವಿಧ್ಯ ಅಧ್ಯಯನ ಶಿಬಿರವಿದು.

    ಗಿಡ, ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತ ಸಾಗಿದ ವಿದ್ಯಾರ್ಥಿಗಳು, ಹಾಸ್ಯ ಚಟಾಕಿ ಹಾರಿಸುತ್ತ ನಿಸರ್ಗದ ವರ್ಣರಂಜಿತ ಚಿತ್ತಾರವನ್ನು ಕಣ್ತುಂಬಿಕೊಂಡು ಪುಳಕಿತರಾದರು. ವಿಜ್ಞಾನ ಉಪನ್ಯಾಸಕ ಸತ್ಯನಾರಾಯಣ, ಎನ್​ಸಿಸಿ ಘಟಕದ ಸಂಚಾಲಕಿ ಪ್ರತಿಭಾ ನಲೋಗಲ್, ಶಿಕ್ಷಕರಾದ ಅನಿತಾ, ಭಾರತಿ ಪರಿಸರ ಪ್ರೇಮಿಗಳ ಜತೆ ಹೆಜ್ಜೆ ಹಾಕಿದರು.

    ಪರಿಸರ ಪ್ರೇಮಿಗಳಾದ ಭರತ್ ಮತ್ತು ಮಧು, ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆ ಬಗ್ಗೆ ಮಾಹಿತಿ ನೀಡುತ್ತ ಮುಳ್ಳಯ್ಯನಗಿರಿ ಪ್ರದೇಶದ ಹತ್ತಾರು ಹಕ್ಕಿಗಳು, ಹೂಗಳು, ನೂರಾರು ಬಗೆಯ ಗಿಡ, ಹುಲಿ, ಕಡವೆ, ಹಾರ್ನ್​ಬಿಲ್, ಕುದುರೆಮುಖ ಪ್ರದೇಶದಲ್ಲಿರುವ ಸಿಂಗಳೀಕದ ಬದುಕನ್ನು ಪರಿಚಯಿಸಿದರು.

    ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಳ್ಯಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿಶ್ರೇಣಿಯಲ್ಲಿ ಪರಿಸರ ಅಧ್ಯಯನದ ಜತೆ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಪ್ರವಾಸದ ಸಂಭ್ರಮದಲ್ಲಿ ಸಂತಸದಿಂದ ಕಾಲ ಕಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts