More

    ಟಿಎಂಸಿ ತೆಕ್ಕೆಗೆ ಮರಳಿದ ಮುಕುಲ್ ರಾಯ್; ಪಶ್ಚಿಮ ಬಂಗಾಳದಲ್ಲಿ ವಿಭಜನೆಯಾಗುವುದೇ ಬಿಜೆಪಿ?

    ಕೋಲ್ಕತ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಹಾಗೂ ಅವರ ಪುತ್ರ ಸುಭಾಂಶು ರಾಯ್ ಶುಕ್ರವಾರ ಟಿಎಂಸಿಗೆ ಮರು ಸೇರ್ಪಡೆಯಾಗಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೋಲ್ಕತದ ಮುಖ್ಯ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು. ಇದಕ್ಕೂ ಮುನ್ನ ರಾಯ್ ಹಾಗೂ ಮಮತಾ ಸುದೀರ್ಘ ಚರ್ಚೆ ನಡೆಸಿದ್ದರು.

    ರಾಯ್ ಮರುಸೇರ್ಪಡೆ ಬಳಿಕ ಪಶ್ಚಿಮಬಂಗಾಳ ಬಿಜೆಪಿ ವಿಭಜನೆ ಆಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ರಾಯ್ ತಮ್ಮೊಂದಿಗೆ ಹಲವಾರು ಬಿಜೆಪಿ ಶಾಸಕರನ್ನು ಟಿಎಂಸಿಗೆ ಕರೆದೊಯ್ಯಲಿದ್ದಾರೆ ಎಂಬ ಪುಕಾರು ಹಬ್ಬಿದೆ. ಆದರೆ ಇದನ್ನು ಮಮತಾ ಬ್ಯಾನರ್ಜಿ ಅಲ್ಲಗಳೆದಿದ್ದಾರೆ. ‘‘ಮುಕುಲ್ ನಮ್ಮ ಕುಟುಂಬದ ಹಳೇ ಸದಸ್ಯ. ಬಿಜೆಪಿಯಿಂದ ಟಿಎಂಸಿಗೆ ಬರಲು ಸಾಕಷ್ಟು ನಾಯಕರು ಕಾತರರಾಗಿದ್ದಾರೆ. ನಾವು ಯಾವುದೇ ಪಕ್ಷವನ್ನು ಒಡೆದಿಲ್ಲ’’ ಎಂದು ಮಮತಾ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಮನೆಗೆ ವಾಪಸಾಗಿದ್ದಕ್ಕೆ ಸಂತಸವಾಗುತ್ತಿದೆ. ಬಿಜೆಪಿಯಲ್ಲಿ ಮುಂದುವರಿಯಲು ಸಾಧ್ಯವಿರಲಿಲ್ಲ. ಬಂಗಾಳ ಯಾವತ್ತಿಗೂ ಮಮತಾ ಬ್ಯಾನರ್ಜಿಯದ್ದು ಎಂದು ಮುಕುಲ್ ರಾಯ್ ಹೇಳಿದ್ದಾರೆ. ಮುಕುಲ್ ರಾಯ್ ಹಿಂದೆ ಮಮತಾ ಬ್ಯಾನರ್ಜಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2017ರಲ್ಲಿ ಅವರು ಟಿಎಂಟಿ ತ್ಯಜಿಸಿ ಬಿಜೆಪಿ ಸೇರಿದ್ದರು. ನಾರದ ಲಂಚ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಟಿಎಂಸಿಯಿಂದ 6 ವರ್ಷ ಉಚ್ಚಾಟನೆ ಮಾಡಲಾಗಿತ್ತು. ಅದೇ ವರ್ಷ ಅವರು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಸೇರಿದ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರ ಪುತ್ರ 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    2 ತೊಲ ಬಂಗಾರದ ಚೈನ್ ನುಂಗಿದ ನಾಯಿಮರಿ: ವೈದ್ಯರ ಬಳಿ ಕರೆದೊಯ್ದ ಮಾಲೀಕನಿಗೆ ಕಾದಿತ್ತು ಶಾಕ್!​

    ಮದುವೆಯಾದ ಮೊದಲ ರಾತ್ರಿ ಗಂಡ ಹೇಳಿದ್ದನ್ನು ಕೇಳಿ ಶಾಕ್​ ಆದ ನವವಧು!

    ಒಂಟಿ ಕೋಣೆಯಲ್ಲಿ 10 ವರ್ಷ ಪ್ರೇಯಸಿಯನ್ನು ಬಚ್ಚಿಟ್ಟಿದ್ದ ಪ್ರಿಯಕರನಿಂದ ಸ್ಫೋಟಕ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts