More

    ಮುಕ್ತಿಮಠ ನಿಸರ್ಗ ರಮಣೀಯ ಕ್ಷೇತ್ರ

    ಬೆಳಗಾವಿ: ತಾಲೂಕಿನ ಸುಕ್ಷೇತ್ರ ಮುಕ್ತಿಮಠವು ನಿಸರ್ಗ ರಮಣೀಯ ಪುಣ್ಯಕ್ಷೇತ್ರ. ಧಾರ್ಮಿಕ ಜಾಗೃತಿ ಕ್ಷೇತ್ರವಾಗಿಯೂ ಗಮನ ಸೆಳೆಯುತ್ತಿದೆ ಎಂದು ಬೆಂಗಳೂರಿನ ವರಮಹಾಲಕ್ಷ್ಮೀ ಸಂಸ್ಥಾನದ ಧರ್ಮದರ್ಶಿ ನರೇಂದ್ರ ಬಾಬು ಶರ್ಮಾ ಹೇಳಿದ್ದಾರೆ.

    ಮುಕ್ತಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿ, ಮುಕ್ತಿಮಠದ ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭಕ್ತರ ಉದ್ಧಾರಕ್ಕೆ ನಿರಂತರ ಜಪ, ತಪ, ಹೋಮ ಕೈಗೊಳ್ಳುತ್ತಿದ್ದಾರೆ ಎಂದರು.

    ಮನುಷ್ಯನ ಬದುಕಿಗೆ ಧರ್ಮ, ಸಂಸ್ಕಾರ ಅವಶ್ಯ. ಪ್ರತಿಯೊಬ್ಬರೂ ಧರ್ಮ ಆಧಾರಿತ ಬದುಕು ಸಾಗಿಸಬೇಕಿದೆ. ಭಕ್ತರಲ್ಲಿ ಇಂತಹ ಗುಣಗಳನ್ನು ಮುಕ್ತಿ ಮಠ ಬೆಳೆಸುತ್ತಿದೆ. ಶ್ರೀಗಳ ತಪೋಶಕ್ತಿ, ಅವರ ಧಾರ್ಮಿಕ ಕಾರ್ಯ ಜನಮಾನಸದಲ್ಲಿ ಉಳಿದಿದೆ ಎಂದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ದೇಶದ ವಿವಿಧ ಭಾಗಗಳ ಭಕ್ತರು ಮಠಕ್ಕೆ ಆಗಮಿಸುತ್ತಿರುವುದು ಸಂತಸದ ಸಂಗತಿ. 2021ರಲ್ಲಿ ಶ್ರೀಗಳು ಸಂಕಲ್ಪ ಮಾಡಿರುವ ಕೋಟಿ ದೀಪೋತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

    ಮುಕ್ತಿ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಂದಗಡದ ಪಂ.ಡಾ.ಬಿ.ಎ.ಹಿರೇಮಠ ಅವರ ಜೀವನ ಸಾಧನೆ ಕುರಿತಾದ ‘ರಸಲಿಂಗ ದರ್ಶಕ’ ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು. ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಇಟಗಾದ ಚನ್ನಮಲ್ಲೇಶ್ವರ ಸ್ವಾಮೀಜಿ ಹಾಗೂ ಇತರರು ಇದ್ದರು. ಶಂಕರಯ್ಯ ಚರಲಿಂಗಮಠ ಸ್ವಾಗತಿಸಿದರು. ರವಿಕುಮಾರ್ ಹಿರೇಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts