More

    ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣ: ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

    ವಾರಣಾಸಿ: ನಕಲಿ ದಾಖಲೆಗಳೊಂದಿಗೆ ಶಸ್ತ್ರಾಸ್ತ್ರ ಪರವಾನಗಿ ಪಡೆದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್-ರಾಜಕಾರಣಿ, ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಇದನ್ನೂ ಓದಿ: ಅಯೋಧ್ಯೆ ಬಾಲರಾಮ ದೇವರ ದರ್ಶನ, ಆರತಿ ಸಮಯದಲ್ಲಿ ಬದಲಾವಣೆ..ಇಲ್ಲಿದೆ ಮಾಹಿತಿ

    ವಾರಣಾಸಿ ಸಂಸದ-ಶಾಸಕರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಗೌತಮ್ ಬುಧವಾರ ಈ ಸಂಚಲನಾತ್ಮಕ ತೀರ್ಪು ನೀಡಿದ್ದಾರೆ.

    ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅನ್ಸಾರಿ 2021ರಿಂದ ಬಂದಾ ಜೈಲಿನಲ್ಲಿದ್ದಾನೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

    ಮುಖ್ತಾರ್ ಅನ್ಸಾರಿ ಶಾಸಕರಾಗಿದ್ದಾಗ ನಕಲಿ ದಾಖಲೆಗಳ ಮೂಲಕ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದರು ಎಂದು 1990ರಲ್ಲಿ ಸಿಬಿಸಿಐಡಿ ಎಫ್‌ಐಆರ್ ದಾಖಲಿಸಿತ್ತು. ಇವರೊಂದಿಗೆ ಆರ್ಡನೆನ್ಸ್ ಕ್ಲರ್ಕ್ ಗೌರಿ ಶಂಕರಲಾಲ್ ಅವರನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ.

    ಮುಖ್ತಾರ್ ಅನ್ಸಾರಿ ಅಂದಿನ ಡಿಎಂ ಅಲೋಕ್ ರಂಜನ್ ಮತ್ತು ಎಸ್ಪಿ ದೇವರಾಜ್ ನಗರ್ ಅವರ ನಕಲಿ ಸಹಿಯೊಂದಿಗೆ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದಾರೆ ಎಂದು ಸಿಬಿಸಿಐಡಿ ಆರೋಪಿಸಿದೆ.

    ಏತನ್ಮಧ್ಯೆ, ಡಿಸೆಂಬರ್ 2023 ರಲ್ಲಿ, ಸಂಸದ-ಶಾಸಕ ವಿಶೇಷ ನ್ಯಾಯಾಲಯವು ಅನ್ಸಾರಿಗೆ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಐದು ಬಾರಿ ಶಾಸಕರಾಗಿ ಗೆದ್ದಿರುವ ಅನ್ಸಾರಿ 2022ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆತನ ಪುತ್ರ ಅಬ್ಸಾಸ್ ಅನ್ಸಾರಿ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಮಾಹುದಿಂದ ಸ್ಪರ್ಧಿಸಿ ಗೆದ್ದಿದ್ದರು.

    ಭೂತಾನ್‌ಗೆ ಭಾರತ ಸಹಕಾರ..ಕೇಂದ್ರ ಸಂಪುಟ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts