More

    ನಾನು ಸತ್ತಿಲ್ಲ ಬದುಕಿದ್ದೇನೆ … ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ಶಕ್ತಿಮಾನ್

    ಮುಂಬೈ: ಅವರು ನಟ-ನಟಿಯರ ಆರೋಗ್ಯದಲ್ಲಿ ಏರುಪೇರಾಗಿದೆ, ಅವರು ಕರೊನಾದಿಂದ ನಿಧನರಾಗಿದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ. ಆಮೇಲೆ ಆ ಕಲಾವಿದರು ತಮಗೇನೂ ಆಗಿಲ್ಲ, ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ, ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದ ಬಗ್ಗೆ ಇದೇ ರೀತಿ ಅಪಪ್ರಚಾರವಾಗಿತ್ತು. ಕೊನೆಗೆ, ದೊಡ್ಡಣ್ಣ ವೀಡಿಯೋ ಮೂಲಕ ತಾವು ಆರೋಗ್ಯಕರವಾಗಿರುವುದಾಗಿ ಸ್ಪಷ್ಟಪಡಿಸಿದ್ದರು.

    ಇದನ್ನೂ ಓದಿ: ಕೊಟ್ಟಿದ್ದನ್ನು ಹೇಳಲು ಸಂಕೋಚ; ನೆಟ್ಟಿಗರ ಟೀಕೆಗೆ ದಾನದ ಪಟ್ಟಿ ತೆರೆದಿಟ್ಟ ಅಮಿತಾಬ್

    ಈಗ ಅಂಥದ್ದೇ ಒಂದು ಪರಿಸ್ಥಿತಿ ಬಾಲಿವುಡ್​ನ ಹಿರಿಯ ನಟ ಮುಖೇಶ್​ ಖನ್ನಾ ಅವರಿಗೂ ಬಂದಿದೆ. ಮುಖೇಶ್​ ಖನ್ನಾ ಅವರಿಗೆ ಕರೊನಾ ಪಾಸಿಟಿವ್​ ಆಗಿದೆ, ಅದರಿಂದ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯೊಂದು ಮಂಗಳವಾರ ಬಾಲಿವುಡ್​ ಅಂಗಳದಲ್ಲಿ ಕೇಳಿಬಂದಿತ್ತು. ಅದೆಲ್ಲ ಸುಳ್ಳು, ತಾನು ಆರೋಗ್ಯವಾಗಿದ್ದೇನೆ ಎಂದು ಸ್ವತಃ ಮುಖೇಶ್​ ಖನ್ನಾ ಹೇಳಿಕೊಂಡ ಮೇಲೆ ಆ ಸುದ್ದಿಗಳೆಲ್ಲ ತಣ್ಣಗಾಗಿವೆ.

    ನನಗೆ ಕರೊನಾ ಪಾಸಿಟಿವ್​ ಆಗಿಲ್ಲ. ಹಾಗೆಯೇ ನಾನು ಯಾವುದೇ ಕೋವಿಡ್​ ಸೆಂಟರ್​ಗೆ ಸಹ ದಾಖಲಾಗಿಲ್ಲ. ಆದರೂ ನಾನು ಸತ್ತಿದ್ದೇನೆ ಎಂಬ ಸುದ್ದಿ ಹರಡಿದೆ. ಹಲವರು ಫೋನ್​ ಮಾಡಿ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿರುವುದಷ್ಟೇ ಅಲ್ಲ, ಸುರಕ್ಷಿತವಾಗಿದ್ದೇನೆ. ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಕಾರ್ಮಿಕರ ಕಷ್ಟಕ್ಕೆ ಕಲಾವಿದರ ಸ್ಪಂದನೆ; ಹೀಗೊಂದು ವಿಭಿನ್ನ ನಿಧಿ ಸಂಗ್ರಹಣೆ

    ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ಭೀಷ್ಮನ ಪಾತ್ರ ಮಾಡುವ ಮೂಲಕ ಮುಖೇಶ್​ ಖನ್ನಾ ಜನಪ್ರಿಯರಾಗಿದ್ದರು. ಆ ನಂತರ ಅವರು ಶಕ್ತಿಮಾನ್​​ ಎಂಬ ಭಾರತದ ಮೊದಲ ಸೂಪರ್​ ಹೀರೋ ಕುರಿತು ಧಾರಾವಾಹಿಯನ್ನು ನಿರ್ಮಿಸುವುದರ ಜತೆಗೆ, ಶಕ್ತಿಮಾನ್​ ಪಾತ್ರವನ್ನು ಸಹ ಮಾಡಿದ್ದರು.

    ಟಾಲಿವುಡ್ ಮಂದಿಗೆ ಪೂಜಾ ಮಾವಿನ ಹಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts