More

    ಜಾಗತಿಕ ಶತಕೋಟ್ಯಧಿಪತಿಗಳ ಪಟ್ಟಿಯ ಟಾಪ್​-10ನಲ್ಲಿರುವ ಏಕೈಕ ಭಾರತೀಯ ಅಂಬಾನಿ!

    ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ (ಆರ್​ಐಎಲ್​) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತೊಮ್ಮೆ ಜಗತ್ತಿನ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದಾರೆ. ಅದರಲ್ಲೂ ಜಾಗತಿಕ ಶತಕೋಟ್ಯಧಿಪತಿಗಳ ಪಟ್ಟಿಯ ಟಾಪ್​-10ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ಇತ್ತೀಚೆಗೆ ಬಿಡುಗಡೆ ಆಗಿರುವ ಹುರುನ್ ಗ್ಲೋಬಲ್ ರಿಚ್​ ಲಿಸ್ಟ್​​ನ ಟಾಪ್​-10 ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಹೆಸರೂ ಇದೆ. ಮುಕೇಶ್ ಅಂಬಾನಿ 66 ಬಿಲಿಯನ್​ ಡಾಲರ್ ಸಂಪತ್ತಿನೊಂದಿಗೆ ಈ ಪಟ್ಟಿಯ ಟಾಪ್​-9 ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಟಾಪ್​​-10ನಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಉಳಿದಂತೆ ಅದಾನಿ ಸೇರಿದಂತೆ ಇತರ ಭಾರತೀಯ ಉದ್ಯಮಿಗಳು ಈ ಪಟ್ಟಿಯಲ್ಲಿದ್ದರೂ ಅವರು ಟಾಪ್​-10ನಲ್ಲಿ ಇಲ್ಲ. ಗೌತಮ ಅದಾನಿ 23ನೇ ಸ್ಥಾನ, ಸೈರಸ್ ಪೂನಾವಾಲಾ 46, ಶಿವ ನಾಡಾರ್ 50 ಮತ್ತು ಲಕ್ಷ್ಮೀ ಮಿತ್ತಲ್ 76 ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತೀಯ ಉದ್ಯಮಿಗಳಾಗಿದ್ದಾರೆ.

    ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪ!; ವರ್ಷಾರಂಭದಲ್ಲೇ ನಡುಗಿದ ಭೂಮಿ, ಆತಂಕದಲ್ಲಿ ರಾಜಧಾನಿಯ ಜನತೆ

    ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಜಗತ್ತಿನಲ್ಲಿ 3,384 ಶತಕೋಟ್ಯಧಿಪತಿಗಳು ಇದ್ದಿದ್ದು, ಈ ಸಲ ಆ ಸಂಖ್ಯೆ 3,112ಕ್ಕೆ ಇಳಿದಿದೆ. ಅಲ್ಲದೆ 2022ಕ್ಕೆ ಹೋಲಿಸಿದರೆ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ. 8 ಕುಸಿತವಾಗಿದ್ದರೆ, ಶತಕೋಟ್ಯಧಿಪತಿಗಳ ಸಂಪತ್ತಿನಲ್ಲಿ ಶೇ. 10 ಕುಸಿತವಾಗಿದೆ ಎಂದು ಈ ವರದಿ ಹೇಳಿದೆ.

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts