More

    ಜಡಗಣ್ಣ ಬಾಲಣ್ಣ ಅಜರಾಮರ

    ಮುಧೋಳ: 1857ರ ಪ್ರಥಮ ಸ್ವಾತಂತ್ರೃ ಸಂಗ್ರಾಮದಲ್ಲಿ ಬ್ರಿಟಿಷರ ನಿಶಸ್ತ್ರೀಕರಣ ಕಾಯ್ದೆ ವಿರುದ್ಧ ಬಂಡಾಯವೆದ್ದು ಸ್ವಾತಂತ್ರೃ ಪ್ರೇಮ ಮೆರೆದ ಕೀರ್ತಿ ಹಲಗಲಿ ಬಂಡಾಯದ ಮುಂಚೂಣಿ ನಾಯಕರಾದ ಜಡಗಣ್ಣ ಬಾಲಣ್ಣ ಅವರಿಗೆ ಸಲ್ಲುತ್ತದೆ ಎಂದು ಕ್ರಾಂತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದು ದೇವಗೋಳ ಹೇಳಿದರು.

    ಮುಧೋಳ ನಗರದ ಕ್ರಾಂತಿ ವೇದಿಕೆ ಆಶ್ರಯದಲ್ಲಿ ಜಡಗಣ್ಣ-ಬಾಲಣ್ಣ ವೃತ್ತದಲ್ಲಿ ಹುತಾತ್ಮ ದಿನಾಚರಣೆ ನಿಮಿತ್ತ ಇತ್ತೀಚೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

    ಪ್ರಥಮ ಸ್ವಾತಂತ್ರೃ ಸಂಗ್ರಾಮಕ್ಕಿಂತ ಮೊದಲೇ ಬ್ರಿಟಿಷರ ವಿರುದ್ಧ ಬಂಡಾಯವೆದ್ದ ವೀರರೆಂದರೆ ಜಡಗಣ್ಣ-ಬಾಲಣ್ಣ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ಶಸಾಸ ನಿಷೇಧ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ನಿಂತರು. ಈ ಹೋರಾಟದಲ್ಲಿ ಸಾಕಷ್ಟು ಬೇಡರು ಮರಣ ಹೊಂದಿದ್ದಾರೆ ಎಂದು ಹೇಳಿದರು.

    ಉದ್ಯಮಿ ರಾಮಣ್ಣ ಸವದಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರಲ್ಲಿ ಮೊದಲಿಗರಾದ ಜಡಗಣ್ಣ ಮತ್ತು ಬಾಲಣ್ಣ ಅವರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

    ಪ್ರಭು ಸುಣಗಾರ, ಶಿವಾಜಿ ಮಾನೆ, ಬಂಡು ಧಾರವಾಡಕರ, ಮಂಜು ಹೊಸಮನಿ, ಪುನೀತ ಹೊಸಮನಿ, ಕೃಷ್ಣಾ ಪಡತಾರೆ, ಗುರು ತೇಲಿ, ಮಹಾದೇವ ಬಂಡಿವಡ್ಡರ, ಅನಿಲ ಮಲಾವಡಿ, ಗಜು ಪರೀಟ, ಚಂದು ಮುದ್ದೇಬಿಹಾಳ, ಮಹಾದೇವ ಕುಂಚನೂರ ಇದ್ದರು. ಸತೀಶ ಹೊಸಮನಿ ಸ್ವಾಗತಿಸಿ, ರಾಜು ದೇಶಪಾಂಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts