More

    ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಿ

    ಮುಧೋಳ : ಉತ್ತರ ಪ್ರದೇಶದ ಹಾತ್ರಾಸ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳನ್ನು ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ದಲಿತ, ಅಹಿಂದ, ಅಲ್ಪಸಂಖ್ಯಾತರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಸಂಗಮೇಶ ಬಾಡಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

    ಡಿಎಸ್‌ಎಸ್ ಬೆಳಗಾವಿ ವಿಭಾಗದ ಸಂಚಾಲಕ ಗಣೇಶ ಮೇತ್ರಿ ಮಾತನಾಡಿ, ಅತ್ಯಾಚಾರಕ್ಕೊಳಗಾದ ಯುವತಿಯ ಶವ ಸಂಸ್ಕಾರ ಮಾಡಲು ಆಕೆಯ ಪೋಷಕರಿಗೆ ಅವಕಾಶ ನೀಡದೆ ಉತ್ತರ ಪ್ರದೇಶದ ಸರ್ಕಾರ ಅಮಾನವೀಯವಾಗಿ ವರ್ತಿಸಿರುವುದು ಹಲವು ಸಂಶಯಕ್ಕೆಡೆ ಮಾಡಿಕೊಡುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು.

    ಮುಖಂಡ ಎಂ.ಡಿ. ಗಾಯಕವಾಡ ಮಾತನಾಡಿ, ಸರ್ಕಾರ ಅಪರಾಧಿಗಳನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

    ಅಹಿಂದ ಒಕ್ಕೂಟದ ಅಧ್ಯಕ್ಷ ಭೀಮಶಿ ತಳವಾರ ಮಾತನಾಡಿ, ಮರಣ ದಂಡನೆ ಶಿಕ್ಷೆ ವಿಧಿಸುವ ಮೂಲಕ ಅತ್ಯಾಚಾರಗಳಿಗೆ ಪಾಠವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಮಹೇಶ ಹುಗ್ಗಿ, ಇಸ್ಮಾಯಿಲ್ ವಾಲಿಕಾರ, ಕಿರಣ ಮೌರ್ಯ, ಸದಾಶಿವ ಮೇತ್ರಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಣ ಮಾಳಗಿ, ಪ್ರಕಾಶ ತಳಗೇರಿ, ನಗರಸಭೆ ಸದಸ್ಯರಾದ ಸತೀಶ ಗಾಡಿ, ಭೀಮಶಿ ಮೇತ್ರಿ, ಪ್ರಮುಖರಾದ ಪ್ರಭು ಸುಣಗಾರ, ಮಹಾದೇವ ಮಾದರ, ಸಿದ್ದು ದೇವಗೋಳ, ಮೈಬೂಬ ಬಿಸ್ತಿ, ರಂಗನಾಥ ಲೋಕಾಪುರ, ಹಣಮಂತ ಶಿಂಧೆ, ದಿನೇಶ ಹಂಚಿನಮನಿ, ಹಣಮಂತ ಮಾಂಗ, ಹಣಮಂತ ಪೂಜಾರಿ, ಪ್ರಕಾಶ ಮಾಂಗ ಮತ್ತಿತರರು ಭಾಗವಹಿಸಿದ್ದರು. ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts