More

    ಸಕ್ಕರೆ ಕಾರ್ಖಾನೆ ನೌಕರರಿಂದ ಪ್ರತಿಭಟನೆ

    ಮುಧೋಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಎಂಪ್ಲಾಯಿಸ್ ಯೂನಿಯನ್ ಕಾರ್ಮಿಕರು ಹಾಗೂ ನೌಕರರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂಗಮೇಶ ಬಾಡಗಿ ಅವರಿಗೆ ಮನವಿ ಸಲ್ಲಿಸಿದರು.

    ಯೂನಿಯನ್ ಅಧ್ಯಕ್ಷ ಈರಪ್ಪಗೌಡ ಪಾಟೀಲ ಮಾತನಾಡಿ, ಕಾರ್ಖಾನೆ ಲೀಜ್‌ಗೆ ಕೊಡುವ ವಿಷಯ ತಿಳಿದಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುವವರಿಗೆ 5ನೇ ವೇಜ್‌ಬೋರ್ಡ್ ವೇತನ ಜಾರಿಯಲ್ಲಿದ್ದು, 2014ರಿಂದ ಸರ್ಕಾರದಲ್ಲಿ 6ನೇ ವೇಜ್ ವೇತನ ಜಾರಿಯಾಗಿದೆ. ಈ ವೇತನವನ್ನು ಲೀಜ್ ತೆಗೆದುಕೊಳ್ಳುವವರು ನಮಗೂ ಅನ್ವಯವಾಗುವಂತೆ ಮಾಡಬೇಕು. 2004ರಿಂದ 2009ರವರೆಗೆ ಸರ್ಕಾರದ ಪ್ರಕಾರ ನಾಲ್ಕನೇ ವೇತನ ಹಾಗೂ 2014 ರವರೆಗೆ 5ನೇ ವೇತನ 2014 ರಿಂದ ಇಲ್ಲಿವರೆಗೆ 6 ನೇ ವೆಜ್ ವೇತನ ಬಾಕಿ ಹಣ ನೀಡುವುದು, ಆಗಸ್ಟ್ 2020ರಿಂದ ಇಲ್ಲಿವರೆಗೆ 2.10 ಕೋಟಿ ರೂ. ಹಾಗೂ ಇಎಲ್ ಬಾಕಿ ಇದ್ದು, ಅವುಗಳನ್ನು ಕೂಡಲೇ ನೌಕರರಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಉಪಾದ್ಯಕ್ಷ ಉಮೇಶ ಬಡಿಗೇರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಭೀಮಾಶಂಕರ ಗಲಗಲಿ, ಪಾಂಡಪ್ಪ ಮುಳ್ಳೂರ, ಹನುಮಂತಗೌಡ ಪಾಟೀಲ, ನಾಗಪ್ಪ ಕೆಳಗಡೆ, ಚಂದ್ರಶೇಖರ ದೇಸಾಯಿ, ಕಾಳಪ್ಪ ಕುಂಬಾರ, ಗೋವಿಂದಪ್ಪ ಅವರಾದಿ, ರವಿ ಹಲಗತ್ತಿ, ಕೃಷ್ಣಾ ಮಳಲಿ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಆಗಸ್ಟ್ 2020ರಿಂದ ಇಲ್ಲಿವರೆಗೆ ವೇತನ ಬಾಕಿ ಇದೆ. ಜತೆಗೆ ಇಎಲ್ ಸಹ ಬಾಕಿ ಇದೆ. ಅದನ್ನು ಸಂದಾಯ ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಕಾರ್ಮಿಕರು ಯಾವುದೇ ತರಹದ ಆತಂಕಕ್ಕೆ ಒಳಗಾಗಬಾರದು. ಲೀಜ್ ಪ್ರಕ್ರಿಯೆ ಮುಗಿದ ತಕ್ಷಣ ಈ ಎಲ್ಲ ಕಾರ್ಯಗಳು ಸರಾಗವಾಗಿ ಸಾಗಲಿವೆ.
    ಆರ್.ಎಸ್. ತಳೇವಾಡ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ತಿಮ್ಮಾಪುರ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts