More

    ಮಾತೃಭಾಷೆಯಲಿ ಶಿಕ್ಷಣ ನೀಡಿದರೆ ಕನ್ನಡ ಭಾಷೆ ಅಜರಾಮರ

    ಮುಧೋಳ: ಎಲ್ಲ ಬಗೆಯ ಪುಸ್ತಕಗಳನ್ನು ಹೊರ ತರುವುದರ ಜತೆಗೆ 12 ಪ್ರವಾಸ ಕಥನಗಳನ್ನು ಒಳಗೊಂಡ 160 ಕೃತಿಗಳನ್ನು ಬರೆದು ಕನ್ನಡ ಸಾರಸ್ವತಲೋಕದಲ್ಲಿ ಡಾ.ಅಶೋಕ ನರೋಡೆ ಸಾಮ್ರಾಟರಾಗಿದ್ದಾರೆ ಎಂದು ಹಾರೂಗೇರಿ ಡಿ.ಅರ್. ದರೂರ ಸಂಶೋಧನಾ ಸಂಸ್ಥೆಯ ಸಂಯೋಜಕ ಡಾ ವಿ.ಎಸ್.ಮಾಳಿ ಹೇಳಿದರು.

    ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತ್ ಜಿಲ್ಲಾ ಘಟಕ, ಬೆಂಗಳೂರಿನ ನಿವೇದಿತ ಪ್ರಕಾಶನ, ಮಹಾಲಿಂಗಪುರದ ಅಪೂರ್ವ ಸಂಸ್ಕೃತಿ ಪ್ರಕಾಶನಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಡಾ.ಅಶೋಕ ನರೋಡೆ ಅವರ 12 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಾಹಿತಿಗಳಿಗೆ ಪುಸ್ತಕಗಳ ಮೇಲೆ ಪ್ರೀತಿ ಇರಬೇಕೇ ಹೊರತು ವ್ಯಾಮೋಹ ಇರಬಾರದು. ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತ್ಯಗಳ ಸಾಲಿಗೆ ಸೇರುವ ಡಾ.ಅಶೋಕ ನರೋಡೆ ಅವರಿಂದ ಇನ್ನೂ ಅತ್ಯುತ್ತಮ ಪುಸ್ತಕಗಳು ಹೊರಬರಲಿ. ವಿಶ್ವವಿದ್ಯಾಲಯಗಳು ವೈದ್ಯ ಸಾಹಿತಿಗಳ ಜತೆಗೆ ಇತರ ಸಾಹಿತಿಗಳಿಗೂ ಅವಕಾಶ ನೀಡಿ ಅವರನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು .

    ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ ಕಾರ್ಯಕ್ರಮ ಉದ್ಘಾಟಿಸಿ, ಕೇವಲ ನವೆಂಬರ್‌ನಲ್ಲಿ ಮಾತ್ರ ಕನ್ನಡ ಪ್ರೀತಿ ತೋರದೆ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಕನ್ನಡ ಭಾಷೆ ಅಜರಾಮರವಾಗಿ ಉಳಿಯುತ್ತದೆ. ಈ ಮೂಲಕ ಕನ್ನಡ ಕಟ್ಟುವ ಕಾರ್ಯವನ್ನು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದರು.

    ಡಾ.ಶಿವಾನಂದ ಕುಬಸದ, ಅಥಣಿ ಮೋಟಗಿಮಠದ ಡಾ.ಪ್ರಭು ಚನ್ನಬಸವ ಸ್ವಾಮೀಜಿ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಪ್ರಸಾರಾಂಗ ವಿಭಾಗದ ಸಹಾಯಕ ನಿರ್ದೇಶಕರಿಗೆ ಮೈತ್ರೇಯಣಿ ಗದಿಗೆಪ್ಪಗೌಡರ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತ್ರಿವೇಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಶಿರ ಮಲಘಾಣ, ಕಾರ್ಯಾಧ್ಯಕ್ಷೆ ನಿರ್ಮಲಾ ಮಲಘಾಣ. ಕಾನಿಪ ಅಧ್ಯಕ್ಷ ಬಿ.ಆರ್. ಶೆಟ್ಟಿ, ವೈ.ಎಂ. ಯಾಕೊಳ್ಳಿ, ಡಾ.ಶಿವಾನಂದ ಕುಬಸದ, ಚಂದ್ರಶೇಖರ ದೇಸಾಯಿ ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts