More

    ನಿವೇಶನಕ್ಕಾಗಿ ಅಧಿಕಾರಿ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟಿಸಿದ ಮಹಿಳೆ

    ಪುನರ್ವಸತಿ ಯೋಜನೆ ಅಡಿ ದೊರೆತ ನಿವೇಶನ ಕಾಣೆ | ಕಳೆದ 26 ವರ್ಷಗಳಿಂದ ಕಂಗಾಲಾಗಿರುವ ಕುಟುಂಬ

    ಮುದಗಲ್: ಸರ್ಕಾರದಿಂದ ಪುನರ್ವಸತಿ ಯೋಜನೆ ಅಡಿ ಮಂಜೂರಾಗಿದ್ದ ನಿವೇಶನ ಸಿಗದೆ ಕಂಗಾಲಾಗಿರುವ ಮಹಿಳೆ, ಕೆಬಿಜೆಎನ್‌ಎಲ್ ಅಧಿಕಾರಿಗಳ ವಾಹನವನ್ನು ಅಡ್ಡಗಟ್ಟಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಕೃಷ್ಣಾ ನದಿ ಹಿನ್ನೀರಿನಲ್ಲಿ ಸ್ಥಳಾಂತರಗೊಂಡಿದ್ದ ತುಂಬಲಗಡ್ಡಿ ಗ್ರಾಮಸ್ಥರಿಗೆ ಸಮೀಪದ ನಾಗರಹಾಳ ಪಕ್ಕದಲ್ಲಿ ವಾಸಕ್ಕೆ ಕೃಷ್ಣಾ ಜಲಬಾಗ್ಯ ನಿಗಮದ ಯುಕೆಪಿಯಿಂದ ನಿವೇಶನ ಕಲ್ಪಿಸಲಾಗಿತ್ತು. ಇದರಲ್ಲಿ ಸಂಗಪ್ಪ ತಂದೆ ಬಸಲಿಂಗಪ್ಪ ಎನ್ನುವವರಿಗೆ ಕಳೆದ 26 ವರ್ಷದಿಂದ ತುಂಬಲಗಡ್ಡಿ ಪುನರ್ವಸತಿ ಕೇಂದ್ರದಿಂದ ನಿವೇಶನ ಮಂಜೂರಾಗಿದೆ.

    ಆದರೆ, ಕೇವಲ ನಿವೇಶನ ಪತ್ರ ಕೈಗೆ ನೀಡಿದ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಬಂದು ನಿವೇಶನ ಗುರುತಿಸಿ ಕೊಡದೆ ಬೇಜವಾಬ್ದಾರಿ ಮಾಡಿದ್ದರು. ನಿವೇಶನಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದ ಫಲಾನುಭವಿ ಕಳೆದ ಎಂಟು ವಷರ್ಗಳ ಹಿಂದೆ ತೀರಿಹೋಗಿದ್ದಾರೆ. ಆದರೆ, ಫಲಾನುಭವಿ ಹೆಂಡತಿ ಬಸಮ್ಮ ಜಿಲ್ಲೆಯ ಡಿಸಿ, ಸಿಇಒ, ಎಸಿ, ಇಒ, ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿರಲಿಲ್ಲ. ಇದರಿಂದ ನೊಂದಿದ್ದ ಬಸಮ್ಮ, ಗ್ರಾಮಕ್ಕೆ ಬಂದಿದ್ದ ಕೆಬಿಜೆಎನ್‌ಎಲ್ ಅಧಿಕಾರಿಗಳ ಮುಂದೆ ನ್ಯಾಯಯುತವಾಗಿ ನಿವೇಶನ ಗುರುತಿಸಿ ಕೊಡುವಂತೆ ದಾಖಲೆಗಳೊಂದಿಗೆ ಮನವಿ ಮಾಡಿದರು. ಅಧಿಕಾರಿಗಳು ಸ್ಪಂದಿಸದಿದ್ದಾಗ ವಾಹನದ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು. ಕಕ್ಕಾಬಿಕ್ಕಿಯಾದ ಅಧಿಕಾರಿ ಹನುಮಂತ ಭಜೆಂತ್ರಿ, ಸಮಾಧಾನ ಪಡಿಸಿ ಭರವಸೆ ನೀಡಿದರು.

    ಕೆಬಿಜೆಎನ್‌ಎಲ್‌ಗೆ ಮಹಿಳೆ ನೀಡಿದ ನಕ್ಷೆ ಮತ್ತು ದಾಖಲೆಗಳಲ್ಲಿ ಫಲಾನುಭವಿಯ ಹೆಸರಲ್ಲಿ ನಿವೇಶ ಮಂಜೂರಾಗಿದೆ. ಆದರೆ, ಸ್ಥಳದಲ್ಲಿ ಕೆಲ ಜಾಗ ಬದಲಾಗಿದ್ದು ಇನ್ನೂ 20ಕ್ಕೂ ಹೆಚ್ಚು ನಿವೇಶನ ಹೆಚ್ಚುವರಿಯಲ್ಲಿವೆ. ಫಲಾನುಭವಿಗೆ ಅನ್ಯಾಯ ಆಗದಂತೆ ನಿವೇಶನ ಕಲ್ಪಿಸಲಾಗುವುದು.
    | ಹನುಮಂತ ಭಜೆಂತ್ರಿ, ಕೆಬಿಜೆಎನ್‌ಎಲ್ ಅಧಿಕಾರಿ, ಯುಕೆಪಿ ರೋಡಲಬಂಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts