More

    ಮೊಹರಂ ಆಚರಣೆಯಲ್ಲಿ ಶಾಂತಿ ಕದಡದಿರಿ

    ಮುದಗಲ್: ಪಟ್ಟಣದಲ್ಲಿ ಭಾವೈಕ್ಯದಿಂದ ಆಚರಿಸುವ ಮೊಹರಂ ಯಶಸ್ವಿಗೆ ನಾಗರಿಕರ ಸಹಕಾರ ಅವಶ್ಯ ಎಂದು ಲಿಂಗಸುಗೂರು ಡಿವೈಎಸ್ಪಿ ಮಂಜುನಾಥ ಹೇಳಿದರು.

    ಭಾರತ ಕಲ್ಯಾಣ ಮಂಟಪದಲ್ಲಿ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 10 ದಿನ ನಡೆಯುವ ಮೊಹರಂನಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಶಾಂತಿ ಕದಡುವ ಮತ್ತು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಅಗತ್ಯವಾಗಿದೆ. ಪ್ರಚೋದನಾತ್ಮಕ ನಡೆ, ಭಕ್ತರಿಗೆ ಕಿರುಕುಳ ನೀಡುವ ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಮಾತನಾಡಿ, ಮುದಗಲ್ ಮೊಹರಂ ಆಚರಣೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಭಕ್ತರಿಗೆ ತೊಂದರೆ ಆಗದ ರೀತಿಯಲ್ಲಿ ಪುರಸಭೆ ಮತ್ತು ಆಲಂ ದರ್ಗಾ ಕಮಿಟಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಸಿಸಿ.ಕ್ಯಾಮರಾ ಅಳವಡಿಕೆಯೊಂದಿಗೆ ನೈರ್ಮಲ್ಯ ಕಾಪಾಡಬೇಕು. ಚಿಕಿತ್ಸೆ ಹಾಗೂ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ತಹಸೀಲ್ದಾರ್ ಡಿ.ಎಸ್.ಜಾಮದಾರ, ಪುರಸಭೆ ಮುಖ್ಯಾಧಿಕಾರಿ ನಬಿಸಾಬ್ ಎಂ.ಕಂದಗಲ್, ಸಿಪಿಐ ಸಂಜೀವ್ ಬಳಿಗಾರ, ಅಬಕಾರಿ ಅಧಿಕಾರಿ ಸಂತೋಷಕುಮಾರ, ಆಲಂ ದರ್ಗಾ ಕಮಿಟಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಕಾರ್ಯದರ್ಶಿ ಮಹ್ಮದ್ ಸಾದೀಕ್ ಅಲಿ, ಪ್ರಮುಖರಾದ ಗುರುಬಸಪ್ಪ ಸಜ್ಜನ್, ನ್ಯಾಮತ್ ಖಾದ್ರಿ, ಸಣ್ಣ ಸಿದ್ದಯ್ಯ, ಸಂಗಪ್ಪ ಹಿರೇಮನಿ, ಮೈಬೂಬು ಕಡ್ಡಿ ಪುಡಿ, ಬಸವರಾಜ ಬಂಕದಮನಿ, ಮಾಸೂಮ ಶರೀಫ್, ವೆಂಕಟೆಶ ಹಿರೇಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts