More

    ಅಂಗವಿಕಲರ ಅನುದಾನ ಸದ್ಬಳಕೆಯಾಗಲಿ: ಮುದೇನೂರು ಗ್ರಾಪಂ ಸದಸ್ಯರ ಒತ್ತಾಯ

    ಮುದೇನೂರು: ಸರ್ಕಾರದಿಂದ ಪಂಚಾಯಿತಿಗೆ ಬಿಡುಗಡೆಯಾದ ಅಂಗವಿಕಲರ ಅನುದಾನ ಸದ್ಬಳಕೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಪಂ ಸದಸ್ಯ ಹುಸೇನಪ್ಪ ಆ.ಹಿರೇಮನಿ ಹೇಳಿದರು.

    ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಅಂಗವಿಕಲರಿದ್ದು, ಅವರಿಗೆ ವೈಯಕ್ತಿಕ ಅಥಾವ ಸಾಮೂಹಿಕವಾಗಿ ಖರ್ಚುವಾಗುವಂತಹ ಅನುದಾನ ಬಳಕೆ ಮಾಡಬೇಕಿದೆ. ಇಲ್ಲವಾದರೆ ಕ್ಷೇತ್ರ ದರ್ಶನ ಮಾಡಿಕೊಂಡು ಬರಬೇಕು ಎಂದು ಪಿಡಿಒ ದಸ್ತಗಿರಿಸಾಬ್ ಬಡಿಗೇರಗೆ ಸೂಚಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಪ್ರಸಕ್ತ ವರ್ಷ ಅಂಗವಿಕಲರಿಗೆ 54 ಸಾವಿರ ರೂ. ಮಂಜೂರಾಗಿದ್ದು, ಅದನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು. ಎಸ್.ಉಳ್ಳಾಗಡ್ಡಿ ಮಾತನಾಡಿ, ಗ್ರಾಮದಲ್ಲಿ ನಮ್ಮ ಹೊಲ-ನಮ್ಮ ರಸ್ತೆ ಕಾಮಗಾರಿ ಜತೆಗೆ ಸಿಸಿ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎಂದರು. ಪರಸಪ್ಪ ಪರಮಣ್ಣ ಮಾತನಾಡಿ, ಜಾಬ್‌ಕಾರ್ಡ್ ಹೊಂದಿದವರು ವರ್ಷದಲ್ಲಿ ಎರಡ್ಮೂರು ಸಲ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಬೇಕಿದ್ದರಿಂದ ದಿನಪೂರ್ತಿ ಪಂಚಾಯಿತಿಗೆ ಅಲೆದಾಡುವ ಪರಿಸ್ಥಿತಿ ಇದೆ. ಈ ನಿಯಮ ತಪ್ಪಿಸಿ ಕೂಲಿಕಾರರಿಗೆ ಅನುಕೂಲ ಮಾಡಿಕೊಡಬೇಕು. ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಸಂತೆ ಹರಾಜಿಗೆ ಶೀಘ್ರವೇ ಟೆಂಡರ್ ಕರೆಯಬೇಕೆಂದು ಒತ್ತಾಯಿಸಿದರು. ಅಧ್ಯಕ್ಷೆ ಈರಮ್ಮ ಸಂಗಪ್ಪ ವಾಲೇಕಾರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ದೊಡ್ಡನಗೌಡ ಪೊ.ಪಾಟೀಲ್, ವಿದ್ಯಾ ವೇದಮೂರ್ತಿ ಸ್ವಾಮಿ ಹಿರೇಮಠ, ಶೀತವ್ವ ಕುಷ್ಟಗಿ, ಶರಣೇಗೌಡ ಪೊ.ಪಾಟೀಲ್, ಪಾರ್ವತಿ ಕೃಷ್ಣ ಲಿಂಗಸುಗೂರು, ರಾಮಪ್ಪ ಬೋದೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts