More

    ವೃಕ್ಷ, ಜಲ ಸಂರಕ್ಷಣೆ ಎಲ್ಲರ ಕರ್ತವ್ಯ

    ಮುದೇನೂರು: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಗಿಡಮರ ಬೆಳೆಸಲು ಮುಂದಾಗಬೇಕು ಎಂದು ಕುಷ್ಟಗಿ ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು. ಜಲ ಸಂಜಿವೀನಿ ರೈತ ಸಂವಾದ ಕಾರ್ಯಕ್ರಮ ನಿಮಿತ್ತ ಮಾದಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಸಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಉದ್ಯೋಗ ಖಾತ್ರಿ ಯೋಜನೆಯಡಿ ಹಳ್ಳಿಗಳಲ್ಲಿ ಸಸಿಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ. ಜಲ ಸಂರಕ್ಷಣೆ ಮಾಡವುದು ಸಹ ಎಲ್ಲರ ಕರ್ತವ್ಯ. ಗಿಡ ಮರಗಳನ್ನು ಬೆಳೆಸುವುದರಿಂದ ಸಕಾಲಕ್ಕೆ ಮಳೆ ಬೆಳೆ ಪಡೆಯಲು ಸಾಧ್ಯವಾಗಲಿದೆ. ಅರಣ್ಯೀಕರಣಕ್ಕೆ ಎಲ್ಲರೂ ಒತ್ತು ನೀಡಬೇಕು ಎಂದು ತಿಳಿಸಿದರು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ತಾಪಂ ನರೇಗಾ ಸಹಾಯಕ ಲಿಂಗನಗೌಡ ಪಾಟೀಲ್, ಕೃಷಿ ಇಲಾಖೆ ಎಡಿ ತಿಪ್ಪೇಸ್ವಾಮಿ ವೇಷಗಾರ, ಗ್ರಾಪಂ ಸದಸ್ಯರಾದ ಹುಸೇನಪ್ಪ ಹಿರೇಮನಿ, ಬಾಲಮ್ಮ ವನಕೇರಿ, ರಮೇಶ ಬೋದೂರು, ತಾಪಂ ಐಇಸಿ ಸಂಯೋಜಕ ದೇವರಾಜ್ ಪತ್ತಾರ್, ಪಿಡಿಒ ದಸ್ತಗಿರಿಸಾಬ್ ಬಡಿಗೇರ್, ರೈತ ಮುಖಂಡರಾದ ಹನ್ಮಪ್ಪ ವಡ್ಡರ್, ಮಲ್ಲಮ್ಮ ಬರದೇಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts