More

    ನಾಟಕ ನೋಡಿ ಕಲಾವಿದರ ಪ್ರೋತ್ಸಾಹಿಸಿ : ಸೋಮನಾಳದ ಶ್ರೀ ಮಲಯ್ಯ ತಾತ ಸಲಹೆ

    ಮುದೇನೂರು: ಜಾತ್ರೆ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳನ್ನು ಜನರು ನೋಡಿ ಪ್ರೋತ್ಸಾಹಿಸಬೇಕು. ಅದರಲ್ಲಿನ ಒಳ್ಳೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೋಮನಾಳದ ಶ್ರೀ ಮಲಯ್ಯ ತಾತ ಸಲಹೆ ನೀಡಿದರು.

    ಹೊಮ್ಮಿನಾಳದಲ್ಲಿ ಶ್ರೀ ಶರಣಸಬವೇಶ್ವರ ಜಾತ್ರೆ ನಿಮಿತ್ತ ಶರಣಬಸವೇಶ್ವರ ನಾಟ್ಯ ಸಂಘ ಬುಧವಾರ ಏರ್ಪಡಿಸಿದ್ದ ‘ಕೆರಳಿದ ಕರ್ನಾಟಕದ ಹುಲಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖಂಡ ಚಂದ್ರು ನಾಲತ್ವಾಡ ಮಾತನಾಡಿ, ಪ್ರಸ್ತುತ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳಿಗೆ ಜನ ಮೊರೆ ಹೋಗಿದ್ದಾರೆ. ಅವರು ಪೂರ್ವಜರ ಕಾಲದಿಂದ ನಡೆಸಿಕೊಂಡ ಬಂದಿರುವ ರಂಗಭೂಮಿ, ಸಾಮಾಜಿಕ ನಾಟಕಗಳು ಪ್ರದರ್ಶನಕ್ಕೆ ಪ್ರೋತ್ಸಾಹಿಸಲು ಮುಂದಾಗಬೇಕು. ಇದರಿಂದ ರಂಗಭೂಮಿ ಕಲೆ ಉಳಿಯಲು ಸಾಧ್ಯ ಎಂದರು. ಮಹಾಂತಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಗ್ರಾಪಂ ಅಧ್ಯಕ್ಷರಾದ ಶಶಿಕಲಾ ಲಾವಂಡಿ, ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ಸಂಗನಗೌಡ ಪಾಟೀಲ್, ಗ್ರಾಪಂ ಉಪಾಧ್ಯಕ್ಷ ಕೆಂಚಪ್ಪ ಡಿ.ಸಿದ್ದಪುರ, ಸದಸ್ಯರಾದ ಯಮನೂರಪ್ಪ ದೇವಲಾಪುರ, ಲಲಿತಮ್ಮ ನಿತ್ಯಾನಂದಗೌಡ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts