More

    ಖಾಟಿಕ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರಿಸಿ

    ಮುದ್ದೇಬಿಹಾಳ: ಸಮಾಜದಲ್ಲಿ ಅತಿ ಕೆಳಸ್ತರದಲ್ಲಿ ಜೀವನ ನಡೆಸುತ್ತಿರುವ ಕಲಾಲ, ಖಾಟಿಕ್ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಸಮಾಜದ ಬಾಂಧವರು ಶನಿವಾರ ತಹಸೀಲ್ದಾರ್ ಮೂಲಕ ಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಕಲಾಲ, ಖಾಟಿಕ್ ಸಮಾಜ ಬಾಂಧವರು ಗ್ರೇಡ್-2 ತಹಸೀಲ್ದಾರ್ ದಶರಥ ಕಳ್ಳಿಮನಿಗೆ ಮನವಿ ಪತ್ರ ನೀಡಿದರು.

    ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಕಲಾಲ ಮಾತನಾಡಿ, ಪರಿಶಿಷ್ಟ ಜಾತಿಗೆ ಕಲಾಲ, ಖಾಟಿಕ ಸಮಾಜವನ್ನು ಸೇರಿಸುವ ಸಲುವಾಗಿ 2012ರಲ್ಲಿ ರಾಜ್ಯ ಸರ್ಕಾರದಿಂದ ಕುಲಶಾಸೀಯ ಅಧ್ಯಯನವನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಗುರುಲಿಂಗಯ್ಯ ಅವರು ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಸಮುದಾಯದ ಬೇಡಿಕೆಗೆ ಸ್ಪಂದಿಸುವ ಸ್ಪಂದಿಸುವ ಕಾರ್ಯ ಮಾಡಬೇಕಿದೆ ಎಂದರು.

    ಈಗಾಗಲೇ ದೇಶದ ಛತ್ತಿಸಘಡ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ, ರಾಜಸ್ತಾನ, ಉತ್ತರಾಂಚಲ, ಉತ್ತರಪ್ರದೇಶ ಮೊದಲಾದೆಡೆ ಎಸ್ಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು ರಾಜ್ಯದಲ್ಲಿ ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಲು ಹಿಂದೇಟು ಹಾಕುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

    ಕೂಡಲೇ ಸಿಎಂ ಯಡಿಯೂರಪ್ಪನವರು ಈಗಾಗಲೇ ಸಲ್ಲಿಕೆಯಾಗಿರುವ ವರದಿಯನ್ನು ತಮ್ಮ ಶಿಾರಸ್ಸಿನೊಂದಿಗೆ ಕೇಂದ್ರಕ್ಕೆ ಕಳಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಸಮಾಜದ ಮುಖಂಡರಾದ ಯಶವಂತ ಕಲಾಲ, ಸುರೇಶ ಕಲಾಲ, ಪ್ರಶಾಂತ ಕಲಾಲ, ಗೋಪಾಲ ಕಲಾಲ, ನಾಗೇಶ ಪ್ರಭುಕರ, ಬಸವರಾಜ ತೋರಲೆಕರ, ದೀಪಕ ಕಲಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts