More

    ಹಸಿದವರಿಗೆ ಉಚಿತ ಊಟದ ಪಾಕೆಟ್ ವಿತರಣೆ

    ಮುದ್ದೇಬಿಹಾಳ: ರಾಜ್ಯ ಸರ್ಕಾರ ಮೇ 10 ರಿಂದ 24ರ ವರೆಗೆ ಎರಡು ವಾರಗಳವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆ ಪಟ್ಟಣದಲ್ಲಿ ಸಂಚರಿಸುವ ನಿರ್ಗತಿಕರು, ಬಡವರು, ಭಿಕ್ಷುಕರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಊಟದ ಪಾಕೆಟ್ ನೀಡುವ ಕಾರ್ಯಕ್ರಮಕ್ಕೆ ಮಹೆಬೂಬ ನಗರದ ಮಕ್ಕಾ ಮಸೀದಿ ಕಮಿಟಿ ಮುಂದಾಗಿದೆ.

    ಪಟ್ಟಣದ ಇಂದಿರಾ ವೃತ್ತದಲ್ಲಿ ಈ ಮಾನವೀಯ ಕಾರ್ಯಕ್ಕೆ ಚಾಲನೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂ.ಬಿ. ನಾವದಗಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ರಂಜಾನ್ ಹಬ್ಬದ ಸಮಯದಲ್ಲಿ ತಾವು ಉಪವಾಸವಿದ್ದರೂ ಹಸಿದವರ ಹೊಟ್ಟೆ ತುಂಬಿಸಲು ಈ ಕಾರ್ಯಕ್ಕೆ ಮುಂದಾಗಿರುವ ಕಮಿಟಿಯವ ಕಾರ್ಯ ಶ್ಲಾಘಿಸುವುದಾಗಿ ತಿಳಿಸಿದರು.

    ಪುರಸಭೆ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ಮಾತನಾಡಿ, ಲಾಕ್‌ಡೌನ್ ಅವಧಿ ಅಂತ್ಯದವರೆಗೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಮತ್ತು ಸಂಜೆ 6.30 ರಿಂದ 8 ಗಂಟೆಯವರೆಗೆ ಆಹಾರ ಪೊಟ್ಟಣ ಮಾನವೀಯ ದೃಷ್ಟಿಯಿಂದ ನಮ್ಮ ಕಮಿಟಿಯಿಂದ ನೀಡಲಾಗುವುದು ಎಂದರು.

    ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಮೌಲಾನಾ ಅಪ್ತಾಬ್ ಆಲಂ, ಹೆಸ್ಕಾಂ-659 ಪ್ರಾಥಮಿಕ ಸಮಿತಿ ಅಧ್ಯಕ್ಷ ಶಿವಪ್ಪ ಆರೇಶಂಕರ, ಹುಸೇನ್ ನಾಯ್ಕೋಡಿ, ಪುರಸಭೆ ಸದಸ್ಯ ಶಿವಪ್ಪ ಶಿವಪೂರ, ಅಲ್ಲಾಭಕ್ಷ ಢವಳಗಿ, ಪುರಸಭೆ ಮಾಜಿ ಸದಸ್ಯರಾದ ಸಿದ್ದಲಿಂಗಯ್ಯ ಕಲ್ಯಾಣಮಠ, ರಾಜು ಹೊನ್ನುಟಗಿ, ಅಂಜುಮನ್ ಕಮೀಟಿ ಸದಸ್ಯ ಜಬ್ಬಾರ್ ಗೋಲಂದಾಜ, ಬಾಬು ಗೊಳಸಂಗಿ, ದಾವಲ್ ಗೊಳಸಂಗಿ, ಅಜೀಜ ನಾಯ್ಕೋಡಿ, ಸಾಹೇಬಲಾಲ್ ದೇಸಾಯಿ, ಮುರ್ತುಜ್ ನಾಗರಾಳ, ದಾವಲ್ ಕಾನ್ಯಾಳ, ರಾಬಿನ್ ಮುಲ್ಲಾ ಇದ್ದರು.

    ಸಹಾಯವಾಣಿಗೆ ಕರೆ ಮಾಡಿ
    ಮುದ್ದೇಬಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರು, ಅಸಹಾಯಕರು ಕಂಡರೆ ಅಂತವರಿಗೆ ಆಹಾರ ಪೂರೈಸಲು ಕಮಿಟಿ ಸದಸ್ಯರು ಸಿದ್ಧರಾಗಿದ್ದು ಮೊ: 9902219466, 9845442289 ಈ ಸಹಾಯವಾಣಿಗೆ ಕರೆ ಮಾಡಿದರೆ ಆಹಾರ ಪೂರೈಸಲಾಗುವುದು ಎಂದು ಮೆಕ್ಕಾ ಮಸೀದಿ ಕಮಿಟಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts